ಇಂದು ಗೆದ್ದ ತಂಡಕ್ಕೆ ಸರಣಿ. ಹೀಗಾಗಿ ಭಾರತ ಹಾಗೂ ಆಸ್ಟ್ರೇಲಿಯಾಗೆ ಗೆಲ್ಲಲೇಬೇಕಾದ ಸರಣಿ. ಈ ಮಹತ್ವದ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿನ ಬದಲಾವಣೆ ಏನು? ಇಲ್ಲಿದೆ.

ಹೈದರಾಬಾದ್(ಸೆ.25): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ ಇಂದಿನ ಪಂದ್ಯದ ಫಲಿತಾಂಶದ ಮೇಲೆ ನಿಂತಿದೆ. 2 ಪಂದ್ಯಗಳ ಸರಣಿ ಸದ್ಯ 1-1 ಅಂತರದಿಂದ ಸಮಬಲಗೊಂಡಿದೆ. ಹೀಗಾಗಿ ಅಂತಿಮ ಪಂದ್ಯ ಗೆದ್ದ ತಂಡ ಟ್ರೋಫಿ ಕೈವಶ ಮಾಡಲಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಂ ಇಂಡಿಯಾದಲ್ಲಿ 1 ಮಹತ್ವದ ಬದಲಾವಣೆ ಮಾಡಿದೆ. ರಿಷಬ್ ಪಂತ್ ಮತ್ತೆ ತಂಡದಿಂದ ಹೊರಬಿದ್ದಿದ್ದಾರೆ. ಇತ್ತ ಭುವನೇಶ್ವರ್ ಕುಮಾರ್ ಮತ್ತೆ ತಂಡ ಸೇರಿಕೊಂಡಿದ್ದಾರೆ. ಇನ್ನು ಆಸ್ಟ್ರೇಲಿಯಾ ತಂಡದಲ್ಲೂ ಒಂದು ಬದಲಾವಣೆ ಮಾಡಲಾಗಿದೆ. ಸೀನ್ ಅಬೋಟ್ ಹೊರಗುಳಿದಿದ್ದಾರೆ. ಇವರ ಸ್ಥಾನಕ್ಕೆ ಜೋಶ್ ಇಂಗ್ಲಿಸ್ ಬಂದಿದ್ದಾರೆ.

ಟೀಂ ಇಂಡಿಯಾ ಪ್ಲೇಯಿಂಗ್ 11
ಕೆಎಲ್ ರಾಹುಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜುವೇಂದ್ರ ಚಹಾಲ್

ದೀಪ್ತಿ ಶರ್ಮಾ ಮಾಡಿದ ರನೌಟ್‌ ಈಗ ಟಾಕ್ ಆಫ್‌ ದಿ ಟೌನ್.!

ಆಸ್ಟ್ರೇಲಿಯಾ ಪ್ಲೇಯಿಂಗ್ 11
ಆ್ಯೋರನ್ ಫಿಂಚ್(ನಾಯಕ), ಕ್ಯಾಮರೋನ್ ಗ್ರೀನ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ವೇಡ್, ಡೇನಿಯಲ್ ಸ್ಯಾಮ್ಸ್, ಪ್ಯಾಟ್ ಕಮಿನ್ಸ್, ಆ್ಯಡಂ ಜಂಪಾ, ಜೋಶ್ ಹೇಜಲ್‌ವುಡ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಮುಗ್ಗರಿಸಿತ್ತು. 208 ರನ್ ಸಿಡಿಸಿದ್ದ ಭಾರತ ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಬೃಹತ್ ಮೊತತವನ್ನು ಆಸ್ಟೇಲಿಯಾ ಯಶಸ್ವಿಯಾಗಿ ಚೇಸ್ ಮಾಡಿತ್ತು. ಆದರೆ ಎರಡನೇ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿತ್ತು. ಮಳೆಯಿಂದಾಗಿ ಪಂದ್ಯವನ್ನು 8 ಓವರ್‌ಗೆ ಸಮೀತಗೊಳಿಸಲಾಗಿತ್ತು. ಆಸ್ಟ್ರೇಲಿಯಾ 90 ರನ್ ಸಡಿಸಿತ್ತು. ಈ ಗುರಿಯನ್ನು ಭಾರತ 7.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ರೋಹಿತ್ ಶರ್ಮಾ 20 ಎಸೆತದಲ್ಲಿ ಅಜೇಯ 46 ರನ್ ಸಿಡಿಸಿದರೆ, ದಿನೇಶ್ ಕಾರ್ತಿಕ್ ಅಂತಿಮ ಎರಡು ಎಸೆತದಲ್ಲಿ ಸಿಕ್ಸರ್ ಹಾಗೂ ಬೌಂಡರಿ ಮೂಲಕ ಪಂದ್ಯ ಫಿನೀಶ್ ಮಾಡಿದರು. ಈ ಮೂಲಕ ಸರಣಿಯನ್ನು 1-1 ಅಂತರದಲ್ಲಿ ಸಮಬಲಗೊಳಿಸಿತ್ತು.

