Asianet Suvarna News Asianet Suvarna News

West Indies Tour Of India : ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆ ಮಾಡಿದ ಬಿಸಿಸಿಐ!

ದೇಶದಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆ
ವೇಳಾಪಟ್ಟಿಯಲ್ಲಿ ಬದಲಾವಣೆ ಪ್ರಕಟಿಸಿದ ಬಿಸಿಸಿಐ
ಹೊಸ ವೇಳಾಪಟ್ಟಿಯ ಪ್ರಕಾರ ಕೇವಲ 2ನೇ ನಗರಗಳಲ್ಲಿ ನಡೆಯಲಿದೆ ಸರಣಿ
 

BCCI announce revised itinerary Ahmedabad and Kolkata to host limited overs series against West Indies san
Author
Bengaluru, First Published Jan 22, 2022, 9:57 PM IST

ಮುಂಬೈ (ಜ. 22): ದೇಶದಲ್ಲಿ ಕೋವಿಡ್-19 ಪ್ರಕರಣಗಳ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಹಾಗೂ ಮೂರು ಪಂದ್ಯಗಳ ಟಿ20 ಸರಣಿಗೆ ಪರಿಷ್ಕೃತ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ( Board of Control for Cricket in India ) ಪ್ರಕಟ ಮಾಡಿದೆ. ಅದರಂತೆ ಉಭಯ ದೇಶಗಳ ನಡುವಿನ ಸರಣಿ ಆರು ಸ್ಥಳಗಳ ಬದಲಾಗಿ ಕೇವಲ ನಾಲ್ಕು ಸ್ಥಳಗಳಲ್ಲಿ ನಡೆಯಲಿದೆ ಎಂದು ಬಿಸಿಸಿಐ (BCCI) ಪ್ರಕಟಿಸಿದೆ.

ವೆಸ್ಟ್ ಇಂಡೀಸ್‌ ವಿರುದ್ಧ ಏಕದಿನ ಪಂದ್ಯಗಳ ಸಂಪೂರ್ಣ ಸರಣಿ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ(Ahmedabad’s Narendra Modi Stadium) ನಡೆಯಲಿದ್ದರೆ, ಕೋಲ್ಕತದ ಈಡನ್ ಗಾರ್ಡನ್ಸ್ ನಲ್ಲಿ(Kolkata’s Eden Gardens)  ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಮೊದಲಿನ ವೇಳಾಪಟ್ಟಿಯ ಪ್ರಕಾರ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ದೇಸದ ಆರು ನಗರಗಳಲ್ಲಿ ನಡೆಯಬೇಕಿದ್ದವು. ಫೆಬ್ರವರಿ 6, 9 ಹಾಗೂ 12 ರಂದು ಕ್ರಮವಾಗಿ ಅಹಮದಾಬಾದ್ (Ahmedabad), ಜೈಪುರ (Jaipur) ಹಾಗೂ ಕೋಲ್ಕತದಲ್ಲಿ (Kolkata )ಏಕದಿನ ಪಂದ್ಯಗಳು ನಿಗದಿಯಾಗಿದ್ದರೆ, ಫೆಬ್ರವರಿ 15, 18 ಹಾಗೂ 20 ರಂದು ಮೂರು ಪಂದ್ಯಗಳ ಟಿ20 ಸರಣಿ ಕಟಕ್ (Cuttack), ವಿಶಾಖಪಟ್ಟಣ (Visakhapatnam) ಹಾಗೂ ತಿರುವನಂತಪುರದಲ್ಲಿ (Thiruvananthapuram )ನಿಗದಿಯಾಗಿದ್ದವು.

ಆದರೆ, ಪ್ರಸ್ತುತ ದೇಶವು ಕೋವಿಡ್-19 ನ ಮೂರನೇ ಅಲೆಯಲ್ಲಿದ್ದು, ಭಾರತದ ಸಾಂಕ್ರಾಮಿಕ ಪರಿಸ್ಥಿತಿಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, "ಬಯೋ ಸೆಕ್ಯೂರಿಟಿ ಅಪಾಯಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸರಣಿಯಲ್ಲಿ ಆರು ಸ್ಥಳಗಳ ಬದಲಾಗಿ, ಕೇವಲ ಎರಡೇ ಸ್ಥಳಗಳಿಗೆ ಸೀಮಿತಗೊಳಿಸಲು" ಮಂಡಳಿ ನಿರ್ಧಾರ ಮಾಡಿದೆ. ಇದರಿಂದಾಗಿ ತಂಡಗಳು, ಪಂದ್ಯದ ಅಧಿಕಾರಿಗಳು, ಪ್ರಸಾರಕರು ಮತ್ತುಇತರ ಅಧಿಕಾರಿಗಳ ಪ್ರಯಾಣ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ಬಿಸಿಸಿಐ ಹೇಳಿದೆ.
 


ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ ದೇಶದ ಮೂರು ಪ್ರಮುಖ ದೇಶೀಯ ಟೂರ್ನಿಗಳಾದ ರಣಜಿ ಟ್ರೋಫಿ (Ranji Trophy), ಕರ್ನಲ್ ಸಿ ಕೆ ನಾಯ್ಡು ಟ್ರೋಫಿ (Col C K Nayudu Trophy) ಮತ್ತು ಸೀನಿಯರ್ ವುಮೆನ್ಸ್ ಟಿ 20 ಲೀಗ್ ಅನ್ನು (Senior Women’s T20 League) ಮುಂದೂಡಲು ನಿರ್ಧಾರ ಮಾಡಿತ್ತು.

IPL 2022: ನಿಗದಿಗಿಂತ ಒಂದು ವಾರ ಮುಂಚಿತವಾಗಿ ಐಪಿಎಲ್ ಟೂರ್ನಿ ಆರಂಭ..!
ಇನ್ನೊಂದೆಡೆ ವೆಸ್ಟ್ ಇಂಡೀಸ್ ತಂಡವು ಫೆಬ್ರವರಿ 4 ರಂದು ತನ್ನ ಅಭ್ಯಾಸವನ್ನು ಆರಂಭಿಸುವ ಮುನ್ನ ಫೆ. 1 ರಿಂದ ಅಹಮದಾಬಾದ್ ನಲ್ಲಿ ಮೂರು ದಿನಗಳ ಕ್ವಾರಂಟೈನ್ ಗೆ ಒಳಗಾಗಲಿದೆ. ಇನ್ನೊಂದೆಡೆ ಐಪಿಎಲ್ ಹರಾಜು ಕಾರ್ಯಕ್ರಮಕ್ಕೆ ಅಡ್ಡಿಯಾಗದೇ ಇರುವ ನಿಟ್ಟಿನಲ್ಲಿಯೂ ಬಿಸಿಸಿಐ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ಬೆಂಗಳೂರಿನಲ್ಲಿ ಐಪಿಎಲ್ ಹರಾಜು ಕಾರ್ಯಕ್ರಮ ಫೆಬ್ರವರಿ 12 ಹಾಗೂ 13 ರಂದು ನಡೆಯಲಿದ್ದು ಈ ಕಾರ್ಯಕ್ರಮದ ನಡುವೆ ಪಂದ್ಯಗಳು ಇರದಂತೆ ಎಚ್ಚರಿಕೆ ವಹಿಸಿದೆ.

IPL Auction 2022: ಐಪಿಎಲ್‌ ಮೆಗಾ ಹರಾಜಿಗೂ ಮುನ್ನ ಯಾವ ಫ್ರಾಂಚೈಸಿ ಬಳಿ ಎಷ್ಟು ಹಣ ಉಳಿದಿದೆ..?
ಜನವರಿ 22 ರಂದು, ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಉಲ್ಬಣದಿಂದಾಗಿ ಸ್ಥಳ ಬದಲಾವಣೆಯ ಊಹಾಪೋಹಗಳ ಮಧ್ಯೆ ಐಪಿಎಲ್ ಮೆಗಾ ಹರಾಜನ್ನು ಮೂಲ ಯೋಜನೆಗಳ ಪ್ರಕಾರ ನಡೆಸಲಾಗುವುದು ಎಂದು ಬಿಸಿಸಿಐ ದೃಢಪಡಿಸಿತ್ತು. ಆದರೆ, ಐಪಿಎಲ್ ಟೂರ್ನಿಯು ನಿಗದಿತ ದಿನಾಂಕಕ್ಕಿಂತ ಒಂದು ವಾರ ಮುಂಚಿತವಾಗಿ ಆರಂಭವಾಗುವ ಸಾಧ್ಯತೆ ಇದೆ. ಈ ಮೊದಲು ಐಪಿಎಲ್ ಟೂರ್ನಿಯು ಏಪ್ರಿಲ್ 2 ರಿಂದ ಆರಂಭವಾಗಲಿದೆ ಎನ್ನಲಾಗಿತ್ತಾದರೂ ಹೊಸ ಪ್ರಕಟಣೆಯ ಪ್ರಕಾರ ಮಾರ್ಚ್ 27 ರಿಂದ ಐಪಿಎಲ್ ಆರಂಭವಾಗಲಿದೆ.

Follow Us:
Download App:
  • android
  • ios