ಮೆಲ್ಬರ್ನ್(ಡಿ.25)‌: ಭಾರತ ಹಾಗೂ ಆಸ್ಪ್ರೇಲಿಯಾ ನಡುವಿನ 3ನೇ ಟೆಸ್ಟ್‌ ಪಂದ್ಯ ಸಿಡ್ನಿ ಬದಲಿಗೆ ಮೆಲ್ಬರ್ನ್‌ನಲ್ಲೇ ನಡೆಯುವ ಸಾಧ್ಯತೆ ಇದೆ. ಸಿಡ್ನಿಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 2ನೇ ಅಲೆ ಭೀತಿ ಶುರುವಾಗಿದೆ. 

ಹೀಗಾಗಿ, ಜನವರಿ 7ರಿಂದ ಸಿಡ್ನಿ ಕ್ರಿಕೆಟ್‌ ಮೈದಾನ (ಎಸ್‌ಸಿಜಿ)ದಲ್ಲಿ ನಡೆಯಬೇಕಿರುವ 3ನೇ ಪಂದ್ಯವನ್ನು ಮೆಲ್ಬರ್ನ್‌ಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಒಂದು ವಾರದಲ್ಲಿ ಸಿಡ್ನಿಯಲ್ಲಿ ನೂರಕ್ಕೂ ಅಧಿಕ ಕೊರೋನಾ ಪ್ರಕರಣಗಳು ಪತ್ತೆಯಾಗುವುದರ ಮೂಲಕ ಕಾಂಗರೂ ನಾಡಿನಲ್ಲಿ ಆತಂಕ ಮನೆಮಾಡುವಂತೆ ಮಾಡಿದೆ. ಹೀಗಾಗಿ ಸಿಡ್ನಿ ನಗರದಾದ್ಯಂತ ಲಾಕ್‌ಡೌನ್ ಹಾಗೂ ಅಂತರಾಜ್ಯ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ.

ಬಾಕ್ಸಿಂಗ್ ಡೇ ಟೆಸ್ಟ್‌ಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ; 4 ಬದಲಾವಣೆ..!

ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಹಂಗಾಮಿ ಅಧ್ಯಕ್ಷ ನಿಕ್ ಹಾಕ್ಲೀ, ಮೂರನೇ ಟೆಸ್ಟ್‌ ಪಂದ್ಯ ಎಲ್ಲಿ ನಡೆಸಬೇಕು ಎನ್ನುವುದರ ತೀರ್ಮಾನವನ್ನು ಶನಿವಾರದಿಂದ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ವೇಳೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.