ವಿಶ್ವಕಪ್ ಆಡಲು ಭಾರತಕ್ಕೆ ಬರೊಲ್ಲವೆಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಭಾರತ ಪಾಕಿಸ್ತಾನ ಪ್ರವಾಸ ಮಾಡದಿದ್ದರೆ ನಾವು ಬರಲ್ಲವೆಂದ ಪಿಸಿಬಿ ಅಧ್ಯಕ್ಷಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 05ರಿಂದ ಆರಂಭ

ನವ​ದೆ​ಹ​ಲಿ(ಮೇ.13): ಭಾರತ ತಂಡ ಪಾಕಿ​ಸ್ತಾ​ನ​ದಲ್ಲಿ ಏಷ್ಯಾ​ಕಪ್‌ ಟೂರ್ನಿ ಹಾಗೂ 2025ರ ಚಾಂಪಿ​ಯನ್ಸ್‌ ಟ್ರೋಫಿ ಆಡಲು ಒಪ್ಪಿ​ದರೆ ಮಾತ್ರ ಪಾಕ್‌ ತಂಡ ಐಸಿಸಿ ಏಕ​ದಿನ ವಿಶ್ವ​ಕಪ್‌ ಆಡಲು ಭಾರ​ತಕ್ಕೆ ಆಗ​ಮಿ​ಸ​ಲಿದೆ ಎಂದು ಪಾಕಿ​ಸ್ತಾನ ಕ್ರಿಕೆಟ್‌ ಮಂಡ​ಳಿ​(​ಪಿ​ಸಿ​ಬಿ) ಅಧ್ಯಕ್ಷ ನಜಂ ಸೇಠಿ ಪುನರುಚ್ಚರಿಸಿದ್ದಾರೆ. ಅಲ್ಲದೇ, ಪಾಕಿಸ್ತಾನಕ್ಕೆ ಟೀಂ ಇಂಡಿಯಾ ಬಂದರೆ ಭಾರತದ ಯಾವುದೇ ನಗ​ರ​ದಲ್ಲೂ ಆಡಲು ನಾವು ಸಿದ್ಧ ಎಂದು ಹೇಳಿ​ದ್ದಾರೆ. 

ಈ ಬಗ್ಗೆ ಸಂದ​ರ್ಶ​ನ​ದಲ್ಲಿ ಮಾತ​ನಾಡಿದ ಅವರು, ‘ಏಷ್ಯಾ​ಕಪ್‌ ಟೂರ್ನಿ ಪಾಕಿ​ಸ್ತಾ​ನ​ದಲ್ಲೇ ಆಯೋ​ಜಿ​ಸ​ಬೇಕು. ಟೂರ್ನಿ ಕನಿಷ್ಠ 4 ಪಂದ್ಯ​ಗ​ಳ​ನ್ನಾ​ದರೂ ಪಾಕ್‌​ನಲ್ಲಿ ನಡೆಸಿ ಉಳಿದ ಪಂದ್ಯ​ಗ​ಳನ್ನು ಬೇರೆಡೆ ಆಯೋ​ಜಿ​ಸಲಿ. ಇದಕ್ಕೆ ಒಪ್ಪ​ದಿ​ದ್ದರೆ ನಾವೂ ವಿಶ್ವ​ಕ​ಪ್‌​ಗಾಗಿ ಭಾರ​ತಕ್ಕೆ ಹೋಗು​ವು​ದಿಲ್ಲ. ಭಾರತ ತಂಡ ಪಾಕ್‌ಗೆ ಬಂದರೆ ಎಲ್ಲಾ ರೀತಿಯ ಭದ್ರತೆ ಒದ​ಗಿ​ಸು​ತ್ತೇವೆ’ ಎಂದಿ​ದ್ದಾರೆ.

ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಅಕ್ಟೋಬರ್ 05ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏಕದಿನ ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್‌ ತಂಡಗಳು ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿವೆ. ಇನ್ನು ಫೈನಲ್‌ ಪಂದ್ಯವು ಇದೇ ಮೈದಾನದಲ್ಲಿ ನವೆಂಬರ್ 19ರಂದು ಜರುಗಲಿದೆ.

ODI World Cup 2023: ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್-ನ್ಯೂಜಿಲೆಂಡ್ ಕಾದಾಟ..! ಭಾರತಕ್ಕೆ ಬಲಿಷ್ಠ ಎದುರಾಳಿ

ಎಲ್ಲಾ ತಂಡಗಳು ಒಟ್ಟು 9 ಲೀಗ್ ಪಂದ್ಯಗಳನ್ನು ಆಡಲಿದ್ದು, ನಾಗ್ಪುರ, ಬೆಂಗಳೂರು, ತಿರುವನಂತಪುರಂ, ಮುಂಬೈ, ಡೆಲ್ಲಿ, ಲಖನೌ, ಗುವಾಹಟಿ, ಹೈದರಾಬಾದ್, ಕೋಲ್ಕತಾ, ರಾಜ್‌ಕೋಟ್, ಇಂದೋರ್ ಹಾಗೂ ಧರ್ಮಶಾಲಾದಲ್ಲಿ ವಿಶ್ವಕಪ್‌ ಚಾಂಪಿಯನ್ ಪಟ್ಟಕ್ಕಾಗಿ ತಂಡಗಳು ಕಾದಾಡಲಿವೆ. ಈ ಎಲ್ಲಾ ನಗರಗಳ ಪೈಕಿ ಕೇವಲ 7 ನಗರಗಳ ಸ್ಟೇಡಿಯಂಗಳಲ್ಲಿ ಮಾತ್ರ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳನ್ನು ಆಡಲಿದೆ. ಅಹಮದಾಬಾದ್‌ನಲ್ಲಿ ಭಾರತ ತಂಡವು ಎರಡು ಪಂದ್ಯಗಳನ್ನಾಡುವ ಸಾಧ್ಯತೆಯಿದೆ. 

