2ನೇ ಟಿ20 ಪಂದ್ಯದಲ್ಲಿ ಅಬ್ಬರಿಸಲು ವಿಫಲವಾದ ಟೀಂ ಇಂಡಿಯಾ 40 ರನ್ ಸಿಡಿಸಿದ ಶ್ರೇಯಸ್ ಅಯ್ಯರ್, 34 ರನ್ ಸಿಡಿಸಿದ ಕಿಸಾನ್ ಸೌತ್ ಆಫ್ರಿಕಾ 149 ರನ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ

ಕಟಕ್(ಜೂ.12): ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಅಬ್ಬರಿಸಲು ವಿಫಲವಾಗಿದೆ. ಪರಿಣಾಮ ಸೌತ್ ಆಫ್ರಿಕಾಗೆ 149 ರನ್ ಟಾರ್ಗೆಟ್ ನೀಡಲಾಗಿದೆ. 

ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರುತುರಾಜ್ ಗಾಯಕ್ವಾಡ್ ಕೇವಲ 1 ರನ್ ಸಿಡಿಸಿ ಔಟಾದರು. ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಜೊತೆಯಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತು.

ಇಶಾನ್ ಕಿಶನ್ 34 ರನ್ ಸಿಡಿಸಿ ಔಟಾದರು. ಇತ್ತ ನಾಯಕ ರಿಷಬ್ ಪಂತ್ ಕೇವಲ 5 ರನ್ ಸಿಡಿಸಿ ಔಟಾದರು. ಪಂತ್ ವಿಕೆಟ್ ಪತನದೊಂದಿಗೆ ಭಾರತದ ಕುಸಿತ ಆರಂಭಗೊಂಡಿತು. ಹಾರ್ದಿಕ್ ಪಾಂಡ್ಯ 9 ರನ್ ಸಿಡಿಸಿ ಔಟಾದರು. ಶ್ರೇಯಸ್ ಅಯ್ಯರ್ 40 ರನ್ ಸಿಡಿಸಿ ಔಟಾದರು.

Ind vs SA: ಟಿ20 ಸರಣಿಯಿಂದ ಹೊರಬಿದ್ದ ಬೆನ್ನಲ್ಲೇ ಭಾವನಾತ್ಮಕ ಸಂದೇಶ ರವಾನಿಸಿದ ಕೆ ಎಲ್ ರಾಹುಲ್

ಅಕ್ಸರ್ ಪಟೇಲ್ 10 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಹಾಗೂ ಹರ್ಷಲ್ ಪಟೇಲ್ ಹೋರಾಟದಿಂದ ಭಾರತ ಅತ್ಯಲ್ಪ ಮೊತ್ತದಿಂದ ಪಾರಾಯಿತು. ದಿನೇಶ್ ಕಾರ್ತಿಕ್ 21 ಎಸೆತದಲ್ಲಿ ಅಜೇಯ 30 ರನ್ ಸಿಡಿಸಿದರೆ, ಹರ್ಷಲ್ ಪಟೇಲ್ ಅಜೇಯ 12 ರನ್ ಸಿಡಿಸಿದರು. ಈ ಮೂಲಕ ಭಾರತ 6 ವಿಕೆಟ್ ನಷ್ಟಕ್ಕೆ 148 ರನ್ ಸಿಡಿಸಿದೆ.

