ಶ್ರೀಲಂಕಾ ವಿರುದ್ದದ ಸರಣಿ ಬಳಿಕ ಇದೀಗ ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿಯನ್ನೂ ಭಾರತ ಕೈವಶ ಮಾಡಿದೆ. 2ನೇ ಏಕದಿನ ಪಂದ್ಯದಲ್ಲಿ ಆಲ್ರೌಂಡರ್ ಆಟ ಪ್ರದರ್ಶಿಸಿದ ಟೀಂ ಇಂಡಿಯಾ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ.

ರಾಯ್‌ಪುರ(ಜ.21): ನ್ಯೂಜಿಲೆಂಡ್ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ಭಾರತ ವಿಕೆಟ್ ಗೆಲುವು ದಾಖಲಿಸಿದೆ. ಬೌಲಿಂಗ್‌ನಲ್ಲಿ ಆರ್ಭಟಿಸಿದ ಟೀಂ ಇಂಡಿಯಾ ಕೇವಲ 109 ರನ್ ಟಾರ್ಗೆಟ್ ಪಡೆದಿತ್ತು. ಈ ಗುರಿಯನ್ನು ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ದಿಟ್ಟ ಹೋರಾಟ ಮೂಲಕ ಚೇಸ್ ಮಾಡಿದರು. 8 ವಿಕೆಟ್ ನಷ್ಟಕ್ಕೆ ಭಾರತ 20.1 ಓವರ್‌ಗಳಲ್ಲಿ ಗುರಿ ತಲುಪಿತು. ಇದರೊಂದಿಗೆ ಆರಂಭಿಕ 2 ಪಂದ್ಯ ಗೆದ್ದೂ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಏಕದಿನ ಸರಣಿ ಗೆದ್ದುಕೊಂಡಿದೆ.

ನ್ಯೂಜಿಲೆಂಡ್ ವಿರುದ್ಧ ಮಾರಕ ದಾಳಿ ಸಂಘಟಿಸಿದ ಭಾರತ, ಕಿವೀಸ್ ಬ್ಯಾಟ್ಸ್‌ಮನ್‌ಗಳನ್ನು ಅಬ್ಬರಿಸಲು ಬಿಡಲಿಲ್ಲ. ರನ್ ಗಳಿಸುವ ಬದಲು ವಿಕೆಟ್ ಉಳಿಸಿಕೊಳ್ಳುವುದೇ ನ್ಯೂಜಿಲೆಂಡ್‌ಗೆ ಸವಾಲಾಗಿ ಪರಿಣಮಿಸಿತು. ಹೀಗಾಗಿ ಕೇವಲ 108 ರನ್‌ಗೆ ಆಲೌಟ್ ಆಗಿತ್ತು. ಸುಲಭ ಗುರಿ ಪಡೆದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಶುಬ್‌ಮನ್ ಗಿಲ್ ಉತ್ತಮ ಆರಂಭ ನೀಡಿದರು.

ಟಾಸ್‌ನಲ್ಲಿ ಫಜೀತಿ, ತಂಡದ ನಿರ್ಧಾರ ತಿಳಿಸಲು ಪರದಾಡಿದ ರೋಹಿತ್!

ಬೌಂಡರಿ ಸಿಕ್ಸರ್ ಮೂಲಕ ಅಬ್ಬರಿಸಿದ ರೋಹಿತ್ ಶರ್ಮಾ 47 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ರೋಹಿತ್ ಶರ್ಮಾಗೆ ಶಬ್‌ಮನ್ ಗಿಲ್ ಉತ್ತಮ ಸಾಥ್ ನೀಡಿದರು. ಆದರೆ ರೋಹಿತ್ ಶರ್ಮಾ 51 ರನ್ ಸಿಡಿಸಿ ನಿರ್ಗಮಿಸಿದರು. ರೋಹಿತ್ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಿತ್ತು. 

ರೋಹಿತ್ ಬಳಿಕ ವಿರಾಟ್ ಕೊಹ್ಲಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಸ್ಟಂಪ್ ಮೂಲಕ ವಿಕೆಟ್ ಕೈಚೆಲ್ಲಿದರು. ವಿರಾಟ್ ಕೊಹ್ಲಿ 11 ರನ್ ಸಿಡಿಸಿ ಔಟಾದರು. ಗಿಲ್ ಹಾಗೂ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಮೂಲಕ ಭಾರತ 20.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು. 

ಶುಭಮನ್ ಗಿಲ್ ಅಜೇಯ 40 ರನ್ ಸಿಡಿಸಿದರೆ, ಇಶಾನ್ ಕಿಶನ್ ಅಜೇಯ 8 ರನ್ ಸಿಡಿಸಿದರು. ಭಾರತ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತು. 

IND vs NZ ನ್ಯೂಜಿಲೆಂಡ್‌ಗೆ ಟೀಂ ಇಂಡಿಯಾ ವೇಗಿಗಳ ಶಾಕ್, 108 ರನ್‌ಗೆ ಆಲೌಟ್!

ನ್ಯೂಜಿಲೆಂಡ್ ಇನ್ನಿಂಗ್ಸ್
ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ರನ್‌ಗಾಗಿ ಪರದಾಡಿತು. ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ನ್ಯೂಜಿಲೆಂಡ್ ತತ್ತರಿಸಿತು. ಫಿನ್ ಅಲೆನ್, ಕಾನ್ವೆ, ಹೆನ್ರ ನಿಕೋಲಸ್, ಡರಿಲ್ ಮಿಚೆಲ್ ನಾಯಕ ಟಾಮ್ ಲಾಥಮ್ ಹೋರಾಟವನ್ನೇ ನೀಡಲಿಲ್ಲ. ಇದಕ್ಕೆ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಸೇರಿದಂತೆ ಟೀಂ ಇಂಡಿಯಾ ಬೌಲರ್‌ಗಳು ಅವಕಾಶ ನೀಡಿಲ್ಲ. ಇನ್ನು ಗ್ಲೆನ್ ಪಿಲಿಪ್ಸ್ ಹಾಗೂ ಮಿಚೆಲ್ ಬ್ರೇಸ್‌ವೆಲ್ ಹೋರಾಟ ನ್ಯೂಜಿಲೆಂಡ್ ತಂಡವನ್ನು ಉಸಿರಾಡಿಸಿತು. ಇತ್ತ ಮಿಚೆಲ್ ಸ್ಯಾಂಟ್ನರ್ ಕೂಡ ಸಾಥ್ ನೀಡಿದರು. ಪಿಲಿಪ್ಸ್ 36 ರನ್ ಕಾಣಿಕೆ ನೀಡಿದರೆ, ಬ್ರೇಸ್‌ವೆಲ್ 22 ರನ್ ಸಿಡಿಸಿದರು. ಇತ್ತ ಸ್ಯಾಂಟ್ನರ್ 27 ರನ್ ಕಾಣಿಕೆ ನೀಡಿದರು. ಲ್ಯೂಕಿ ಫರ್ಗ್ಯೂಸನ್ ಹಾಗೂ ಟಿಕ್ನರ್ ಹೋರಾಟ ನೀಡಲಿಲ್ಲ. ಹೀಗಾಗಿ ನ್ಯೂಜಿಲೆಂಡ್ 34.3 ಓವರ್‌ಗಳಲ್ಲಿ 108ರನ್ ಸಿಡಿಸಿ ಆಲೌಟ್ ಆಯಿತು. ಈ ಸುಲಭ ಮೊತ್ತವನ್ನು ಭಾರತ 20.1 ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಿತು.