ಇಂಗ್ಲೆಂಡ್ ‘ಬಿ’ ವಿರುದ್ಧ ಭಾರತ ಗೆದ್ದಿದೆ: ಪೀಟರ್‌ಸನ್
ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಇಂಗ್ಲೆಂಡ್ ಬಿ ತಂಡದ ವಿರುದ್ದ ಗೆದ್ದಿದೆ ಎಂದ ಕೆವಿನ್ ಪೀಟರ್‌ಸನ್ ಹೇಳಿಕೆಗೆ ವಾಸೀಂ ಜಾಫರ್ ತಿರುಗೇಟು ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚೆನ್ನೈ(ಫೆ.17): ಇಂಗ್ಲೆಂಡ್ ‘ಬಿ’ ತಂಡದ ವಿರುದ್ಧ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡುವ ಮೂಲಕ, ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್‌ಸನ್, ವಿರಾಟ್ ಕೊಹ್ಲಿ ಪಡೆಯ ಕಾಲೆಳೆದಿದ್ದಾರೆ.
2ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ 317 ರನ್‌ಗಳ ಹೀನಾಯ ಸೋಲು ಅನುಭವಿಸಿದ ಬಳಿಕ ಪೀಟರ್‌ಸನ್ ಈ ರೀತಿ ಟ್ವೀಟ್ ಮಾಡಿ, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇದೇ ವೇಳೆ 2ನೇ ಟೆಸ್ಟ್‌ಗೆ ತಂಡದ ಆಯ್ಕೆಯನ್ನು ಪ್ರಶ್ನಿಸಿರುವ ಪೀಟರ್‌ಸನ್, ಜೇಮ್ಸ್ ಆ್ಯಂಡರ್‌ಸನ್ ಹಾಗೂ ಜೋಸ್ ಬಟ್ಲರ್‌ರನ್ನು ಕಣಕ್ಕಿಳಿಸದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕೊನೆ 2 ಟೆಸ್ಟ್‌ನಿಂದ ಹೊರಗುಳಿಯಲು ಮೋಯಿನ್ ಅಲಿ ನಿರ್ಧರಿಸಿರುವುದಕ್ಕೂ ಅಸಮಾಧಾನಗೊಂಡಿರುವ ಪೀಟರ್‌ಸನ್, ಉತ್ತಮ ಆಟಗಾರರಿಲ್ಲದೆ ಬಲಿಷ್ಠ ಎದುರಾಳಿಯ ಎದುರು ಗೆಲ್ಲಲು ಸಾಧ್ಯವಿಲ್ಲ ಎನ್ನುವುದನ್ನು ತಂಡದ ಆಡಳಿತ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.
ಚೆನ್ನೈ ಟೆಸ್ಟ್: ಇಂಗ್ಲೆಂಡ್ ಬಗ್ಗುಬಡಿದ ಟೀಂ ಇಂಡಿಯಾ, ಸರಣಿ ಸಮಬಲ
ಕೆವಿನ್ ಪೀಟರ್‌ಸನ್ ಅವರ ಈ ಟ್ವೀಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಪೀಟರ್‌ಸನ್‌ಗೆ ತಿರುಗೇಟು ನೀಡಿದ್ದು, ತಂಡದಲ್ಲಿ ಸಂಪೂರ್ಣ ಆಟಗಾರರು ಇಂಗ್ಲೆಂಡ್‌ನವರೇ ಇದ್ದಿದ್ದರೆ, ಇಂಗ್ಲೆಂಡ್ ತಂಡದಲ್ಲಿ ದಕ್ಷಿಣ ಆಫ್ರಿಕಾ ಮೂಲದ ಆಟಗಾರರಿಗೆ ಸ್ಥಾನ ಸಿಗುತ್ತಿರಲಿಲ್ಲ ಎಂದಿದ್ದಾರೆ.