ಆಕ್ಲೆಂಡ್(ಫೆ.08): ರವೀಂದ್ರ ಜಡೇಜಾ ಹಾಗೂ ನವದೀಪ್ ಸೈನಿ ಕೆಚ್ಚೆದೆಯ ಬ್ಯಾಟಿಂಗ್ ಹೊರತಾಗಿಯೂ ಟೀಂ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 22 ರನ್‌ಗಳಿಂದ ಶರಣಾಗಿದೆ. ಇದರೊಂದಿಗೆ ಆತಿಥೇಯ ಕಿವೀಸ್ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿ ಕೈವಶ ಮಾಡಿಕೊಂಡಿದೆ.

ಸೈನಿ-ಜಡೇಜಾ ಹೋರಾಟ, ದಡ ಸೇರಲಿಲ್ಲ ಭಾರತ; ನ್ಯೂಜಿಲೆಂಡ್‌ಗೆ ಏಕದಿನ ಕಿರೀಟ!

ಇಲ್ಲಿನ ಈಡನ್ ಪಾರ್ಕ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ರಾಸ್ ಟೇಲರ್ ಹಾಗೂ ಮಾರ್ಟಿನ್ ಗಪ್ಟಿನ್ ಸಮಯೋಚಿತ ಅರ್ಧಶತಕಗಳ ನೆರವಿನಿಂದ 272 ರನ್ ಬಾರಿಸಿ, ಭಾರತಕ್ಕೆ ಸ್ಪರ್ಧಾತ್ಮಕ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಭಾರತ 153 ರನ್ ಬಾರಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಈ ವೇಳೆ 8ನೇ ವಿಕೆಟ್‌ಗೆ ರವೀಂದ್ರ ಜಡೇಜಾ ಹಾಗೂ ವೇಗಿ ನವದೀಪ್ ಸೈನಿ 76 ರನ್‌ಗಳ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾವನ್ನು ಗೆಲುವಿನ ಸಮೀಪ ಕೊಂಡ್ಯೊಯ್ದರು. ಅದರಲ್ಲೂ ಸೈನಿ 49 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ 45 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಕೈಲ್ ಜೆಮಿಸನ್ ಎಸೆದ ಪಂದ್ಯದ 45ನೇ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್‌ಗಟ್ಟಿದರು. ಮರು ಎಸೆತದಲ್ಲಿ ಮತ್ತೊಂದು ಸಿಕ್ಸರ್ ಸಿಡಿಸುವ ಯತ್ನದಲ್ಲಿ ಸೈನಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನೇನು ಫಲಿತಾಂಶ ಭಾರತದ ಕಡೆ ವಾಲುತ್ತಿದೆ ಎನ್ನುವಾಗಲೇ ಸೈನಿ ವಿಕೆಟ್ ಒಪ್ಪಿಸಿದ್ದು, ಭಾರತಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು.

ಏಕದಿನ ಸರಣಿ ಸೋಲಿನ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದ ಕೊಹ್ಲಿ..!

ತಾವು ವಿಕೆಟ್ ಒಪ್ಪಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಸೈನಿ, ನಾನು ವಿಕೆಟ್ ಒಪ್ಪಿಸಿದ್ದರ ಬಗ್ಗೆ ಬೇಸರವಿದೆ. ನಾನು ಆ ಸಂದರ್ಭದಲ್ಲಿ ಔಟ್ ಆಗದೇ ಇದ್ದಿದ್ದರೆ, ಫಲಿತಾಂಶ ಬೇರೆಯದ್ದೇ ಆಗುವ ಸಾಧ್ಯತೆಯಿತ್ತು. ನಾನು ಪದೇ ಪದೇ ವಿಕೆಟ್ ಕಳೆದುಕೊಂಡೆವು. ಕೊನೆಯ ತನಕ ಬ್ಯಾಟಿಂಗ್ ಮಾಡಿದ್ದರೆ, ಪಂದ್ಯ ನಮ್ಮ ಪಾಲಾಗುತಿತ್ತು. ಹೀಗಾಗಿ ನಾನು-ಜಡೇಜಾ ಸಾಧ್ಯವಾದಷ್ಟು ಉತ್ತಮವಾಗಿ ಬ್ಯಾಟಿಂಗ್ ಮಾಡುವ ಮೂಲಕ ತಂಡವನ್ನು ಕೊನೆಯ ಹಂತದವರೆಗೂ ಕೊಂಡ್ಯೊಯ್ದೆವು. ಅದರಲ್ಲೂ ಜಡೇಜಾ ನನಗೆ, ಬೌಂಡರಿ ಬಾರಿಸುವ ಅವಕಾಶ ಇದ್ದಾಗ ಬಾರಿಸು, ಇಲ್ಲದಿದ್ದರೆ ಒಂದು, ಎರಡು ರನ್ ಕಲೆಹಾಕಲು ಯತ್ನಿಸು. ತಾಳ್ಮೆ ಕಳೆದುಕೊಳ್ಳಬೇಡ, ನಾವು ಪಂದ್ಯವನ್ನು ಕೊನೆಯವರೆಗೂ ತೆಗೆದುಕೊಂಡು ಹೋಗಬಹುದು ಎಂದು ಕಿವಿಮಾತು ಹೇಳಿದ್ದರು ಎಂದು ಸೈನಿ ಹೇಳಿದ್ದಾರೆ.

ಬಿಗ್ ಬ್ಯಾಶ್ ಲೀಗ್: ಸಿಡ್ನಿ ಸಿಕ್ಸರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ RCB ಕ್ರಿಕೆಟಿಗ..!

ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿ ಬೀಗುತ್ತಿದ್ದ ಭಾರತ ತಂಡಕ್ಕೆ ಮರ್ಮಾಘಾತ ನೀಡುವಲ್ಲಿ ಕಿವೀಸ್ ಪಡೆ ಯಶಸ್ವಿಯಾಗಿದೆ. ಮೊದಲೆರಡು ಏಕದಿನ ಪಂದ್ಯದಲ್ಲಿ ಮುಗ್ಗರಿಸುವ ಇದೀಗ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸುವ ಸರದಿ ವಿರಾಟದ ಪಡೆಯದ್ದು ಆಗುವ ಸಾಧ್ಯತೆಯಿದೆ. ಇನ್ನು ಕೊನೆಯ ಪಂದ್ಯ ಫೆಬ್ರವರಿ 11ರಂದು ಬೇ ಓವಲ್ ಮೈದಾನದಲ್ಲಿ ನಡೆಯಲಿದೆ.