* ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಬದಲಿಗೆ 2 ಹೆಚ್ಚುವರಿ ಟಿ20 ಪಂದ್ಯವನ್ನಾಡಲು ಟೀಂ ಇಂಡಿಯಾ ರೆಡಿ* ಕೋವಿಡ್ ಭೀತಿಯಿಂದಾಗಿ ಮ್ಯಾಂಚೆಸ್ಟರ್ ಪಂದ್ಯ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು.* 2022ರಲ್ಲಿ ಸೀಮಿತ ಓವರ್‌ಗಳ ಸರಣಿಯನ್ನಾಡಲು ಭಾರತ ತಂಡ ಇಂಗ್ಲೆಂಡ್ ಪ್ರವಾಸ

ನವದೆಹಲಿ(ಸೆ.14): ಇಂಗ್ಲೆಂಡ್‌-ಭಾರತ ನಡುವಿನ 5ನೇ ಟೆಸ್ಟ್‌ ಕೋವಿಡ್ ಕಾರಣದಿಂದಾಗಿ ರದ್ದಾದ ಬಳಿಕ, ಇಂಗ್ಲೆಂಡ್‌ ಕ್ರಿಕೆಟ್ ಮಂಡಳಿ(ಇಸಿಬಿ) ಭಾರೀ ನಷ್ಟಕ್ಕೆ ಸಿಲುಕುವ ಆತಂಕಕ್ಕೆ ಗುರಿಯಾಗಿದೆ. ಹೀಗಾಗಿ 5ನೇ ಟೆಸ್ಟ್‌ ಪಂದ್ಯವನ್ನು ಮುಂಬರುವ ದಿನಗಳಲ್ಲಿ ಆಡುವಂತೆ ಇಲ್ಲವೇ ಬಿಟ್ಟುಕೊಡುವಂತೆ ಇಸಿಬಿ, ಬಿಸಿಸಿಐ ಬಳಿ ಕೇಳುತ್ತಿದೆ ಎನ್ನಲಾಗಿದೆ.

Add Asianetnews Kannada as a Preferred SourcegooglePreferred

5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸದ್ಯ 2-1ರ ಮುನ್ನಡೆ ಸಾಧಿಸಿದೆ. ಒಂದು ವೇಳೆ ಐಸಿಸಿ ಪಂದ್ಯವನ್ನು ರದ್ದು ಎಂದು ಘೋಷಿಸಿದರೆ 5 ಪಂದ್ಯಗಳ ಸರಣಿ 2-1ರ ಅಂತರದಲ್ಲಿ ಭಾರತದ ಪಾಲಾಗಲಿದೆ. ಆಗ ಪಂದ್ಯದ ವಿಮೆ ಹಣ ಇಸಿಬಿಗೆ ಸಿಗುವುದಿಲ್ಲ. ಪಂದ್ಯವನ್ನು ಭಾರತ ಬಿಟ್ಟುಕೊಟ್ಟಿದೆ ಎಂದು ನಿರ್ಧಾರವಾದರೆ, ಆಗ ಸರಣಿ 2-2ರಲ್ಲಿ ಡ್ರಾಗೊಳ್ಳಲಿದ್ದು ಇಸಿಬಿಗೆ ವಿಮೆ ಹಣ ಸಿಗಲಿದೆ. ಪಂದ್ಯವನ್ನು ಬೇರೊಂದು ದಿನ ಆಯೋಜಿಸುವ ಬಗ್ಗೆ ಇಸಿಬಿ ಹಾಗೂ ಬಿಸಿಸಿಐ ಘೋಷಿಸಿದ್ದರೂ, ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಚರ್ಚೆ ನಡೆದಿಲ್ಲ ಎಂದು ತಿಳಿದುಬಂದಿದೆ.

ಬಾಕಿ ಇರುವ ಒಂದು ಟೆಸ್ಟ್‌ ಆಡಲು ಸಿದ್ಧ ಎಂದ ಎಂದಿರುವ ಬಿಸಿಸಿಐ, ಮತ್ತೊಂದು ಆಯ್ಕೆಯನ್ನೂ ನೀಡಿದೆ ಎಂದು ತಿಳಿದುಬಂದಿದೆ. ಒಂದು ಬದಲು 2022ರಲ್ಲಿ ಪ್ರವಾಸ ಕೈಗೊಂಡ ವೇಳೆ 3 ಟಿ20 ಜೊತೆ ಹೆಚ್ಚುವರಿಯಾಗಿ 2 ಟಿ20 ಜೊತೆ ಹೆಚ್ಚುವರಿಯಾಗಿ 2 ಟಿ20 ಆಡಲು ಸಿದ್ದವಿರುವುದಾಗಿ ಹೇಳಿದೆ ಎನ್ನಲಾಗಿದೆ.

ಕೋವಿಡ್‌ ಭೀತಿಗೆ ಟೀಂ ಇಂಡಿಯಾ ಆಟಗಾರರು ಹೆದರಿದ್ದರು: ಸೌರವ್ ಗಂಗೂಲಿ

ಸೆಪ್ಟೆಂಬರ್ 19ರಿಂದ ಯುಎಇ ಚರಣದ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಟೀಂ ಇಂಡಿಯಾ ಆಟಗಾರರು ಮ್ಯಾಂಚೆಸ್ಟರ್ ಟೆಸ್ಟ್‌ ಪಂದ್ಯದಲ್ಲಿ ಪಾಲ್ಗೊಳ್ಳಲಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ. ಈ ಆರೋಪಗಳನ್ನು ಅಲ್ಲಗಳೆದಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಆಟಗಾರರು ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ. ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನಾಡಲು ನಮ್ಮ ಆಟಗಾರರು ಕೋವಿಡ್ ಭೀತಿಯಿಂದಾಗಿ ಹಿಂದೇಟು ಹಾಕಿದರು ಎಂದು ದಾದಾ ಹೇಳಿದ್ದರು.