IND vs NZ ಬ್ಯಾಟಿಂಗ್ ಇಳಿದ ಭಾರತಕ್ಕೆ ಆರಂಭದಲ್ಲೇ ಶಾಕ್, ಮೊದಲ ವಿಕೆಟ್ ಪತನ!
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಅಂತಿಮ ಟಿ20 ಪಂದ್ಯ ಆರಂಭದಲ್ಲೇ ರೋಚಕ ಹಂತ ತಲುಪಿದೆ. ಸರಣಿ ಗೆಲುವಿನ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಭಾರತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಅಹಮ್ಮದಾಬಾದ್(ಫೆ.01); ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 3ನೇ ಹಾಗೂ ಅಂತಿಮ ಟಿ20 ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇಶಾನ್ ಕಿಶನ್ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದ್ದಾರೆ. ಭಾರತ 7 ರನ್ ಸಿಡಿಸುವಷ್ಟರಲ್ಲೇ ವಿಕೆಟ್ ಕಳೆದುಕೊಂಡಿದೆ. ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದದ್ದಾಗಿದೆ. ಈಗಾಗಲೇ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದೆ. ಹೀಗಾಗಿ ಇಂದಿನ ಪಂದ್ಯ ಗೆದ್ದ ತಂಡ ಸರಣಿ ಕೈವಶ ಮಾಡಲಿದೆ.
3ನೇ ಟಿ20 ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇಷ್ಟೇ ಅಲ್ಲ ಒಂದು ಬದಲಾವಣೆ ಮಾಡಿದೆ. ಅಹಮ್ಮದಾಬಾದ್ ವಿಕೆಟ್ ವೇಗಿಗಳಿಗೆ ಕೊಂಚ ನೆರವು ನೀಡುವ ಕಾರಣ ಯುಜುವೇಂದ್ರ ಚಹಾಲ್ ಬದಲು ವೇಗಿ ಉಮ್ರಾನ್ ಮಲಿಕ್‌ಗೆ ಸ್ಥಾನ ನೀಡಲಾಗಿದೆ. ಆದರೆ ಬ್ಯಾಟಿಂಗ್ ಇಳಿದ ಭಾರತ ಮೊದಲ ವಿಕೆಟ್ ಕಳೆದುಕೊಂಡಿರುವುದು ನ್ಯೂಜಿಲೆಂಡ್ ಸ್ಪಿನ್ ದಾಳಿಗೆ ಅನ್ನೋದು ಮರೆಯುವಂತಿಲ್ಲ.
ಇಶಾನ್ ಕಿಶನ್ ವಿಕೆಟ್ ಪತನದ ಬಳಿಕ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡಿತು ಶುಭಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ ಹೋರಾಟದಿಂದ ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ರಾಹುಲ್ ತ್ರಿಪಾಠಿ 44 ರನ್ ಸಿಡಿಸಿ ಔಟಾದರು. ಆದರೆ ಶುಭಮನ್ ಗಿಲ್ ದಿಟ್ಟ ಹೋರಾಟ ನೀಡಿ ಸೆಂಚುರಿ ಸಿಡಿಸಿದರು. ಈ ಮೂಲಕ ಏಕದಿನ, ಟೆಸ್ಟ್ ಹಾಗೂ ಟಿ20 ಮಾದರಿಯಲ್ಲಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ.
ಭಾರತ ಪ್ಲೇಯಿಂಗ್ 11
ಶುಭಮನ್ ಗಿಲ್, ಇಶಾನ್ ಕಿಶನ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡ, ವಾಶಿಂಗ್ಟನ್ ಸುಂದರ್, ಶಿವಂ ಮಾವಿ, ಕುಲ್ದೀಪ್ ಯಾದವ್, ಉಮ್ರಾನ್ ಮಲಿಕ್, ಅರ್ಶದೀಪ್ ಸಿಂಗ್,
ನ್ಯೂಜಿಲೆಂಡ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಜಾಕೋಬ್ ಡಫ್ಫಿ ಬದಲು ಬೆನ್ ಲಿಸ್ಟರ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ನ್ಯೂಜಿಲೆಂಡ್ ಪ್ಲೇಯಿಂಗ್ 11
ಫಿನ್ ಅಲೆನ್, ಡೆವೋನ್ ಕೊನ್ವೇ, ಮಾರ್ಕ್ ಚಾಪ್‌ಮ್ಯಾನ್, ಗ್ಲೆನ್ ಫಿಲಿಪ್ಸ್, ಡರಿಲ್ ಮಿಚೆಲ್, ಮಿಚೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಐಶ್ ಸೋಧಿ, ಲ್ಯೂಕಿ ಫರ್ಗ್ಯೂಸನ್, ಬೆನ್ ಲಿಸ್ಟರ್, ಬ್ಲೈರ್ ಟಿಕ್ನರ್