Asianet Suvarna News Asianet Suvarna News

Ind vs NZ: ಸೂರ್ಯನ ಆಟಕ್ಕೆ ಕರಗಿಹೋದ ಕೀವಿಸ್, ಗೆದ್ದು ಬೀಗಿದ ಭಾರತ

* ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದ ಭಾರತ
* ಟಿಟ್ವೆಂಟಿ ಸರಣಿಯಲ್ಲಿ ಶರ್ಮಾ ಪಡೆಗೆ ಮುನ್ನಡೆ
* ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದುಕೊಂಡಿದ್ದಾರೆ
* ರಾಹುಲ್ ದ್ರಾವಿಡ್ ಗೆ  ಗೆಲುವಿನ ಕೊಡುಗೆ 

Ind vs NZ India India beat New Zealand by 5 wickets, take 1-0 lead Jaipur mah
Author
Bengaluru, First Published Nov 17, 2021, 11:15 PM IST
  • Facebook
  • Twitter
  • Whatsapp

ಜೈಪುರ(ನ.17): ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ತಂಡಗಳ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದರು. ಚೇಸಿಂಗ್ ಗೆ ಇಳಿದ ಭಾರತ  ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಕೊನೆ ಹಂತದಲ್ಲಿ ವಿಕೆಟ್ ಗಳನ್ನು ಕಳೆದುಕೊಂಡು ಪಂದ್ಯ ರೋಚಕ ಘಟ್ಟಕ್ಕೆ ತಲುಪಿತ್ತು. ಆದರೆ ಕೊನೆಗೂ ಜಯ ನಮ್ಮದಾಯಿತು.

 ಮಾರ್ಟಿನ್‌ ಗಪ್ಟಿಲ್‌ ಹಾಗೂ ಮಾರ್ಕ್ ಚಾಪ್ಮನ್ ಆಕರ್ಷಕ ಬ್ಯಾಟಿಂಗ್  ನೆರವಿನಿಂದ ನ್ಯೂಜಿಲೆಂಡ್ (New Zealand) ತಂಡ 6 ವಿಕೆಟ್ ಕಳೆದುಕೊಂಡು 164 ರನ್‌ ಬಾರಿಸಿದ್ದು, ಭಾರತಕ್ಕೆ ಗೆಲ್ಲಲು 165 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು.

ಆರಂಭದಿಂದಲೂ ಅಬ್ಬರಿಸಿದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಜೋಡಿ ಭಾರತದ ಜಯವನ್ನು ಖಾತ್ರಿ ಮಾಡಿ ನಡೆದರು. ನಂತರ ಬಂದ ಸೂರ್ಯಕುಮಾರ್ ಯಾದವ್ ಅದ್ಭುತ ಇನಿಂಗ್ಸ್ ಆಡಿದರು. ಸೂರ್ಯಕುಮಾರ್  ಅರ್ಧಶತಕ ದಾಖಲಿಸಿ ಭಾರತದ ಪಾಲಿನ ಹೀರೋ ಆದರು.

40 ಚೆಂಡುಗಳಲ್ಲಿ 62 ರನ್ ಬಾರಿಸಿದ ಸೂರ್ಯ ಔಟಾದ ನಂತರ ಭಾರತಕ್ಕೆ  ರನ್ ಮತ್ತು ಬಾಲ್ ಸರಿ ಸರಿ ಇತ್ತು. ಆದರೆ  ಕೊನೆಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದ ಕೀವಿಸ್ ಪಡೆ  ರನ್ ಗಳಿಕೆಗೆ ಕಡಿವಾಣ ಹಾಕಿತು. ಪಂದ್ಯ ಕೊನೆಯ ಓವರ್ ಗೆ ಸಾಗಿತು. ಪದಾರ್ಪಣೆ ಪಂದ್ಯದ ಮೊದಲ ಚೆಂಡನ್ನು ಬೌಂಡರಿಗೆ ಅಟ್ಟಿದ ವೆಂಕಟೇಶ ಅಯ್ಯರ್   ಹಾಗೆಯೇ ಔಟಾದರು. ಆದರೆ ಉಳಿದ ರನ್ ಗಳನ್ನು ಗಳಿಸಿಕೊಟ್ಟ ಪಂತ್ ಭಾರತಕ್ಕೆ ಐದು ವಿಕೆಟ್ ಗಳ ಜಯದಂದಿಟ್ಟರು.

ಕೊಹ್ಲಿ ಪಾತ್ರದ ಬಗ್ಗೆ ತುಟಿ ಬಿಚ್ಚದ ರೋಹಿತ್ ಶರ್ಮಾ

ರೋಹಿತ್ ಶರ್ಮಾ 48 ರನ್ ಕಾಣಿಕೆ ನೀಡಿದರೆ ಕೆಎಲ್ ರಾಹುಲ್ 15 ರನ್ ಬಾರಿಸಿದರು.  ರಿಷಬ್ ಪಂತ್ 17 ರನ್ ಗಳಿಸಿ ಭಾರತದ ಗೆಲುವಿಗೆ  ಕೊಡುಗೆ ನೀಡಿದರು. 

ಟಿ ಟ್ವೆಂಟಿ ಸರಣಿಯ ಮೊದಲ ಪಂದ್ಯವನ್ನು ಭಾರತ ಗೆದ್ದುಕೊಂಡು ಲೀಡ್ ಸಾಧಿಸಿದೆ. ಟಟ್ವೆಂಟಿ ವಿಶಶ್ವ ಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ನ್ಯೂಜಿಲೆಂಡ್ ತಂಡ ಭಾರತಕ್ಕೆ ಬಂದಿದೆ. ಕೊರೋನಾ ನಂತರ  ಭಾರತದಲ್ಲಿ ಪಂದ್ಯಗಳು ನಡೆಯುತ್ತಿದ್ದು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಲಾಗಿದೆ.

ಹೊಸ ತಂಡ;  ಟಿ ಟ್ವೆಂಟಿ ವಿಶ್ವಕಪ್ ನಂತರ ನಾಯಕತ್ವ ತ್ಯಜಿಸುತ್ತೇನೆ ಎಂದು ಹೇಳಿದ್ದ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.  ಕನ್ನಡಿಗ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದು ಮೊದಲ ಪಂದ್ಯದಲ್ಲಿ ಗೆಲುವಿನ ಸಿಹಿ ಕಂಡಿದ್ದಾರೆ. ರೋಹಿತ್ ಶರ್ಮಾ ಸಹ ಜಯದ ಓಟ ಮುಂದುವರಿಸಿದ್ದಾರೆ.  ವಿಶ್ವಕಪ್ ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡ ದಿನವೇ ಒಂದರ್ಥದಲ್ಲಿ ಅಭಿಯಾನ ಅಂತ್ಯವಾಗಿತ್ತು. 

Follow Us:
Download App:
  • android
  • ios