* ನಿರಂತರ ಫಾರ್ಮ್‌ ಸಮಸ್ಯೆ ಎದುರಿಸುತ್ತಿರುವ ಅಜಿಂಕ್ಯ ರಹಾನೆ* ರಹಾನೆಗೆ ಮತ್ತೊಂದು ಚಾನ್ಸ್ ಸಿಕ್ಕಿದ್ರೆ ಪುಣ್ಯ* ರಹಾನೆ ಬದಲಿಗೆ ಸೂರ್ಯಕುಮಾರ್‌/ವಿಹಾರಿಗೆ ಚಾನ್ಸ್‌ ನೀಡಿ ಎಂದ ಮಂಜ್ರೇಕರ್

ನವದೆಹಲಿ(ಸೆ.07): ಫಾರ್ಮ್‌ ಸಮಸ್ಯೆ ಹಾಗೂ ಆತ್ಮವಿಶ್ವಾಸದ ಕೊರತೆಯಿಂದ ಕಂಗಾಲಾಗಿರುವ ಅಜಿಂಕ್ಯ ರಹಾನೆಯವರಿಗೆ ವಿಶ್ರಾಂತಿ ನೀಡಿ ಅವಕಾಶಕ್ಕಾಗಿ ಎದುರು ನೋಡುತ್ತಿರುವ ಹನುಮ ವಿಹಾರಿ ಅಥವಾ ಸೂರ್ಯಕುಮಾರ್ ಯಾದವ್‌ಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಬೇಕು ಎಂದು ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸಂಜಯರ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

ಒಂದು ವೇಳೆ ನನ್ನನ್ನು ತಂಡದಿಂದ ಕೈಬಿಡದಿದ್ದರೆ ದಿಗ್ಗಜ ಕ್ರಿಕೆಟಿಗನಾಗಿ ಬೆಳೆದು ನಿಂತ ರಾಹುಲ್‌ ದ್ರಾವಿಡ್‌ಗೆ ಅವಕಾಶವೇ ಸಿಗುತ್ತಿರಲಿಲ್ಲ. ಹೀಗಾಗಿ ಯುವ ಆಟಗಾರರಿಗೆ ತಮ್ಮ ಪ್ರತಿಭೆ ಅನಾವರಣ ಮಾಡಲು ಅವಕಾಶ ಒದಗಿಸಬೇಕು ಎಂದು ಮಂಜ್ರೇಕರ್ ಹೇಳಿದ್ದಾರೆ. ಅವಕಾಶಕ್ಕಾಗಿ ತುದಿಗಾಲಿನಲ್ಲಿ ನಿಂತಿರುವ ಪ್ರತಿಭೆಗಳನ್ನು ಇನ್ನೆಷ್ಟು ದಿನ ಅವಕಾಶ ವಂಚಿತರನ್ನಾಗಿಸುತ್ತೀರಾ. ಒಂದುವೇಳೆ ನನ್ನನ್ನು ತಂಡದಿಂದ ಕೈಬಿಡದಿದ್ದರೆ, ರಾಹುಲ್ ದ್ರಾವಿಡ್ ಅವರಂತಹ ಆಟಗಾರರು ತಂಡದಲ್ಲಿರುತ್ತಿರಲಿಲ್ಲ. ಆತ್ಮವಿಶ್ವಾಸದ ಕೊರತೆ ಅನುಭವಿಸುತ್ತಿರುವ ರಹಾನೆ ಬದಲಿಗೆ ಈ ಸೂರ್ಯಕುಮಾರ್‌ ಅಥವಾ ವಿಹಾರಿಗೆ ಅವಕಾಶ ನೀಡುವುದು ಒಳಿತು ಎಂದು ಮಂಜ್ರೇಕರ್ ಹೇಳಿದ್ದಾರೆ. 

ರಾಷ್ಟ್ರಧ್ವಜಕ್ಕೆ ಅಗೌರವ; ಭಾರತೀಯ ಫ್ಯಾನ್ಸ್‌ ಮೇಲೆ ಕಿಡಿಕಾರಿದ ಗವಾಸ್ಕರ್

ಒಂದು ವೇಳೆ ರಹಾನೆಗೆ ಟೀಂ ಇಂಡಿಯಾ ಪರ ಆಡಲು ಮತ್ತೊಂದು ಅವಕಾಶ ಸಿಕ್ಕಿದರೆ, ಆತ ನಿಜಕ್ಕೂ ಅದೃಷ್ಟವಂತ ಬ್ಯಾಟ್ಸ್‌ಮನ್‌. ರಹಾನೆಗೆ ಈಗಾಗಲೇ ಸಾಕಷ್ಟು ಬಾರಿ ಅವಕಾಶ ನೀಡಲಾಗಿದೆ. ಇದೆಲ್ಲದರ ಹೊರತಾಗಿ ಮತ್ತೊಂದು ಅವಕಾಶ ಸಿಕ್ಕರೆ ರಹಾನೆ ಪಾಲಿಗೆ ಅದು ಸುವರ್ಣಾವಕಾಶವಾಗಲಿದೆ ಎಂದು ಮಂಜ್ರೇಕರ್ ಆಗಿದ್ದಾರೆ.