Asianet Suvarna News Asianet Suvarna News

India vs South Africa: ಮೂರನೇ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಂ ಇಂಡಿಯಾ, ಬೌಲಿಂಗ್‌ ಆಯ್ಕೆ!

* ಇಂದು ಭಾರತ-ದಕ್ಷಿಣ ಆಫ್ರಿಕಾ 3ನೇ ಏಕದಿನ
*ಟಾಸ ಗೆದ್ದು ಬೌಲಿಂಗ ಆಯ್ಕೆ ಮಾಡಿದ ಟೀಂ ಇಂಡಿಯಾ
* ವೈಟ್‌ವಾಶ್‌ ಮುಖಭಂಗ ತಪ್ಪಿಸಿಕೊಳ್ಳುತ್ತಾ ಭಾರತ?

Ind vs SA India Won the Toss and elected to bowl first against south africa mnj
Author
Bengaluru, First Published Jan 23, 2022, 1:34 PM IST | Last Updated Jan 23, 2022, 1:59 PM IST

ಕೇಪ್‌ಟೌನ್‌(ಜ.23): ಭಾರತ ಹಾಗೂ ದಕ್ಷಿಣ ಆಫ್ರಿಕಾ(India vs South Africa) ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ (Team India) ನಾಯಕ ಕೆ.ಎಲ್. ರಾಹುಲ್ (KL Rahul) ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈಗಾಗಲೇ ಸರಣಿ ಕಳೆದುಕೊಂಡು ಮುಖಭಂಗಕ್ಕೀಡಾಗಿರುವ ಟೀಂ ಇಂಡಿಯಾ (Team India), ಏಕದಿನ ಸರಣಿಯ 3ನೇ ಹಾಗೂ ಕೊನೆ ಪಂದ್ಯದಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಮರ್ಯಾದೆ ಉಳಿಸಿಕೊಳ್ಳುವ ಜೊತೆಗೆ ವೈಟ್‌ವಾಶ್‌ (White Wash) ತಪ್ಪಿಸಿಕೊಳ್ಳಲು ಹೋರಾಡಲಿದೆ. 

ಟೆಸ್ಟ್‌ ಸರಣಿ ಸೋತ ಒಂದು ವಾರದ ಅಂತರದಲ್ಲಿ ಏಕದಿನ ಸರಣಿಯಲ್ಲೂ ಸೋಲುಂಡಿರುವ ಕೆ.ಎಲ್‌.ರಾಹುಲ್‌ (KL Rahul) ಬಳಗ ಗೆಲುವಿನೊಂದಿಗೆ ದ.ಆಫ್ರಿಕಾ ಪ್ರವಾಸ ಕೊನೆಗೊಳಿಸಲು ಎದುರು ನೋಡುತ್ತಿದೆ. ಇನ್ನು, ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಆತಿಥೇಯ ಆಫ್ರಿಕಾ ತಂಡ ಕ್ಲೀನ್‌ ಸ್ವೀಪ್‌ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದೆ. 2018ರಲ್ಲಿ ತವರಿನಲ್ಲಿ ನಡೆದ ಸರಣಿಯಲ್ಲಿ ಸೋತಿದ್ದ ದ.ಆಫ್ರಿಕಾ, ಈ ಬಾರಿ 3-0ಯಲ್ಲಿ ಗೆಲ್ಲಲು ಕಾಯುತ್ತಿದೆ. ಭಾರತಕ್ಕೆ ಮೊದಲ ಪಂದ್ಯದಲ್ಲಿ ಬ್ಯಾಟರ್‌ಗಳು ಕೈಕೊಟ್ಟರೆ, 2ನೇ ಪಂದ್ಯದಲ್ಲಿ ಬೌಲರ್‌ಗಳು ವೈಫಲ್ಯ ಕಂಡಿದ್ದರು. ಈ ಪಂದ್ಯದಲ್ಲಿ ಭಾರತ ಮೂರೂ ವಿಭಾಗಗಳಲ್ಲಿ ಸುಧಾರಿತ ಪ್ರದರ್ಶನ ತೋರಲು ಎದುರು ನೋಡುತ್ತಿದೆ.

ಇದನ್ನೂ ಓದಿ: West Indies Tour Of India : ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆ ಮಾಡಿದ ಬಿಸಿಸಿಐ!