ಬಾರಬತಿ ಕ್ರೀಡಾಂಗಣದಲ್ಲಿ ಈವರೆಗೆ ಕೇವಲ 2 ಅಂ.ರಾ. ಟಿ20 ಪಂದ್ಯಗಳು ನಡೆದಿವೆ. 2015ರಲ್ಲಿ ನಡೆದಿದ್ದ ಭಾರತದ ವಿರುದ್ಧದ ಪಂದ್ಯದಲ್ಲಿ ದ.ಆಫ್ರಿಕಾ ಗೆದ್ದಿತ್ತು. ಈ ಪಂದ್ಯಕ್ಕೆ ಹೊಸ ಪಿಚ್‌ ಬಳಕೆಯಾಗಲಿದ್ದು, ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ಒದಗಿಸುವ ಸಾಧ್ಯತೆ ಇದೆ. ಇಲ್ಲಿನ ಪಿಚ್‌ಗಳು ನಿಧಾನವಾಗಿರುವುದರಿಂದ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಬಹುದು. ರಾತ್ರಿ ವೇಳೆ ಇಬ್ಬನಿ ಬೀಳುವ ಕಾರಣ ಸೆಕೆಂಡ್ ಬೌಲಿಂಗ್ ಕಷ್ಟವಾಗಲಿದೆ.

ಐಪಿಎಲ್‌ನಲ್ಲಿ ಮಿಂಚಿದ ಈ ಅನ್‌ಕ್ಯಾಪ್ ಅಟಗಾರನ ಗುಣಗಾನ ಮಾಡಿದ ಸೆಹ್ವಾಗ್..!

ಐಪಿಎಲ್‌ ಆಡಿದ್ದ ಅನುಭವ ಹೊಂದಿರುವ ಡೇವಿಡ್‌ ಮಿಲ್ಲರ್‌, ವ್ಯಾನ್‌ ಡೆರ್‌ ಡುಸೆನ್‌ ಅಬ್ಬರಿಸಿದ ಮೂಲಕ ಮೊದಲ ಪಂದ್ಯದಲ್ಲಿ ಭಾರತಕ್ಕೆ ಸೋಲುಣಿಸಿದರು.ಕ್ವಿಂಟನ್‌ ಡಿ ಕಾಕ್‌, ತೆಂಬ ಬವುಮ, ಪ್ರಿಟೋರಿಯಸ್‌ ಕೂಡಾ ಭಾರತೀಯ ಬೌಲರ್‌ಗಳಿಗೆ ದುಸ್ವಪ್ನವಾಗಿ ಕಾಡಬಹುದು. ಆದರೆ ಮೊದಲ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ್ದ ಹರಿಣಗಳ ಬೌಲಿಂಗ್‌ ಪಡೆ ಈ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಲು ಎದುರು ನೋಡುತ್ತಿದೆ. ವೇಗಿಗಳಾದ ಏನ್ರಿಚ್‌ ನೋಕಿಯಾ, ಕಗಿಸೊ ರಬಾಡ ಜೊತೆ ಸ್ಪಿನ್‌ ಜೋಡಿ ತಬ್ರೇಜ್‌ ಶಮ್ಸಿ ಹಾಗೂ ಕೇಶವ್‌ ಮಹಾರಾಜ್‌ ಟೀಂ ಇಂಡಿಯಾ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಎದುರು ನೋಡುತ್ತಿದ್ದಾರೆ.

ರೋಹಿತ್‌, ಕೊಹ್ಲಿ, ಬೂಮ್ರಾ, ಶಮಿ ಸೇರಿದಂತೆ ಹಿರಿಯ ಆಟಗಾರರ ಗೈರು, ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದ ಕೆ.ಎಲ್‌.ರಾಹುಲ್‌ ಗಾಯಗೊಂಡು ಹೊರಬಿದ್ದಿದ್ದು ರಿಷಬ್‌ ಪಂತ್‌ಗೆ ನಿಜವಾದ ಸವಾಲಾಗಿ ಪರಿಣಮಿಸಿದೆ. ಐಪಿಎಲ್‌ನಲ್ಲಿ ಮಿಂಚಿದ್ದ ಯುವ ಆಟಗಾರರೊಂದಿಗೆ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರೂ, ಯುವ ಬೌಲರ್‌ಗಳು ಕೈಕೊಟ್ಟಪರಿಣಾಮ ಮೊದಲ ಪಂದ್ಯದಲ್ಲಿ ಪರಾಭವಗೊಂಡಿತ್ತು.