ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ನಾಗ್ಪುರ ಟೆಸ್ಟ್ ಎರಡೂವರೆ ದಿನಕ್ಕೆ ಮುಕ್ತಾಯಪಂದ್ಯ ಮುಗಿದ ಬಳಿಕ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಅಭ್ಯಾಸ ನಡೆಸಲು ಮುಂದಾಗಿದ್ದ ಆಸೀಸ್‌ಗೆ ನಿರಾಸೆಶನಿವಾರ ರಾತ್ರಿಯೇ ಪಿಚ್‌ಗೆ ನೀರುಣಿಸಿದ ಮೈದಾನ ಸಿಬ್ಬಂದಿ ಆಸೀಸ್‌ಗೆ ಅಭ್ಯಾಸ ನಡೆಸಲು ನಿರಾಕರಣೆ

ನಾಗ್ಪುರ(ಫೆ.13): ಆಸ್ಪ್ರೇಲಿಯಾ ಕ್ರಿಕೆಟ್‌ ತಂಡಕ್ಕೆ ಮಾರಕವಾದ ಇಲ್ಲಿನ ವಿಸಿಎ ಕ್ರೀಡಾಂಗಣದ ಪಿಚ್‌ನಲ್ಲಿ ಹೆಚ್ಚುವರಿ ಅಭ್ಯಾಸ ನಡೆಸುವ ಆಸ್ಪ್ರೇಲಿಯಾ ತಂಡದ ಯೋಜನೆಗೆ ಮೈದಾನ ಸಿಬ್ಬಂದಿ ತಣ್ಣೀರೆರೆಚಿದರು. ಮೂರನೇ ದಿನಕ್ಕೆ ಮೊದಲ ಟೆಸ್ಟ್‌ ಸೋತ ಆಸೀಸ್‌, ಭಾನುವಾರ ಅಭ್ಯಾಸ ನಡೆಸಲು ಅವಕಾಶ ನೀಡುವಂತೆ ಕ್ರೀಡಾಂಗಣದ ಪಿಚ್‌ ಕ್ಯುರೇಟರ್‌ಗೆ ಮನವಿ ಸಲ್ಲಿಸಿತ್ತು. 

ಆದರೆ ಶನಿವಾರ ರಾತ್ರಿಯೇ ಪಿಚ್‌ಗೆ ನೀರುಣಿಸಿದ ಮೈದಾನ ಸಿಬ್ಬಂದಿ ಆಸೀಸ್‌ಗೆ ಅಭ್ಯಾಸ ನಡೆಸಲು ನಿರಾಕರಿಸಿದರು ಎಂದು ತಿಳಿದುಬಂದಿದೆ. 2ನೇ ಟೆಸ್ಟ್‌ ದೆಹಲಿಯಲ್ಲಿ ನಡೆಯಲಿದ್ದು, ಅರುಣ್‌ ಜೇಟ್ಲಿ ಕ್ರೀಡಾಂಗಣದ ಪಿಚ್‌ ಕೂಡ ಸ್ಪಿನ್‌ ಸ್ನೇಹಿಯಾಗಿರಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತ್ತು. ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಮಾರಕ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡವು 177 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇನ್ನು ಇದಾದ ಬಳಿಕ ರೋಹಿತ್ ಶರ್ಮಾ ಬಾರಿಸಿದ ಆಕರ್ಷಕ ಶತಕ ಹಾಗೂ ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ಬಾರಿಸಿದ ಕೆಚ್ಚೆದೆಯ ಅರ್ಧಶತಕಗಳ ನೆರವಿನಿಂದ ಮೊದಲ ಇನ್ನಿಂಗ್‌್ಸ​ನಲ್ಲಿ 400 ರನ್‌ ಕಲೆ​ಹಾಕಿ, ಬರೋ​ಬ್ಬರಿ 223 ರನ್‌​ ಇನ್ನಿಂಗ್‌್ಸ ಮುನ್ನಡೆ ಪಡೆ​ದಿತ್ತು.