ಆಟಗಾರರ ಪಟ್ಟಿ

ಭಾರತ: ಕೆಎಲ್ ರಾಹುಲ್(ಸಿ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಿಷಭ್ ಪಂತ್(W), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಜಯಂತ್ ಯಾದವ್, ಪ್ರಸಿದ್ಧ್ ಕೃಷ್ಣ, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಾಲ್

ದಕ್ಷಿಣ.ಆಫ್ರಿಕಾ: ಮಲಾನ್, ಕ್ವಿಂಟನ್ ಡಿ ಕಾಕ್(W), ಟೆಂಬಾ ಬವುಮಾ (C),  ಮಾರ್ಕ್ರಾಮ್, ಡುಸ್ಸೆನ್, ಡೇವಿಡ್ ಮಿಲ್ಲರ್, ಆಂಡಿಲ್ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ಡ್ವೈನ್ ಪ್ರಿಟೋರಿಯಸ್, ಲುಂಗಿ ಎನ್‌ಗಿಡಿ, ಸಿಸಂದಾ ಮಗಾಲಾ

ಇದನ್ನೂ ಓದಿIPL Auction 2022: ಐಪಿಎಲ್‌ ಮೆಗಾ ಹರಾಜಿಗೂ ಮುನ್ನ ಯಾವ ಫ್ರಾಂಚೈಸಿ ಬಳಿ ಎಷ್ಟು ಹಣ ಉಳಿದಿದೆ..?

ನಾಯಕರ ಮಾತು

ಕೆ ಎಲ್‌ ರಾಹುಲ್‌ : "ಉತ್ತಮವಾದ ವಿಕೆಟ್‌ನಂತೆ ತೋರುತ್ತಿದೆ, ನನ್ನ ಪ್ರಕಾರ ಸ್ವಲ್ಪ ಜಿಗುಟಾದಂತಿದೆ (sticky ). ನಾವು ಕೆಲವು ಆರಂಭಿಕ ವಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸುತ್ತೇವೆ. ನಾವು ಪ್ರತಿ ಆಟವನ್ನು ಗೌರವಿಸುತ್ತೇವೆ, ನಾವು ಉತ್ತಮ ಪ್ರದರ್ಶನವನ್ನು ನೀಡಲು ಬಯಸುತ್ತೇವೆ. ಹುಡುಗರು ತಮ್ಮನ್ನು ತಾವು ಪ್ರೇರೇಪಿಸುತ್ತಾರೆ. ಶಕ್ತಿ ಅದ್ಭುತವಾಗಿದೆ. ಪಂದ್ಯ ಗೆಲ್ಲಲು ನಮಗೆ ಇನ್ನೊಂದು ಅವಕಾಶ. ಮೊದಲ ಎರಡು ಪಂದ್ಯಗಳಲ್ಲಿ ಏನಾಯಿತು ಎಂಬುದನ್ನು ನಾವು ಮರೆತಿದ್ದೇವೆ. ನಮ್ಮಲ್ಲಿ ಕೆಲವು ಯೋಜನೆಗಳಿವೆ. ನಾವು ಸರಿಪಡಿಸಬೇಕಾದ ಕೆಲವು ವಿಷಯಗಳಿವೆ." ಎಂದು ಟೀಂ ಇಂಡಿಯಾ ನಾಯಕ ರಾಹುಲ್‌ ಹೇಳಿದ್ದಾರೆ.

ಬವುಮಾ: "ನಮ್ಮ ತಂಡದಲ್ಲಿ ಒಂದೇ ಒಂದು ಬದಲಾವಣೆ.  ಶಮ್ಸಿ ಬದಲಾಗಿ ಡ್ವೈನ್ (ಪ್ರಿಟೋರಿಯಸ್). ನಾವು ನಮ್ಮ ಗೆಲುವಿನ ಓಟವನ್ನು ಬಿಡಲು ಬಯಸುವುದಿಲ್ಲ, ನಾವು ಯಾವಾಗಲೂ ನಮ್ಮ ಅತ್ಯುತ್ತಮ ತಂಡವನ್ನು ಆಡಲು ಬಯಸುತ್ತೇವೆ. ಇದು (ವಿಭಿನ್ನ ಸ್ಥಳ) ವಿಭಿನ್ನ ಸವಾಲನ್ನು ಪ್ರಸ್ತುತಪಡಿಸುತ್ತದೆ. 300 ಕ್ಕಿಂತ ಹೆಚ್ಚಿನ ರನ್ ಸ್ಪರ್ಧಾತ್ಮಕವಾಗಿರುತ್ತದೆ." ಎಂದು ದಕ್ಷಿಣ ಆಪ್ರಿಕಾ  ನಾಯಕ ಬವುಮಾ ಹೇಳಿದ್ದಾರೆ.

Latest Videos
Follow Us:
Download App:
  • android
  • ios