ಬೆಂಗಳೂರು(ಮಾ.28): ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್‌ ಬೌಲಿಂಗ್‌ ಆಯ್ದುಕೊಂಡಿದೆ.

ನಿರೀಕ್ಷೆಯಂತೆಯೇ ಉಭಯ ತಂಡಗಳಲ್ಲಿ ತಲಾ ಒಂದೊಂದು ಬದಲಾವಣೆ ಮಾಡಲಾಗಿದ್ದು, ಇಂಗ್ಲೆಂಡ್ ತಂಡದಲ್ಲಿ ಟಾಮ್ ಕರ್ರನ್ ಬದಲಿಗೆ ಮಾರ್ಕ್‌ವುಡ್‌ ತಂಡ ಕೂಡಿಕೊಂಡಿದ್ದರೆ, ಭಾರತ ಪರ ಕುಲ್ದೀಪ್ ಯಾದವ್ ಬದಲಿಗೆ ಟಿ. ನಟರಾಜನ್‌ ತಂಡ ಕೂಡಿಕೊಂಡಿದ್ದಾರೆ.

3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಟೀಂ ಇಂಡಿಯಾ 66 ರನ್‌ಗಳಿಂದ ಜಯಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಇನ್ನು ಎರಡನೇ ಪಂದ್ಯದಲ್ಲಿ ಜಾನಿ ಬೇರ್‌ಸ್ಟೋವ್‌ ಹಾಗೂ ಬೆನ್ ಸ್ಟೋಕ್ಸ್‌ ಸಿಡಿಲಬ್ಬರದ ಬ್ಯಾಟಿಂಗ್‌ ನೆರವಿನಿಂದ ಇಂಗ್ಲೆಂಡ್‌ಗೆ 6 ವಿಕೆಟ್‌ಗಳ ಜಯ ತಂದುಕೊಟ್ಟಿದ್ದರು. ಸದ್ಯ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಜಯಿಸಿದ್ದು, ಇದೀಗ ನಿರ್ಣಾಯಕ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.

ತಂಡಗಳು ಹೀಗಿವೆ:
ಭಾರತ:

ಇಂಗ್ಲೆಂಡ್