ನಾವು ಬೇರೆ ಪಿಚ್‌ನಲ್ಲಿ ಆಡ್ತೀವಾ ಎಂದು ಆಸ್ಟ್ರೇಲಿಯಾ ಕಾಲೆಳೆದ ರವಿಚಂದ್ರನ್‌ ಅಶ್ವಿನ್‌

ಇನ್ನು ಆತಿಥೇಯ ಭಾರತ ಇನ್ನಿಂಗ್‌್ಸ ಗೆಲು​ವಿನ ತವ​ಕ​ಲ್ಲಿ​ತ್ತಾ​ದರೂ ಆಸೀ​ಸ್‌​ನಿಂದ ಪ್ರಬಲ ಹೋರಾ​ಟ ನಿರೀ​ಕ್ಷಿ​ಸಿತ್ತು. ಆದರೆ ಮೊದಲ ಇನ್ನಿಂಗ್‌್ಸ​ನಂತೆ ಮತ್ತೊಮ್ಮೆ ಸ್ಪಿನ್ನ​ರ್‌​ಗಳ ಮುಂದೆ ಪೇಚಾ​ಡಿದ ಕಮಿನ್ಸ್‌ ಬಳಗ ಕೇವಲ 32.3 ಓವ​ರ್‌​ಗ​ಳಲ್ಲಿ ಹೋರಾಟ ಕೊನೆ​ಗೊ​ಳಿ​ಸಿತು. 

ಭಾರತ ತಂಡದಿಂದ ಉನಾದ್ಕತ್‌ ಬಿಡುಗಡೆ, ರಣಜಿ ಫೈನಲ್‌ನಲ್ಲಿ ಕಣಕ್ಕೆ

ಮುಂಬೈ: ಬಂಗಾಳ ವಿರುದ್ಧ ಫೆ.16ರಿಂದ ಆರಂಭ​ವಾ​ಗ​ಲಿ​ರುವ ರಣಜಿ ಟ್ರೋಫಿ ಫೈನಲ್‌ ಪಂದ್ಯ​ದಲ್ಲಿ ಆಡುವು​ದ​ಕ್ಕಾ​ಗಿ ಸೌರಾ​ಷ್ಟ್ರದ ವೇಗಿ ಜಯ್‌​ದೇವ್‌ ಉನಾ​ದ್ಕ​ತ್‌​ರನ್ನು ಆಸ್ಪ್ರೇ​ಲಿಯಾ ವಿರು​ದ್ಧದ ಟೆಸ್ಟ್‌ ಸರ​ಣಿ​ಯ 2ನೇ ಟೆಸ್ಟ್‌ಗೂ ಮುನ್ನ ಭಾರತ ತಂಡ​ದಿಂದ ಬಿಡು​ಗ​ಡೆ​ಗೊ​ಳಿ​ಸ​ಲಾ​ಗಿದೆ. ಸರ​ಣಿಯ ಮೊದಲ ಟೆಸ್ಟ್‌​ನಲ್ಲಿ ಉನಾ​ದ್ಕತ್‌ ಆಡಿ​ರ​ಲಿಲ್ಲ.

2ನೇ ಟೆಸ್ಟ್‌​ನಲ್ಲೂ ಅವ​ರಿಗೆ ಅವ​ಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನುವುದನ್ನು ಮನಗಂಡ ಬಿಸಿಸಿಐ ತಂಡದಿಂದ ಬಿಡುಗಡೆ ಮಾಡಿದೆ. ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ವೇಗಿಗಳ ರೂಪದಲ್ಲಿ ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ಕಣಕ್ಕಿಳಿದಿದ್ದರು. ಇದೀಗ ಎರಡನೇ ಟೆಸ್ಟ್‌ ಪಂದ್ಯದಲ್ಲೂ ಈ ಇಬ್ಬರು ವೇಗಿಗಳೇ ತಂಡದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಹೀಗಾಗಿ ಉನಾದ್ಕತ್ ಅವರನ್ನು ಭಾರತ ತಂಡದಿಂದ ಬಿಡುಗಡೆಗೊಳಿಸಲಾಗಿದೆ. ಇದೀಗ ರಣಜಿ ಟ್ರೋಫಿ ಫೈನಲ್‌ನಲ್ಲಿ ಉನಾದ್ಕತ್‌ ಸೌರಾಷ್ಟ್ರ ತಂಡವನ್ನು ಮುನ್ನಡೆಸಲಿದ್ದಾರೆ. ಇದೀಗ ಫೆಬ್ರವರಿ 16ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ ಸೌರಾಷ್ಟ್ರ ಹಾಗೂ ಬೆಂಗಾಲ್ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.

