* ಲಾರ್ಡ್ಸ್ ನಲ್ಲಿನ ಅಬ್ಬರಿಸಿ ಶತಕ ದಾಖಲಿಸಿದ ಕನ್ನಡಿಗ ರಾಹುಲ್* ರಾಹುಲ್ ಸಾಧನೆಯನ್ನು ಮನಸಾರೆ ಮೆಚ್ಚಿದ ಸುನೀಲ್ ಶೆಟ್ಟಿ* ಭಾವಿ ಅಳಿಯನಿಗೆ ಶುಭ ಹಾರೈಸಿದರಾ ಮಾವ?* ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಸೂಚಿಸಿದ ಶೆಟ್ಟಿ

ಲಾರ್ಡ್ಸ್(ಆ. 14) ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಶತಕ ದಾಖಲಿಸಿದ್ದಾರೆ. 

Add Asianetnews Kannada as a Preferred SourcegooglePreferred

ಕನ್ನಡಗಿನ ಸಾಧನೆಯನ್ನು ಇಡೀ ದೇಶ, ಕ್ರಿಕೆಟ್ ಪ್ರೇಮಿಗಳು ಕೊಂಡಾಡಿದ್ದಾರೆ. ಇನ್ನೊಂದು ಕಡೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ರಾಹುಲ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಹುಲ್ ಮತ್ತು ಸುನೀಲ್ ಶೆಟ್ಟಿ ಮಗಳು ಗೆಳತಿ ಅತಿಯಾ ಶೆಟ್ಟಿ ಒಟ್ಟಾಗಿ ಓಡಾಡುತ್ತಿರುವುದು ಗೊತ್ತಿಲ್ಲದ ವಿಚಾರವೇನಲ್ಲ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಸುನೀಲ್ ಶೆಟ್ಟಿ ರಾಹುಲ್ ಶತಕದ ಸಂಭ್ರಮ ಹಂಚಿಕೊಂಡು ನನ್ನ ಜನ್ಮದಿನಕ್ಕೆ ಅದ್ಭುತ ಕೊಡುಗೆ ಎಂದು ಹೇಳಿದ್ದಾರೆ.

ಕೆ ಎಲ್‌ ರಾಹುಲ್‌ ಜೊತೆ ಮಗಳ ರಿಲೆಷನ್‌ಶಿಪ್‌ ಬಗ್ಗೆ ಮಾತನಾಡಿದ ಸುನೀಲ್‌ ಶೆಟ್ಟಿ!

ರಾಹುಲ್ ಶತಕ ಭಾರಿಸಿದ ಕ್ಲಿಪ್ ಜೋಡಿಸಿ .. ಸುನಿಲ್ ಶೆಟ್ಟಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಪೋಸ್ಟ್ ಗೆ ನೆಟಿಜನ್ ಗಳು ಫಿದಾ ಆಗಿದ್ದಾರೆ. 100@ ಕ್ರಿಕೆಟ್ ಮೆಕ್ಕಾ.. ಕಂಗ್ರಾಟ್ಸ್ ಅಂಡ್ ಗಾಡ್ ಬ್ಲೆಸ್ ಯೂ ಬಾಬಾ.. ನನ್ನ ಹುಟ್ಟುಹಬ್ಬಕ್ಕೆ ನೀವು ನೀಡಿದ ಉಡುಗೊರೆ ತುಂಬಾ ಅದ್ಭುತವಾಗಿದೆ ಎಂದು ಸುನೀಲ್ ಶೆಟ್ಟಿ ಪೋಸ್ಟ್ ಮಾಡಿದ್ದಾರೆ. ಭಾವಿ ಅಳಿಯನಿಗೆ ಮಾವ ಶುಭ ಹಾರೈಸಿದರೆ?

ಅತಿಯಾ ಶೆಟ್ಟಿ ಕೂಡ ರಾಹುಲ್ ಸೆಂಚುರಿ ಕುರಿತು ಪೋಸ್ಟ್ ಮಾಡಿದ್ದು, ಕೆ ಎಲ್ ರಾಹುಲ್ ಅವರನ್ನು ಟ್ಯಾಗ್ ಮಾಡಿ ಹಾರ್ಟ್ ಸಿಂಬಲ್ ನೀಡಿ ಸಂಭ್ರಮಿಸಿದ್ದಾರೆ. ಒಟ್ಟಿನಲ್ಲಿ ಎಲ್ಲ ಬೆಳವಣಿಗೆ ನೋಡಿದರೆ ಇನ್ನೊಂದು ಸೆಲೆಬ್ರಿಟಿ ಮದುವೆಯನ್ನು ಸದ್ಯವೇ ಕಣ್ಣು ತುಂಬಿಕೊಳ್ಳಬಹುದು.


View post on Instagram