* 4ನೇ ಟೆಸ್ಟ್‌ ಪಂದ್ಯದಲ್ಲೂ ರವಿಚಂದ್ರನ್ ಅಶ್ವಿನ್‌ಗಿಲ್ಲ ಸ್ಥಾನ* ರವಿಚಂದ್ರನ್ ಅಶ್ವಿನ್‌ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್* ಇಂಗ್ಲೆಂಡ್ ಎದುರು ಸತತ 4 ಟೆಸ್ಟ್‌ ಪಂದ್ಯಗಳಲ್ಲಿ ಬೆಂಚ್‌ ಕಾಯಿಸಿದ ಅಫ್‌ಸ್ಪಿನ್ನರ್

ಲಂಡನ್‌(ಆ.02): ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯ ಆರಂಭವಾಗಿದ್ದು, ಮತ್ತೊಮ್ಮೆ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ತಂಡದಿಂದ ಕೈಬಿಡಲಾಗಿದೆ. 4ನೇ ಟೆಸ್ಟ್‌ನಲ್ಲಿ ಅಶ್ವಿನ್‌ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕ್ರಿಕೆಟ್ ಪಂಡಿತರ ಲೆಕ್ಕಾಚಾರ ಮತ್ತೊಮ್ಮೆ ತಲೆಕೆಳಗಾಗಿದೆ. ಅದೇ ರೀತಿ ಅಶ್ವಿನ್ ಅವರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಇಂಗ್ಲೆಂಡ್ ಎದುರಿನ ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದ್ದು. ಬರ್ತ್‌ ಡೇ ಬಾಯ್ ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದ್ದು, ಶಾರ್ದೂಲ್ ಠಾಕೂರ್ ಹಾಗೂ ಉಮೇಶ್ ಯಾದವ್‌ಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಆದರೆ ಅಶ್ವಿನ್‌ಗೆ ಮತ್ತೊಮ್ಮೆ ಬೆಂಚ್‌ ಕಾಯಿಸುವಂತೆ ಮಾಡಿದೆ ಟೀಂ ಇಂಡಿಯಾ ಮ್ಯಾನೇಜ್ಮೆಂಟ್‌. ಟೀಂ ಇಂಡಿಯಾ ಮ್ಯಾನೇಜ್ಮೆಂಟ್‌ನ ಈ ತೀರ್ಮಾನ ಹಲವು ಕ್ರಿಕೆಟ್‌ ಪಂಡಿತರನ್ನು ಹುಬ್ಬೇರಿಸುವಂತೆ ಮಾಡಿದೆ.

Ind vs Eng ಓವಲ್ ಟೆಸ್ಟ್‌: ಟಾಸ್ ಗೆದ್ದ ಇಂಗ್ಲೆಂಡ್‌ ಬೌಲಿಂಗ್ ಆಯ್ಕೆ

ಅಶ್ವಿನ್‌ ಅವರನ್ನು ತಂಡದಿಂದ ಹೊರಗಿಟ್ಟಿದ್ದು, ಯುಕೆಯಲ್ಲಿ ನಡೆಯುತ್ತಿರುವ 4 ಟೆಸ್ಟ್‌ ಪಂದ್ಯಗಳಲ್ಲೂ ಹೊರಗಿಟ್ಟಿದ್ದು ಇದೇ ಮೊದಲು. 413 ಟೆಸ್ಟ್‌ ವಿಕೆಟ್ ಹಾಗೂ 5 ಟೆಸ್ಟ್‌ ಶತಕ. ನಿಜಕ್ಕೂ ಹುಚ್ಚುತನ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್‌ ವಾನ್ ಟ್ವೀಟ್‌ ಮೂಲಕ ಬೇಸರ ಹೊರಹಾಕಿದ್ದಾರೆ.

Scroll to load tweet…

ಇದೇ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮಾರ್ಕ್‌ ವಾ, ನಿಜಕ್ಕೂ ಆಶ್ಚರ್ಯವಾಯಿತು, ಭಾರತೀಯ ಚಿಂತಕರ ಚಾವಡಿ ಯಾವ ರೀತಿ ಆಲೋಚಿಸುತ್ತಿದೆ ಎಂದು ಅರ್ಥವಾಗುತ್ತಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. ಇದಷ್ಟೇ ಅಲ್ಲದೇ ಟಾಮ್‌ ಮೂಡಿ, ಹರ್ಷಾ ಬೋಗ್ಲೆ ಸೇರಿದಂತೆ ಹಲವು ಮಂದಿ ಅಶ್ವಿನ್ ಅವರಿಗೆ ತಂಡದಲ್ಲಿ ಸ್ಥಾನ ನೀಡದೇ ಇರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Scroll to load tweet…
Scroll to load tweet…
Scroll to load tweet…