Ind vs Aus 3rd T20I: ಭಾರತದ ಯುವ ಪಡೆಗೆ ಸರಣಿ ಗೆಲ್ಲುವ ಗುರಿ

ಗುವಾಹಟಿಯಲ್ಲಿ ನಡೆಯಲಿರುವ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದು. ಭಾರತ ಗೆದ್ದರೆ ಇನ್ನೆರಡು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶಪಡಿಸಿಕೊಳ್ಳಲಿದ್ದು, ಆಸೀಸ್‌ ಪಾಲಿಗೆ ಸರಣಿ ಉಳಿಸಿಕೊಳ್ಳಲು ಈ ಪಂದ್ಯದಲ್ಲಿ ಜಯ ಅಗತ್ಯ. ಭಾರತ ಟಿ20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 4ನೇ ಸರಣಿ ಜಯದ ನಿರೀಕ್ಷೆಯಲ್ಲಿದೆ.

Ind vs Aus 3rd T20I Team India eyes on Series win against Australia kvn

ಗುವಾಹಟಿ(ನ.28): ವಿಶ್ವಕಪ್‌ ಫೈನಲ್‌ನ ಸೋಲಿನ ಬಳಿಕ ಮೊದಲೆರಡು ಟಿ20 ಪಂದ್ಯಗಳ ಗೆಲುವಿನೊಂದಿಗೆ ಆತ್ಮವಿಶ್ವಾಸ ಕಂಡುಕೊಂಡಿರುವ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಹ್ಯಾಟ್ರಿಕ್‌ ಜಯದ ನಿರೀಕ್ಷೆಯಲ್ಲಿದೆ. ಉಭಯ ತಂಡಗಳು ಮಂಗಳವಾರ 3ನೇ ಟಿ20 ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದು, ಭಾರತ 5 ಪಂದ್ಯಗಳ ಸರಣಿಯ ಗೆಲುವಿನ ಓಟವನ್ನು 3-0ಗೆ ಹೆಚ್ಚಿಸಲು ಕಾಯುತ್ತಿದೆ. ಅತ್ತ ಆಸೀಸ್‌ ಸರಣಿಯಲ್ಲಿ ಮೊದಲ ಗೆಲುವಿಗಾಗಿ ತವಕಿಸುತ್ತಿದೆ.

ಗುವಾಹಟಿಯಲ್ಲಿ ನಡೆಯಲಿರುವ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದು. ಭಾರತ ಗೆದ್ದರೆ ಇನ್ನೆರಡು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶಪಡಿಸಿಕೊಳ್ಳಲಿದ್ದು, ಆಸೀಸ್‌ ಪಾಲಿಗೆ ಸರಣಿ ಉಳಿಸಿಕೊಳ್ಳಲು ಈ ಪಂದ್ಯದಲ್ಲಿ ಜಯ ಅಗತ್ಯ. ಭಾರತ ಟಿ20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 4ನೇ ಸರಣಿ ಜಯದ ನಿರೀಕ್ಷೆಯಲ್ಲಿದೆ.

2025ರ ಚಾಂಪಿಯನ್ಸ್‌ ಟ್ರೋಫಿಯೂ ಪಾಕ್‌ನಿಂದ ಸ್ಥಳಾಂತರ?

ಲಯಕ್ಕೆ ಮರಳುತ್ತಾರಾ ತಿಲಕ್‌?: ಸರಣಿಯ ಕೊನೆ 2 ಪಂದ್ಯಗಳಿಗೆ ಶ್ರೇಯಸ್‌ ಅಯ್ಯರ್‌ ತಂಡ ಕೂಡಕೊಳ್ಳಲಿದ್ದು, ಉಪನಾಯಕತ್ವ ವಹಿಸಲಿದ್ದಾರೆ. ಅವರು ತಂಡಕ್ಕೆ ಬಂದರೆ ತಿಲಕ್‌ ವರ್ಮಾ ಸ್ಥಾನ ಬಿಟ್ಟುಕೊಡಬೇಕಾಗಬಹುದು. ಹೀಗಾಗಿ ಮೊದಲೆರಡು ಪಂದ್ಯಗಳಲ್ಲಿ ಹೆಚ್ಚಿನ ಅವಕಾಶ ಲಭಿಸದ ತಿಲಕ್‌, ಈ ಪಂದ್ಯದಲ್ಲಾದರೂ ದೊಡ್ಡ ಇನ್ನಿಂಗ್ಸ್‌ ಕಟ್ಟಬೇಕಾದ ಅನಿವಾರ್ಯತೆ ಇದೆ.

ಇತರ ಬ್ಯಾಟರ್‌ಗಳು ತಮ್ಮ ಆಯ್ಕೆ ಸಮರ್ಥಿಸಿಕೊಳ್ಳುವ ರೀತಿ ಪ್ರದರ್ಶನ ನೀಡುತ್ತಿದ್ದು, ಈ ಪಂದ್ಯದಲ್ಲೂ ಆಸೀಸ್‌ ಬೌಲರ್‌ಗಳನ್ನು ಚೆಂಡಾಡಲು ಕಾಯುತ್ತಿದ್ದಾರೆ. ಬೌಲರ್‌ಗಳು ಕಳೆದೆರಡೂ ಪಂದ್ಯಗಳಲ್ಲಿ ದುಬಾರಿಯಾಗಿದ್ದು, ವಿಕೆಟ್‌ ಪಡೆದುಕೊಳ್ಳುವುದರ ಜೊತೆಗೆ ರನ್‌ ಹರಿಯುವಿಕೆಗೂ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದೆ.