ಅಶಿಸ್ತು ತೋರಿದ ಯಶಸ್ವಿ ಜೈಸ್ವಾಲ್‌ಗೆ ಶಿಸ್ತಿನ ಪಾಠ ಮಾಡಿ ಮೈದಾನದ ಹೊರಗೆ ಕಳಿಸಿದ ಅಜಿಂಕ್ಯ ರಹಾನೆ..!

ವೇಡ್‌ ಅಬ್ಬರ, ಫಿಂಚ್‌ ಮಿಂಚು: 
2ನೇ ಟಿ20 ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಇಳಿದ ಆಸ್ಪ್ರೇಲಿಯಾಗೆ ನಾಯಕ ಆ್ಯರೋನ್‌ ಫಿಂಚ್‌ ಉತ್ತಮ ಆರಂಭ ಒದಗಿಸಿದರು. 15 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್‌ನೊಂದಿಗೆ 31 ರನ್‌ ಚಚ್ಚಿದರು. ಕೆಮರಾನ್‌ ಗ್ರೀನ್‌(05) ರನೌಟ್‌ ಬಲೆಗೆ ಬಿದ್ದರೆ, ಅಪಾಯಕಾರಿ ಗ್ಲೆನ್‌ ಮ್ಯಾಕ್ಸ್‌ವೆಲ್‌(0) ಹಾಗೂ ಟಿಮ್‌ ಡೇವಿಡ್‌(02)ರನ್ನು ಅಕ್ಷರ್‌ ಪಟೇಲ್‌ ಬೌಲ್ಡ್‌ ಮಾಡಿದರು. ಕಳೆದ ಪಂದ್ಯದಲ್ಲಿ ಗಮನ ಸೆಳೆದಿದ್ದ ಮ್ಯಾಥ್ಯೂ ವೇಡ್‌ ಮತ್ತೊಮ್ಮೆ ಅಬ್ಬರಿಸಿದರು. 20 ಎಸೆತದಲ್ಲಿ 4 ಬೌಂಡರಿ, 3 ಸಿಕ್ಸರ್‌ನೊಂದಿಗೆ 43 ರನ್‌ ಗಳಿಸಿ ಔಟಾಗದೆ ಉಳಿದರು. ಆಸ್ಪ್ರೇಲಿಯಾ ಪರ ಫಿಂಚ್‌ ಹಾಗೂ ವೇಡ್‌ 35 ಎಸೆತಗಳಲ್ಲಿ ಒಟ್ಟು 74 ರನ್‌ ಗಳಿಸಿದರೆ, ಉಳಿದ ಬ್ಯಾಟರ್‌ಗಳು 13 ಎಸೆತಗಳಲ್ಲಿ ಗಳಿಸಿದ್ದು ಕೇವಲ 15 ರನ್‌.