* ಟೀಂ ಇಂಡಿಯಾ ಮೂರನೇ ವಿಕೆಟ್ ಪತನ* ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿದ ಜೇಮ್ಸ್‌ ಆ್ಯಂಡರ್‌ಸನ್‌ * ಸದ್ಯ 30 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾ

ಲೀಡ್ಸ್‌(ಆ.25): ಇಂಗ್ಲೆಂಡ್‌ ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌ ರೆಡ್‌ ಹಾಟ್‌ ಫಾರ್ಮ್‌ನಲ್ಲಿದ್ದು, ಲೀಡ್ಸ್‌ ಟೆಸ್ಟ್‌ ಪಂದ್ಯದ ಆರಂಭದಲ್ಲೇ ಮಾರಕ ದಾಳಿಯನ್ನು ಸಂಘಟಿಸುವ ಮೂಲಕ ಟೀಂ ಇಂಡಿಯಾ ಪಾಳಯದಲ್ಲಿ ನಡುಕ ಹುಟ್ಟಿಸಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಪೆವಿಲಿಯನ್ನಿಗಟ್ಟುವ ಮೂಲಕ ಆ್ಯಂಡರ್‌ಸನ್‌ ಇಂಗ್ಲೆಂಡ್‌ಗೆ ಆರಂಭಿಕ ಮೇಲುಗೈ ಒದಗಿಸಿಕೊಟ್ಟಿದ್ದಾರೆ.

ಹೌದು, ಮೊದಲ ಓವರ್‌ನಲ್ಲೇ ಕೆ.ಎಲ್ ರಾಹುಲ್ ಅವರನ್ನು ಪೆವಿಲಿಯನ್ನಿಗಟ್ಟಿದ್ದ ಆ್ಯಂಡರಸನ್‌, ಕೆಲ ಹೊತ್ತಿನಲ್ಲೇ ಪೂಜಾರಗೂ ಪೆವಿಲಿಯನ್‌ ಹಾದಿ ತೋರಿಸಿದರು. ಇನ್ನು ಪಂದ್ಯದ 11ನೇ ಓವರ್‌ ಬೌಲ್‌ ಮಾಡಿದ ಆ್ಯಂಡರ್‌ಸನ್‌ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆದು ಕುಣಿದು ಕುಪ್ಪಳಿಸಿದರು. 

Scroll to load tweet…

ನೇಥನ್‌ ಲಯನ್ ದಾಖಲೆ ಸರಿಗಟ್ಟಿದ ಆ್ಯಂಡರ್‌ಸನ್‌: ಹೌದು, ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್ ನೇಥನ್ ಲಯನ್‌ 7 ಬಾರಿ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿದ್ದರು. ಇದೀಗ ಜೇಮ್ಸ್‌ ಆ್ಯಂಡರ್‌ಸನ್‌ ಸಹಾ 7ನೇ ಬಾರಿಗೆ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸುವ ಮೂಲಕ ಲಯನ್ ದಾಖಲೆ ಸರಿಗಟ್ಟಿದ್ದಾರೆ.

ಸದ್ಯ 13ನೇ ಓವರ್‌ ಮುಕ್ತಾಯದ ವೇಳೆಗೆ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 30 ರನ್‌ ಗಳಿಸಿದ್ದು, ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.