Asianet Suvarna News Asianet Suvarna News

ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಆಘಾತ!

ಇಂಗ್ಲೆಂಡ್ ವಿರುದ್ಧದ ಟಿ2 ಸರಣಿಯಲ್ಲಿ ಟೀಂ ಇಂಡಿಯಾ ಕಮ್‌ಬ್ಯಾಕ್ ಮಾಡಿದೆ. ಇದೀಗ 3ನೇ ಟಿ20 ಪಂದ್ಯಕ್ಕೆ ಸಜ್ಜಾಗಿದೆ. ಆದರೆ ಟೀಂ ಇಂಡಿಯಾ ತಯಾರಿ ನಡುವೆ ಆಘಾತವೊಂದು ಎದುರಾಗಿದೆ.

IND vs ENG t20 icc impose 20 percent match fee to team india for Slow over rate ckm
Author
Bengaluru, First Published Mar 15, 2021, 10:22 PM IST

ಅಹಮ್ಮದಾಬಾದ್(ಮಾ.15): ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದೆ. ಹೀಗಾಗಿ 3ನೇ ಟಿ20 ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಮೊದಲ ಪಂದ್ಯದ ಸೋಲಿಗೆ 2ನೇ ಪಂದ್ಯದಲ್ಲಿ ತಿರುಗೇಟು ನೀಡಿದ ಟೀಂ ಇಂಡಿಯಾ ಇದೀಗ 3ನೇ ಪಂದ್ಯಕ್ಕೆ ತಯಾರಿ ನಡೆಸುತ್ತಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ದಂಡ ವಿಧಿಸಲಾಗಿದೆ.

ಮೊದಲ ಸೋಲಿಗೆ ತಿರುಗೇಟು: 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಮಣಿಸಿದ ಭಾರತ!.

2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗೆಲುವು ಕಂಡಿತ್ತು. ಆದರೆ 2ನೇ ಟಿ20ಯಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ಟೀಂ ಇಂಡಿಯಾಗೆ ಪಂದ್ಯದ ಶೇಕಡಾ 20 ರಷ್ಟು ದಂಡದ ರೂಪದಲ್ಲಿ ನೀಡಬೇಕಿದೆ. ಐಸಿಸಿ 2.22 ಕೋಡ್ ನಿಯಮ ಉಲ್ಲಂಘಿಸಿದ ಟೀಂ ಇಂಡಿಯಾಗೆ ಐಸಿಸಿ ದಂಡ ವಿಧಿಸಿದೆ.

ನಿಗದಿತ ಓವರ್ ಮುಕ್ತಾಯದ ಸಮಯದಲ್ಲಿ ಟೀಂ ಇಂಡಿಯಾ ಇನ್ನೂ 1 ಓವರ್ ಬಾಕಿ ಉಳಿಸಿಕೊಂಡಿತ್ತು. ಹೀಗಾಗಿ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ಫೈನ್ ಹಾಕಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಪ್ಪು ಒಪ್ಪಿಕೊಂಡು ದಂಡ ಪಾವತಿಸುವುದಾಗಿ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಕಮ್‌ಬ್ಯಾಕ್ ಮಾಡಿದೆ. ಸರಣಿ ಸದ್ಯ 1-1 ಅಂತರದಲ್ಲಿ ಸಮಬಲಗೊಂಡಿದೆ. ಇದೀಗ ಇಂಗ್ಲೆಂಡ್ ಕಮ್‌ಬ್ಯಾಕ್‌ಗಾಗಿ ಕಠಿಣ ಅಭ್ಯಾಸ ನಡೆಸಿದೆ.

Follow Us:
Download App:
  • android
  • ios