ಮೂರನೇ ಟೆಸ್ಟ್‌ ಬೆಂಗಳೂರಿಗೆ ಶಿಫ್ಟ್?

ಧರ್ಮ​ಶಾ​ಲಾ: ​ಮೈದಾ​ನ​ದ ನವೀ​ಕ​ರಣ ಕಾಮ​ಗಾರಿ ಇನ್ನೂ ಪೂರ್ಣ​ಗೊ​ಳ್ಳದ ಕಾರಣ ಮಾರ್ಚ್ 1ರಿಂದ ಧರ್ಮ​ಶಾಲಾ ಕ್ರೀಡಾಂಗ​ಣ​ದಲ್ಲಿ ನಿಗ​ದಿ​ಯಾ​ಗಿ​ದ್ದ ಭಾರ​ತ-ಆಸ್ಪ್ರೇ​ಲಿಯಾ 3ನೇ ಟೆಸ್ಟ್‌ ಪಂದ್ಯ ಬೇರೆ​ಡೆಗೆ ಸ್ಥಳಾಂತ​ರ​ಗೊಂಡಿದೆ ಎಂದು ವರ​ದಿ​ಯಾ​ಗಿ​ದೆ. ಇದನ್ನು ಬಿಸಿ​ಸಿಐ ಅಧಿ​ಕಾ​ರಿ​ಗಳು ಖಚಿ​ತ​ಪ​ಡಿ​ಸಿ​​ದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಬದಲಿ ತಾಣವನ್ನು ಬಿಸಿ​ಸಿಐ ಪ್ರಕ​ಟಿ​ಸ​ಲಿದೆ.

ಧರ್ಮ​ಶಾಲಾ ಕ್ರೀಡಾಂಗ​ಣ​ವನ್ನು ಭಾನು​ವಾರ ಬಿಸಿ​ಸಿಐ ಪಿಚ್‌ ಕ್ಯುರೇ​ಟರ್‌ ತಪೋಸ್‌ ಚಟರ್ಜಿ ಪರಿ​ಶೀ​ಲಿ​ಸಿದ್ದು, ಶೀಘ್ರ​ದಲ್ಲೇ ಮಂಡ​ಳಿಗೆ ವರದಿ ಸಲ್ಲಿ​ಸ​ಲಿ​ದ್ದಾರೆ. ಆ ಬಳಿಕ ಬಿಸಿ​ಸಿಐ ಅಧಿ​ಕೃತ ನಿರ್ಧಾರ ಕೈಗೊ​ಳ್ಳ​ಲಿ​ದೆ. ಪಂದ್ಯವನ್ನು ಬೆಂಗ​ಳೂ​ರಿನ ಚಿನ್ನ​ಸ್ವಾಮಿ ಕ್ರೀಡಾಂಗಣ ಅಥವಾ ವಿಶಾ​ಖ​ಪ​ಟ್ಟ​ಣಂ ಆಂಧ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗ​ಣಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮೊಹಾಲಿ, ರಾಜ್‌ಕೋಟ್‌, ಇಂದೋರ್‌ ಸಹ ಮೂರನೇ ಟೆಸ್ಟ್‌ ಆತಿಥ್ಯದ ರೇಸ್‌ನಲ್ಲಿವೆ.