6,6,6,6..! ಸೂರ್ಯನ ಸಿಕ್ಸರ್ ಆರ್ಭಟಕ್ಕೆ ಕಾಂಗರೂ ಪಡೆ ಕಂಗಾಲು..! ಇಲ್ಲಿದೆ ಮತ್ತೆ ಮತ್ತೆ ನೋಡಬೇಕೆನಿಸುವ ಓವರ್
ಭಾನುವಾರ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದನ್ವಯ 99 ರನ್ ಗೆಲುವು ಸಾಧಿಸಿದ ಭಾರತ, 3 ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆ 2-0 ಅಂತರದಲ್ಲಿ ಗೆದ್ದುಕೊಂಡಿತು. ಜೊತೆಗೆ ಅಗ್ರಸ್ಥಾನವನ್ನೂ ಭದ್ರಪಡಿಸಿಕೊಂಡಿತು.
ಇಂದೋರ್(ಸೆ.25): ಆಸ್ಟ್ರೇಲಿಯಾ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮತ್ತೊಂದು ಸ್ಪೋಟಕ ಅರ್ಧಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಆಸೀಸ್ ವೇಗಿ ಕ್ಯಾಮರೋನ್ ಗ್ರೀನ್ ಬೌಲಿಂಗ್‌ನಲ್ಲಿ ಸತತ 4 ಎಸೆತಗಳಲ್ಲಿ 4 ಸಿಕ್ಸರ್ ಬಾರಿಸುವ ಮೂಲಕ ಕಾಂಗರೂ ಪಡೆ ತಬ್ಬಿಬ್ಬಾಗುವಂತೆ ಮಾಡಿದ್ದಾರೆ.
ಹೌದು, ಆಸ್ಟ್ರೇಲಿಯಾ ಎದುರಿನ ಮೊದಲ ಪಂದ್ಯದಲ್ಲೇ ಸಮಯೋಚಿತ ಅರ್ಧಶತಕ ಸಿಡಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದ ಸೂರ್ಯಕುಮಾರ್ ಯಾದವ್, ಎರಡನೇ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಆಸ್ಟ್ರೇಲಿಯಾ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಅದರಲ್ಲೂ ಭಾರತದ ಇನಿಂಗ್ಸ್‌ನ 43ನೇ ಓವರ್‌ನಲ್ಲಿ ಕ್ಯಾಮರೋನ್ ಗ್ರೀನ್ ಎಸೆದ ಮೊದಲ 4 ಎಸೆತಗಳಲ್ಲಿ 4 ಸಿಕ್ಸರ್ ಚಚ್ಚುವ ಮೂಲಕ ಅಭಿಮಾನಿಗಳನ್ನು ಬರಪೂರ ರಂಜಿಸಿದರು. ಒಂದು ಹಂತದಲ್ಲಿ ಸೂರ್ಯ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಬಹುದೇನೋ ಎನ್ನುವಂತ ಆಸೆ ಮೂಡಿಸಿದರು. ಆದರೆ 5ನೇ ಎಸೆತದಲ್ಲಿ ಸೂರ್ಯ ಸಿಕ್ಸರ್ ಬಾರಿಸುವುದನ್ನು ತಪ್ಪಿಸುವಲ್ಲಿ ಗ್ರೀನ್ ಯಶಸ್ವಿಯಾದರು.
ಭಾರತದ ದಾಳಿಗೆ ಆಸ್ಟ್ರೇಲಿಯಾ 217 ರನ್‌ಗೆ ಆಲೌಟ್, ಭರ್ಜರಿ ಗೆಲುವಿನೊಂದಿಗೆ ಏಕದಿನ ಸರಣಿ ಕೈವಶ!
ಹೀಗಿತ್ತು ನೋಡಿ ಸೂರ್ಯನ ಸಿಕ್ಸರ್ ಆರ್ಭಟ:
ಇನ್ನು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಎರಡನೇ ಪಂದ್ಯದ ಬಗ್ಗೆ ಹೇಳುವುದಾದರೇ,ತವರಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ತನ್ನ ಆತ್ಮವಿಶ್ವಾಸವನ್ನು ಭರ್ಜರಿಯಾಗಿಯೇ ಹೆಚ್ಚಿಸಿಕೊಂಡಿದೆ. ಭಾರತ ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಿಯಾಗಿಯೇ ಬಹುನಿರೀಕ್ಷಿತ ಟೂರ್ನಿಗೆ ಕಾಲಿಡಲಿದೆ. ಭಾನುವಾರ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದನ್ವಯ 99 ರನ್ ಗೆಲುವು ಸಾಧಿಸಿದ ಭಾರತ, 3 ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆ 2-0 ಅಂತರದಲ್ಲಿ ಗೆದ್ದುಕೊಂಡಿತು. ಜೊತೆಗೆ ಅಗ್ರಸ್ಥಾನವನ್ನೂ ಭದ್ರಪಡಿಸಿಕೊಂಡಿತು.
