ಬೆಂಗಳೂರಿನಲ್ಲಿ 3ನೇ ಟಿ20, ಆಫ್ಘಾನಿಸ್ತಾನ ವಿರುದ್ಧ ಟಾಸ್ ಗೆದ್ದ ಭಾರತ ತಂಡದಲ್ಲಿ 3 ಬದಲಾವಣೆ!
ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ 3ನೇ ಹಾಗೂ ಅಂತಿಮ ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಬದಲಾವಣೆ ಏನು? ಇಲ್ಲಿದೆ.
ಬೆಂಗಳೂರು(ಜ.17) ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಟ20 ಟೂರ್ನಿ ಅಂತಿಮ ಘಟ್ಟ ತಲುಪಿದೆ. ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಆಡುತ್ತಿರುವ ಕೊನೆಯ ಟಿ20 ಪಂದ್ಯ ಇದಾಗಿದೆ. ಹೀಗಾಗಿ ಟೀಂ ಇಂಡಿಯಾ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯಕ್ಕೆ ಭಾರತ ಮೂರು ಬದಲಾವಣೆ ಮಾಡಿದೆ. ಅಕ್ಸರ್ ಪಟೇಲ್, ಜಿತೇಶ್ ಶರ್ಮಾ ಹಾಗೂ ಅಶರ್ದೀಪ್ ಸಿಂಗ್ ತಂಡದಿಂದ ಹೊರಗುಳಿದರೆ, ಈ ಸ್ಥಾನಕ್ಕೆ ಸಂಜು ಸ್ಯಾಮ್ಸನ್, ಕುಲ್ದೀಪ್ ಹಾಗೂ ಅವೇಶ್ ಖಾನ್ ಆಗಮಿಸಿದ್ದಾರೆ.
ಭಾರತದ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಶಿವಂ ದುಬೆ, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ವಾಶಿಂಗ್ಟನ್ ಸುಂದರ್, ರವಿ ಬಿಶ್ನೋಯ್, ಮುಕೇಶ್ ಕುಮಾರ್, ಕುಲ್ದೀಪ್ ಯಾದವ್, ಆವೇಶ್ ಖಾನ್
ಕೊಹ್ಲಿ-ರೋಹಿತ್‌ಗಿಂದು ಮಹತ್ವದ ಪಂದ್ಯ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊಹ್ಲಿಗೆ ಭಾರತ ಪರ ಲಾಸ್ಟ್ ಟಿ20 ಮ್ಯಾಚ್..!
ಆರಂಭಿಕ 2 ಪಂದ್ಯದಲ್ಲಿ ಮುಗ್ಗರಿಸಿ ಸರಣಿ ಕೈಚೆಲ್ಲಿರುವ ಆಫ್ಘಾನಿಸ್ತಾನ ಇದೀಗ 3ನೇ ಟಿ20 ಪಂದ್ಯಕ್ಕೆ ಕೆಲ ಬದಲಾವಣೆ ಮಾಡಿದೆ. ಬೆಂಗಳೂರು ಪಂದ್ಯಕ್ಕೆ 3 ಬದಲಾವಣೆ ಮಾಡಿರುವ ಆಫ್ಘಾನಿಸ್ತಾನ ಗೆಲುವಿನ ವಿಶ್ವಾಸದಲ್ಲಿದೆ.
ಆಫ್ಘಾನಿಸ್ತಾನ ಪ್ಲೇಯಿಂಗ್ 11
ರಹಮಾನುಲ್ಹಾ ಗುರ್ಬಾಜ್, ಇಬ್ರಾಹಿಂ ಜರ್ದಾನ್(ನಾಯಕ), ಗುಲ್ಬಾದಿನ್ ನೈಬ್, ಅಜ್ಮುತುಲ್ಹಾ ಒಮರಾಝೈ, ಮೊಹಮ್ಮದ್ ನಬಿ, ನಜಿಬುಲ್ಹಾ ಜರ್ದಾನ್, ಕರಿಮ್ ಜನತ್, ಶರಾಫುದ್ದಿನ್ ಅಶ್ರಫ್, ಕ್ವಾಯಿಸ್ ಅಹಮ್ಮದ್, ಮೊಹಮ್ಮದ್ ಸಲೀಮ್ ಸಾಫಿ, ಫರೀದ್ ಅಹಮ್ಮದ್ ಮಲಿಕ್
ಆರಂಭಿಕ 2 ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ ಈಗಾಗಲೇ ಸರಣಿ ಗೆದ್ದುಕೊಂಡಿದೆ. 2ನೇ ಟಿ20 ಪಂದ್ಯದಲ್ಲಿ ಆಫ್ಘಾನಿಸ್ತಾನ 20 ಓವರಲ್ಲಿ 172 ರನ್ ಸಿಡಿಸಿತ್ತು. ಭಾರತ 15.4 ಓವರ್‌ಗಳಲ್ಲೇ 4 ವಿಕೆಟ್ ಕಳೆದುಕೊಂಡು ಬೆನ್ನತ್ತಿತು. ರೋಹಿತ್ ಶರ್ಮಾ ಮತ್ತೆ ಶೂನ್ಯ ಸುತ್ತಿದರೆ, ವಿರಾಟ್ ಕೊಹ್ಲಿ 16 ಎಸೆತದಲ್ಲಿ 29 ರನ್ ಸಿಡಿಸಿ ನಿರ್ಗಮಿಸಿದರು. ಆದರೆ 3ನೇ ವಿಕೆಟ್‌ಗೆ ಜೈಸ್ವಾಲ್-ದುಬೆ 92 ರನ್ ಜೊತೆಯಾಟವಾಡಿ ತಂಡವನ್ನು ಗೆಲ್ಲಿಸಿದರು. ಜೈಸ್ವಾಲ್ 34 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್‌ನೊಂದಿಗೆ 68 ರನ್ ಸಿಡಿಸಿದರೆ, ದುಬೆ 32 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್‌ನೊಂದಿಗೆ ಔಟಾಗದೆ 63 ರನ್ ಚಚ್ಚಿದರು.
ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಕೀಪರ್ ಫಿಕ್ಸ್ ಆಗಿಲ್ವಾ..?