ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ಭಾರತಎರಡನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ 348/7 ಗಳಿಸಿದ ಟೀಂ ಇಂಡಿಯಾಅಜೇಯ 40 ರನ್ ಗಳಿಸಿದ ರವಿಚಂದ್ರನ್ ಅಶ್ವಿನ್
ಚಿತ್ತಗಾಂಗ್(ಡಿ.15): ಆರಂಭದಲ್ಲೇ ಶ್ರೇಯಸ್ ಅಯ್ಯರ್(86) ವಿಕೆಟ್ ಪತನದ ಬಳಿಕ ರವಿಚಂದ್ರನ್ ಅಶ್ವಿನ್ ಹಾಗೂ ಕುಲ್ದೀಪ್ ಯಾದವ್ 8ನೇ ವಿಕೆಟ್‌ಗೆ ಮುರಿಯದ ಅರ್ಧಶತಕದ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾಗೆ ಆಸರೆಯಾಗಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ ಟೀಂ ಇಂಡಿಯಾ, 7 ವಿಕೆಟ್ ಕಳೆದುಕೊಂಡು 348 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲು ಹಾಕುತ್ತಿದೆ.
ಮೊದಲ ದಿನದಾಟದಂತ್ಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 278 ರನ್ ಬಾರಿಸಿದ್ದ ಟೀಂ ಇಂಡಿಯಾ, ಎರಡನೇ ದಿನದಾಟದ ಆರಂಭದಲ್ಲೇ ಶ್ರೇಯಸ್ ಅಯ್ಯರ್ ವಿಕೆಟ್ ಕಳೆದುಕೊಂಡಿತು. ಮೊದಲ ದಿನದಾಟದಂತ್ಯದ ವೇಳೆಗೆ 82 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್, ತನ್ನ ಖಾತೆಗೆ ಕೇವಲ 4 ರನ್ ಸೇರಿಸಿ ಎಬೊದತ್ ಹೊಸೈನ್‌ಗೆ ವಿಕೆಟ್ ಒಪ್ಪಿಸಿದರು.
ಅಶ್ವಿನ್-ಕುಲ್ದೀಪ್ ಜುಗಲ್ಬಂದಿ: 293 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದ್ದ ಟೀಂ ಇಂಡಿಯಾಗೆ 8ನೇ ವಿಕೆಟ್‌ಗೆ ಕುಲ್ದೀಪ್ ಯಾದವ್ ಹಾಗೂ ರವಿಚಂದ್ರನ್ ಅಶ್ವಿನ್ ಮುರಿಯದ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ತಿರುವು ಪಡೆಯುತ್ತಿರುವ ಪಿಚ್‌ನಲ್ಲಿ ಎಚ್ಚರಿಯ ಬ್ಯಾಟಿಂಗ್ ನಡೆಸಿದ ಈ ಜೋಡಿ 132 ಎಸೆತಗಳನ್ನು ಎದುರಿಸಿ ಮುರಿಯದ 55 ರನ್‌ಗಳ ಜತೆಯಾಟ ನಿಭಾಯಿಸಿದೆ. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ರವಿಚಂದ್ರನ್ ಅಶ್ವಿನ್ 81 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 40 ರನ್ ಬಾರಿಸಿದ್ದಾರೆ. ಇನ್ನು ಮತ್ತೊಂದು ತುದಿಯಲ್ಲಿ ಅಶ್ವಿನ್‌ಗೆ ಉತ್ತಮ ಸಾಥ್ ನೀಡಿರುವ ಕುಲ್ದೀಪ್ ಯಾದವ್, 76 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 21 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮೊದಲ ದಿನದಾಟದಲ್ಲಿ ಆರಂಭಿಕ ವೈಫಲ್ಯದ ಹೊರತಾಗಿಯೂ ಚೇತರಿಕೆ ಕಂಡ ಪ್ರವಾಸಿ ಭಾರತಕ್ಕೆ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಿರುಗೇಟು ನೀಡಿದೆ. ಚೇತೇಶ್ವರ್ ಪೂಜಾರ ಹಾಗೂ ಶ್ರೇಯಸ್ ಅಯ್ಯರ್ ಹೋರಾಟದ ಅರ್ಧಶತಕಗಳ ನೆರವಿನಿಂದ ತಂಡ ಮೊದಲ ದಿನದಂತ್ಯಕ್ಕೆ 6 ವಿಕೆಟ್‌ಗೆ 278 ರನ್ ಕಲೆ ಹಾಕಿತ್ತು.
ICC ODI Rankings: ಬರೋಬ್ಬರಿ 117 ಸ್ಥಾನ ಜಿಗಿದ ದ್ವಿಶತಕ ವೀರ ಇಶಾನ್ ಕಿಶನ್!
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೆ.ಎಲ್.ರಾಹುಲ್ ನಿರ್ಧಾರ ಆರಂಭದಲ್ಲೇ ಬುಡಮೇಲಾಯಿತು. ರಾಹುಲ್(22) ಜೊತೆ ಆರಂಭಿಕನಾಕಿ ಕಣಕ್ಕಿಳಿದ ಶುಭ್‌ಮನ್ ಗಿಲ್(20) ಉತ್ತಮ ಆರಂಭದ ಮುನ್ಸೂಚನೆ ನೀಡಿದರೂ ದಿಢೀರ್ ಕುಸಿತ ಕಂಡಿತು. ವಿಕೆಟ್ ನಷ್ಟವಿಲ್ಲದೇ 41 ರನ್ ಗಳಿಸಿದ್ದ ತಂಡದ 3 ವಿಕೆಟ್ 48ಕ್ಕೆ ಪತನಗೊಂಡಿತು. ಕೊಹ್ಲಿ ಕೇವಲ 1 ರನ್‌ಗೆ ನಿರ್ಗಮಿಸಿದರು. ಆದರೆ ಆಕ್ರಮಣಕಾರಿ ಆಟವಾಡಿದ ರಿಷಭ್ ಪಂತ್ ಕೇವಲ 45 ಎಸೆತಗಳಲ್ಲಿ 46 ರನ್ ಸಿಡಿಸಿ ತಂಡವನ್ನು ಆಧರಿಸಿದರು. ಅವರನ್ನು ಮೆಹಿದಿ ಹಸನ್ ಪೆವಿಲಿಯನ್‌ಗೆ ಅಟ್ಟಿದ್ದರು