ಸ್ಟಾರ್‌ ​ಸ್ಪೋರ್ಟ್ಸ್‌ ರಾಯ​ಭಾ​ರಿ ಕೊಹ್ಲಿಯ ಜಿಯೋ ಪ್ರಚಾ​ರ!

ನವ​ದೆ​ಹ​ಲಿ: ಕೋಲ್ಕತಾ ವಿರುದ್ಧ ಸ್ಫೋಟಕ ಆಟ​ವಾ​ಡಿದ ರಾಜ​ಸ್ಥಾ​ನದ ಯಶಸ್ವಿ ಜೈಸ್ವಾ​ಲ್‌​ರನ್ನು ಕೊಂಡಾ​ಡುವ ಭರ​ದಲ್ಲಿ ವಿರಾಟ್‌ ಕೊಹ್ಲಿ ಎಡ​ವಟ್ಟು ಮಾಡಿ​ದ್ದು, ಬಳಿಕ ಎಚ್ಚೆ​ತ್ತು​ಕೊಂಡು ತಪ್ಪನ್ನು ಸರಿ​ಪ​ಡಿ​ಸಿ​ಕೊಂಡಿ​ದ್ದಾರೆ. ಗುರು​ವಾ​ರ ಜೈಸ್ವಾಲ್‌ರ ಆಟಕ್ಕೆ ಮನ​ಸೋತ ಕೊಹ್ಲಿ, ಇನ್‌​ಸ್ಟಾ​ಗ್ರಾಂ ಸ್ಟೋರಿ​ಯಲ್ಲಿ ಜಿಯೋ ಸಿನಿಮಾದ ಸ್ಕ್ರೀನ್‌ಶಾಟ್‌ ಹಾಕಿ ಜೈಸ್ವಾ​ಲ್‌​ಬಗ್ಗೆ ಮೆಚ್ಚುಗೆ ಸೂಚಿ​ಸಿದ್ದರು. 

ಆದರೆ ಸ್ಟಾರ್‌ ಸ್ಪೋರ್ಟ್ಸ್‌ಗೆ ರಾಯ​ಭಾ​ರಿ​ಯಾ​ಗಿ​ರುವ ಕೊಹ್ಲಿ ಜಿಯೋ ಸಿನಿ​ಮಾ​ ಆ್ಯಪ್‌​ನಲ್ಲಿ ಪಂದ್ಯ ವೀಕ್ಷಿಸಿದ್ದಲ್ಲದೇ ಅದರ ಸ್ಕ್ರೀನ್‌​ಶಾಟ್‌ ಕೂಡಾ ಹಂಚಿ​ಕೊಂಡಿದ್ದು, ಹಲ​ವರ ಅಚ್ಚ​ರಿಗೆ ಕಾರ​ಣ​ವಾ​ಗಿದೆ. ಈ ಬಗ್ಗೆ ಹಲ​ವರು ಕೊಹ್ಲಿ​ಯನ್ನು ಕಾಲೆ​ಳೆ​ದ ಬಳಿಕ ತಮ್ಮ ಸ್ಟೋರಿ ಡಿಲೀಟ್‌ ಮಾಡಿ, ಜಿಯೋ ಸಿನಿ​ಮಾದ ಹೆಸರು ಕಾಣ​ದಿ​ರುವ ಮತ್ತೊಂದು ಸ್ಕ್ರೀನ್‌​ಶಾಟ್‌ ಹಂಚಿ​ಕೊಂಡಿ​ದ್ದಾ​ರೆ.

ಅನು​ಚಿತ ವರ್ತ​ನೆ: ಬಟ್ಲ​ರ್‌ಗೆ ಶೇ.10 ದಂಡ

ಕೋಲ್ಕ​ತಾ: ಕೋಲ್ಕತಾ ವಿರು​ದ್ಧದ ಪಂದ್ಯದ ವೇಳೆ ಅನುಚಿತ ವರ್ತನೆ ತೋರಿ ಐಪಿ​ಎಲ್‌ ನಿಯಮ ಉಲ್ಲಂಘಿ​ಸಿದ ರಾಜ​ಸ್ಥಾನ ಬ್ಯಾಟರ್‌ ಜೋಸ್‌ ಬಟ್ಲ​ರ್‌ಗೆ ಪಂದ್ಯದ ಸಂಭಾ​ವ​ನೆಯ ಶೇ.10ರಷ್ಟುದಂಡ ವಿಧಿ​ಸ​ಲಾ​ಗಿದೆ. ಬಟ್ಲರ್‌ ಐಪಿ​ಎಲ್‌ ನೀತಿ ಸಂಹಿತೆ ಉಲ್ಲಂಘಿಸಿ​ದ್ದಾರೆ ಎಂದು ಪ್ರಕ​ಟ​ಣೆಯಲ್ಲಿ ತಿಳಿ​ಸ​ಲಾ​ಗಿದ್ದು, ಸ್ಪಷ್ಟ ಕಾರಣ ಬಹಿ​ರಂಗ​ಪ​ಡಿ​ಸಿಲ್ಲ. ಪಂದ್ಯ​ದಲ್ಲಿ ಅವರು ಖಾತೆ ತೆರೆ​ಯುವ ಮೊದಲೇ ರನ್‌​ಔಟ್‌ ಆಗಿದ್ದರು.