* ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್‌ಗೆ ಇಂದೋರ್ ಆತಿಥ್ಯ* ಮಾರ್ಚ್‌ 01ರಿಂದ ಆರಂಭವಾಗಲಿರುವ ಮೂರನೇ ಟೆಸ್ಟ್* 6 ದಿನಗಳ ವಿಶ್ರಾಂತಿ ಬಳಿಕ ತಂಡ ಕೂಡಿಕೊಂಡ ಭಾರತ

ನವ​ದೆ​ಹ​ಲಿ(ಫೆ.26): ಆಸ್ಪ್ರೇ​ಲಿಯಾ ವಿರು​ದ್ಧದ 2ನೇ ಟೆಸ್ಟ್‌ ಪಂದ್ಯ​ವನ್ನು ಕೇವಲ 3 ದಿನ​ಗ​ಳೊ​ಳಗೆ ಜಯಿ​ಸಿ ಬಳಿಕ 6 ದಿನ​ಗಳ ವಿಶ್ರಾಂತಿ ಪಡೆದ ಭಾರತೀಯ ಆಟ​ಗಾ​ರ​ರು ಶನಿ​ವಾರ ಇಂದೋ​ರ್‌ಗೆ ಮರ​ಳಿದ್ದು, ತಂಡ ಕೂಡಿ​ಕೊಂಡಿ​ದ್ದಾರೆ. ಫೆಬ್ರವರಿ 17ಕ್ಕೆ ಆರಂಭ​ಗೊಂಡಿ​ದ್ದ 2ನೇ ಟೆಸ್ಟ್‌ ಪಂದ್ಯ ಕೇವಲ ಮೂರೇ ದಿನಕ್ಕೆ ಕೊನೆ​ಗೊಂಡಿತ್ತು. ಹೀಗಾಗಿ ಬಿಸಿ​ಸಿಐ ಆಟ​ಗಾ​ರ​ರಿಗೆ 6 ದಿನ​ಗಳ ಕಾಲ ವಿಶ್ರಾಂತಿ ನೀಡಿತ್ತು. 

ಕೆಲ ಆಟ​ಗಾ​ರರು ತಮ್ಮ ಮನೆಗಳಿಗೆ ತೆರಳಿದ್ದು, ಇನ್ನೂ ಕೆಲವರು ಪ್ರವಾಸಕ್ಕೆ ಹೋಗಿದ್ದರು. ಸದ್ಯ ಬಹು​ತೇಕ ಎಲ್ಲರೂ ಇಂದೋ​ರ್‌ಗೆ ಆಗ​ಮಿ​ಸಿ​ದ್ದಾರೆ. ಅವರು ಭಾನು​ವಾರ ಅಭ್ಯಾಸ ಆರಂಭಿ​ಸ​ಲಿ​ದ್ದಾರೆ. ಇದೇ ವೇಳೆ ಆಸೀಸ್‌ ಆಟ​ಗಾ​ರರು ದೆಹ​ಲಿ​ಯಲ್ಲೇ ಅಭ್ಯಾಸ ನಡೆ​ಸು​ತ್ತಿದ್ದು, ಭಾನು​ವಾರ ಇಂದೋ​ರ್‌ಗೆ ಆಗ​ಮಿ​ಸುವ ನಿರೀ​ಕ್ಷೆ​ಯಿದೆ. 3ನೇ ಟೆಸ್ಟ್‌ ಪಂದ್ಯ ಮಾರ್ಚ್‌ 1ಕ್ಕೆ ಆರಂಭ​ವಾ​ಗ​ಲಿ​ದೆ.

4 ಪಂದ್ಯಗಳ ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ 2-0 ಮುನ್ನಡೆ ಕಾಯ್ದುಕೊಂಡಿದೆ. ಮೊದಲೆರಡು ಪಂದ್ಯ ಗೆದ್ದು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಉಳಿಸಿಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಇನ್ನು ಮೂರನೇ ಟೆಸ್ಟ್ ಪಂದ್ಯವನ್ನು ಜಯಿಸುವ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆಗಿಟ್ಟಿಸಿಕೊಳ್ಳಲು ಎದುರು ನೋಡುತ್ತಿದೆ. 

ನನ್ನ ಕಣ್ಣೀ​ರು ದೇಶ ನೋಡಬಾರದೆಂದ ಹರ್ಮನ್‌ಪ್ರೀತ್ ಕೌರ್‌ಗೆ ತಂದೆಯೇ ಮೊದಲ ಗುರು, ಸೆಹ್ವಾಗ್‌ ಆರಾಧ್ಯ ದೈವ..!

ಇನ್ನು ಇದಷ್ಟೇ ಅಲ್ಲದೇ, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇಂದೋರ್ ಟೆಸ್ಟ್‌ ಪಂದ್ಯವನ್ನು ಜಯಿಸಿದರೆ, ಅಧಿಕೃತವಾಗಿ ವಿಶ್ವ ಟೆಸ್ಟ್‌ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೆ ಲಗ್ಗೆಯಿಡಲಿದೆ. 

ಇಂದೋರ್‌ಗಿಂದು ಆಸ್ಟ್ರೇಲಿಯಾ ತಂಡ ಆಗಮನ

ಸತತ 2 ಸೋಲಿನಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾ ತಂಡ ಭಾನುವಾರ ಇಂದೋರ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಅವರು ಸೋಮವಾರದಿಂದ ಅಭ್ಯಾಸ ಆರಂಭಿಸಲಿದ್ದಾರೆ. 2ನೇ ಟೆಸ್ಟ್‌ ಮುಕ್ತಾಯಗೊಂಡ ಬಳಿಕ ಆಸ್ಟ್ರೇಲಿಯಾ ಆಟಗಾರರು ದೆಹಲಿಯ ಕ್ರೀಡಾಂಗಣದಲ್ಲೇ ಅಭ್ಯಾಸ ನಿರತರಾಗಿದ್ದಾರೆ. ತಂಡದ ಹಲವು ಆಟಗಾರರು ಈಗಾಗಲೇ ಹಲವು ಕಾರಣಗಳಿಂದಾಗಿ ತವರಿಗೆ ಮರಳಿದ್ದು, ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ನಾಲ್ಕನೇ ಟೆಸ್ಟ್‌ಗೆ ಭಾರತದ ಟೆಸ್ಟ್ ತಂಡ: 

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (WK), ಇಶಾನ್ ಕಿಶನ್ (wk), ಆರ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜೈದೇವ್‌ ಉನಾದ್ಕತ್‌.