ಹೈದರಾಬಾದ್[ಮಾ.02]: ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಆರಂಭ ಪಡೆದಿದೆ. ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ತಮ್ಮ ನೂರನೇ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್’ನಲ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾಗೆ ಜಸ್ಪ್ರೀತ್ ಬುಮ್ರಾ ಮತ್ತೊಮ್ಮೆ ಶಾಕ್ ನೀಡುವಲ್ಲಿ ಯಶಸ್ವಿಯಾದರು. ಮೊದಲ ಓವರ್’ನಲ್ಲಿ ಶಿಸ್ತಿನ ದಾಳಿ ಸಂಘಟಿಸಿದ ಮೊಹಮ್ಮದ್ ಶಮಿ ಪ್ರವಾಸಿ ತಂಡಕ್ಕೆ ಯಾವುದೇ ರನ್ ಬಿಟ್ಟುಕೊಡಲಿಲ್ಲ. ಎರಡನೇ ಓವರ್’ನಲ್ಲಿ ದಾಳಿಗಿಳಿದ ಬುಮ್ರಾ ತಾವೆಸೆದ ಮೂರನೇ ಎಸೆತದಲ್ಲಿ ಫಿಂಚ್ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಏಕದಿನ ಕ್ರಿಕೆಟ್’ನಲ್ಲಿ ಫಿಂಚ್ ಬ್ಯಾಟಿಂಗ್ ವೈಫಲ್ಯ ಮುಂದುವರೆದಿದ್ದು, ಕಳೆದ 8 ಪಂದ್ಯಗಳಲ್ಲಿ ಕ್ರಮವಾಗಿ 22, 05, 41, 11, 06, 06, 14, 0 ರನ್ ಬಾರಿಸಿದ್ದಾರೆ.

ಇದೀಗ 4 ಓವರ್ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ 1 ವಿಕೆಟ್ ಕಳೆದುಕೊಂಡು 13 ರನ್ ಬಾರಿಸಿದೆ. ಉಸ್ಮಾನ್ ಖ್ವಾಜಾ[4] ಹಾಗೂ ಮಾರ್ಕಸ್ ಸ್ಟೋನಿಸ್[7] ಬ್ಯಾಟಿಂಗ್ ನಡೆಸುತ್ತಿದ್ದಾರೆ.