Ind vs Eng ಲೀಡ್ಸ್ ಟೆಸ್ಟ್: ಶತಕದ ಹೊಸ್ತಿಲಲ್ಲಿ ಎಡವಿದ ಚೇತೇಶ್ವರ್ ಪೂಜಾರ
* ಲೀಡ್ಸ್ ಟೆಸ್ಟ್‌ನ ನಾಲ್ಕನೇ ದಿನದಾಟದ ಆರಂಭದಲ್ಲೇ ಟೀಂ ಇಂಡಿಯಾಗೆ ಆಘಾತ
* 91 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಚೇತೇಶ್ವರ್ ಪೂಜಾರ
* ನಾಲ್ಕನೇ ದಿನದಾಟದಲ್ಲಿ ಖಾತೆ ಒಂದು ರನ್ ಸೇರಿಸದ ವಿಕೆಟ್ ಒಪ್ಪಿಸಿದ ಟೆಸ್ಟ್ ಸ್ಪೆಷಲಿಸ್ಟ್
ಲೀಡ್ಸ್(ಆ.28): ಕಳೆದ ಕೆಲವು ಟೆಸ್ಟ್ ಪಂದ್ಯಗಳಲ್ಲಿ ರನ್ ಬರ ಅನುಭವಿಸುತ್ತಿದ್ದ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ನಾಲ್ಕನೇ ದಿನದಾಟದ ಆರಂಭದಲ್ಲೇ ತನ್ನ ಖಾತೆಗೆ ಒಂದೂ ರನ್ ಸೇರಿಸದೇ ವಿಕೆಟ್ ಒಪ್ಪಿಸಿದ್ದಾರೆ. 91 ರನ್ ಗಳಿಸಿದ್ದ ಚೇತೇಶ್ವರ್ ಪೂಜಾರ ಅವರನ್ನು ಎಲ್‌ಬಿ ಬಲೆಗೆ ಕೆಡವುವಲ್ಲಿ ವೇಗಿ ಓಲಿ ರಾಬಿನ್‌ಸನ್ ಯಶಸ್ವಿಯಾಗಿದ್ದಾರೆ.
ಒಟ್ಟು 189 ಎಸೆತಗಳನ್ನು ಎದುರಿಸಿ 15 ಬೌಂಡರಿಗಳ ನೆರವಿನಿಂದ 91 ರನ್ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಪೂಜಾರ ಅವರನ್ನು ಬಲಿ ಪಡೆಯುವಲ್ಲಿ ಇಂಗ್ಲೆಂಡ್ ವೇಗಿ ಯಶಸ್ವಿಯಾದರು. ಹಿಂದಿನ ದಿನ 90+ ರನ್ ಬಾರಿಸಿ ಮರುದಿನ ಒಂದೂ ರನ್ ಸೇರಿಸದೇ ವಿಕೆಟ್ ಒಪ್ಪಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನ್ನುವ ಬೇಡದ ದಾಖಲೆಗೆ ಪೂಜಾರ ಪಾತ್ರರಾಗಿದ್ದಾರೆ.
Ind vs Eng ಲೀಡ್ಸ್ ಟೆಸ್ಟ್: 2ನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ದಿಟ್ಟ ಹೋರಾಟ
ಸದ್ಯ ಟೀಂ ಇಂಡಿಯಾ 85 ಓವರ್ ಮುಕ್ತಾಯದ ವೇಳೆಗೆ 3 ವಿಕೆಟ್ ನಷ್ಟಕ್ಕೆ 219 ರನ್ ಬಾರಿಸಿದ್ದು, ವಿರಾಟ್ ಕೊಹ್ಲಿ(45) ಹಾಗೂ ರಹಾನೆ(1) ಕ್ರೀಸ್‌ನಲ್ಲಿದ್ದಾರೆ. ಇನ್ನೂ ಟೀಂ ಇಂಡಿಯಾ 135 ರನ್‌ಗಳ ಹಿನ್ನೆಡೆಯಲ್ಲಿದೆ.