ಕೊನೆಗೂ ತನ್ನ ಇನಿಯನ ಮೇಲಿರುವ ಪ್ರೀತಿಯ ಗುಟ್ಟು ಬಿಚ್ಚಿಟ್ಟ ಸಾರಾ..! ತೆಂಡುಲ್ಕರ್ ಪುತ್ರಿಯ ಟ್ವೀಟ್ ವೈರಲ್
ಮೊದಲು ಬ್ಯಾಟ್ ಮಾಡಿ ರನ್ ಹೊಳೆಯೇ ಹರಿಸಿದ ಭಾರತ 50 ಓವರಲ್ಲಿ 5 ವಿಕೆಟ್‌ಗೆ 399 ರನ್ ಕಲೆಹಾಕಿತು. ಮಳೆ ಬಾಧಿತ ಪಂದ್ಯದಲ್ಲಿ 33 ಓವರಲ್ಲಿ 317 ರನ್ ಗುರಿ ಪಡೆದ ಆಸೀಸ್, 28.2 ಓವರ್‌ಗಳಲ್ಲಿ 217 ರನ್‌ಗೆ ಸರ್ವಪತನ ಕಂಡಿತು. ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಆಸೀಸ್ ಬ್ಯಾಟರ್‌ಗಳನ್ನು ಆರ್.ಅಶ್ವಿನ್(41ಕ್ಕೆ 3) ಹಾಗೂ ರವೀಂದ್ರ ಜಡೇಜಾ(42ಕ್ಕೆ 3) ಕಟ್ಟಿಹಾಕಿದರು. ಶಾನ್ ಅಬೋಟ್(54), ಡೇವಿಡ್ ವಾರ್ನರ್(53) ಹೊರತುಪಡಿಸಿ ಬೇರ್‍ಯಾರಿಗೂ ಕ್ರೀಸ್‌ನಲ್ಲಿ ನೆಲೆಯೂರಲಾಗಲಿಲ್ಲ.
ಸ್ಫೋಟಕ ಬ್ಯಾಟಿಂಗ್: ಬೃಹತ್ ಮೊತ್ತದ ನಿರೀಕ್ಷೆಯಲ್ಲಿಯೇ ಕ್ರೀಸ್‌ಗಿಳಿದ ಭಾರತದ ಬ್ಯಾಟರ್‌ಗಳು ಆರಂಭದಲ್ಲೇ ಆಸೀಸ್ ಬೌಲರ್‌ಗಳನ್ನು ಚೆಂಡಾಡಲು ಶುರು ಮಾಡಿದರು. 2ನೇ ವಿಕೆಟ್‌ಗೆ ಶುಭ್‌ಮನ್ ಗಿಲ್-ಶ್ರೇಯಸ್ ಅಯ್ಯರ್ ಬರೋಬ್ಬರಿ 200 ರನ್ ಜೊತೆಯಾಟವಾಡಿದರು. ಈ ವರ್ಷ 6ನೇ ಅಂತಾರಾಷ್ಟ್ರೀಯ ಶತಕ ಪೂರ್ಣಗೊಳಿಸಿದ ಗಿಲ್ 104ಕ್ಕೆ ವಿಕೆಟ್ ಒಪ್ಪಿಸಿದರೆ, ಮರಳಿ ಲಯ ಕಂಡುಕೊಂಡ ಶ್ರೇಯಸ್ 105 ರನ್ ಸಿಡಿಸಿದರು. ಬಳಿಕ ಸೂರ್ಯಕುಮಾರ್(37 ಎಸೆತಗಳಲ್ಲಿ ಔಟಾಗದೆ 72), ಕೆ.ಎಲ್.ರಾಹುಲ್(52), ಇಶಾನ್ ಕಿಶನ್(31) ತಂಡವನ್ನು 400ರ ಸನಿಹಕ್ಕೆ ತಲುಪಿಸಿದರು.