ಆಟಗಾರರ ರೀಟೈನ್ & ರಿಲೀಸ್ ಬಳಿಕ ಯಾವ ಫ್ರಾಂಚೈಸಿ ಬಳಿ ಎಷ್ಟು ಹಣ ಉಳಿದಿದೆ..?

ಮತ್ತೊಂದೆಡೆ ಆಸೀಸ್ ಕಳೆದ ಪಂದ್ಯದಲ್ಲಿ ಕೆಲ ಹಿರಿಯ ಆಟಗಾರರ ಜೊತೆ ಕಣಕ್ಕಿಳಿದಿದ್ದರೂ ಗೆಲುವು ಲಭಿಸಿಲ್ಲ. ಈ ಪಂದ್ಯದಲ್ಲಿ ಮತ್ತಷ್ಟು ಸುಧಾರಿತ ಪ್ರದರ್ಶನ ನೀಡಿ ಸರಣಿ ಸೋಲಿನ ಮುಖಭಂಗ ತಪ್ಪಿಸಿಕೊಳ್ಳಲು ಕಾಯುತ್ತಿದೆ. ಗ್ಲೆನ್‌ ಮ್ಯಾಕ್ಸ್‌ವೆಲ್‌, ಸ್ಟೀವ್‌ ಸ್ಮಿತ್‌, ಆ್ಯಡಂ ಜಂಪಾ, ಮಾರ್ಕಸ್‌ ಸ್ಟೋಯ್ನಿಸ್‌ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

4ನೇ ಸರಣಿ ಗೆಲುವಿನ ಮೇಲೇ ಭಾರತ ಕಣ್ಣು

ಭಾರತ-ಆಸ್ಟ್ರೇಲಿಯಾ ಈ ವರೆಗೆ 7 ಟಿ20 ಸರಣಿಗಳನ್ನು ಆಡಿವೆ. ಈ ಪೈಕಿ ಭಾರತ 3 ಬಾರಿ ಸರಣಿ ಜಯಗಳಿಸಿದ್ದು, ಆಸೀಸ್‌ ಏಕೈಕ ಸರಣಿ ತನ್ನದಾಗಿಸಿಕೊಂಡಿದೆ. ಉಳಿದಂತೆ 3 ಬಾರಿ ಸರಣಿ ಡ್ರಾಗೊಂಡಿದ್ದವು. 2020-21 ಮತ್ತು 2022ರಲ್ಲಿ ಕಳೆದೆರಡು ಸರಣಿಗಳಲ್ಲಿ ಭಾರತ ಗೆಲುವು ಸಾಧಿಸಿದೆ.

ಒಟ್ಟು ಮುಖಾಮುಖಿ: 28

ಭಾರತ: 17

ಆಸ್ಟ್ರೇಲಿಯಾ: 10

ಫಲಿತಾಂಶವಿಲ್ಲ: 01

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಯಶಸ್ವಿ ಜೈಸ್ವಾಲ್‌, ಋತುರಾಜ್‌ ಗಾಯಕ್ವಾಡ್, ಇಶಾನ್‌ ಕಿಶನ್, ಸೂರ್ಯಕುಮಾರ್‌ ಯಾದವ್(ನಾಯಕ), ತಿಲಕ್‌ ವರ್ಮಾ, ರಿಂಕು ಸಿಂಗ್‌, ಅಕ್ಷರ್‌ ಪಟೇಲ್, ಬಿಷ್ಣೋಯ್‌, ಅರ್ಶ್‌ದೀಪ್‌, ಪ್ರಸಿದ್ಧ್‌, ಮುಕೇಶ್‌.

ಆಸ್ಟ್ರೇಲಿಯಾ: ಸ್ಮಿತ್‌, ಶಾರ್ಟ್‌, ಇಂಗ್ಲಿಸ್‌, ಮ್ಯಾಕ್ಸ್‌ವೆಲ್‌, ಸ್ಟೋಯ್ನಿಸ್‌, ಡೇವಿಡ್‌, ವೇಡ್‌(ನಾಯಕ), ಅಬ್ಬಾಟ್‌, ಎಲ್ಲೀಸ್‌, ಆ್ಯಡಂ ಜಂಪಾ, ತನ್ವೀರ್‌ ಸಂಘ.

ಪಂದ್ಯ ಆರಂಭ: ಸಂಜೆ 7ಕ್ಕೆ,

ನೇರ ಪ್ರಸಾರ: ಸ್ಪೋರ್ಟ್ಸ್‌ 18, ಜಿಯೋ ಸಿನಿಮಾ
 

Latest Videos
Follow Us:
Download App:
  • android
  • ios