Asianet Suvarna News Asianet Suvarna News

INDvENG ಡಕೌಟ್ ಆದ ಕೊಹ್ಲಿಯನ್ನು ಡಕ್‌ಗೆ ಹೋಲಿಸಿದ ಇಂಗ್ಲೆಂಡ್ ಫ್ಯಾನ್ಸ್, ಭಾರತೀಯರ ತಿರುಗೇಟು!

ವಿಶ್ವಕಪ್ ಟೂರ್ನಿಯಲ್ಲಿ ದಿಟ್ಟ ಹೋರಾಟ ನೀಡುತ್ತಿದ್ದ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಡಕೌಟ್ ಆಗಿದ್ದಾರೆ. ಕೊಹ್ಲಿ ವಿಕೆಟ್ ಪತನದ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳ ಗುಂಪು ಟ್ರೋಲ್ ಮಾಡಿದೆ. ಕೊಹ್ಲಿಯನ್ನು ಬಾತುಕೋಳಿಗೆ ಹೋಲಿಸಿ ಡಕ್ ಅನ್ನೋ ಸಾಂಕೇತಿಕ ಸೂಚನೆಯನ್ನು ನೀಡಿದೆ. ಆದರೆ ಟೀಂ ಇಂಡಿಯಾ ಅಭಿಮಾನಿಗಳು ತಕ್ಕ ತಿರುಗೇಟು ನೀಡಿದ್ದಾರೆ.

ICC World cup Barmy Army fans troll viral kohli for duck against England ckm
Author
First Published Oct 29, 2023, 3:35 PM IST

ಲಖನೌ(ಅ.29) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಉತ್ತಮ ಪ್ರದರ್ಶನದ ಮೂಲಕ ಸತತ 5 ಪಂದ್ಯ ಗೆದ್ದುಕೊಂಡಿದೆ. ಆದರೆ ಇಂಗ್ಲೆಂಡ್ ವಿರುದ್ಧ ಭಾರತ ಆರಂಭಿಕ ಆಘಾತ ಅನುಭವಿಸಿದೆ. ಭಾರತೀಯರ ವಿಕೆಟ್ ಪತನವನ್ನು ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳ ಗುಂಪು ಬಾರ್ಮಿ ಆರ್ಮಿ ಟ್ರೋಲ್ ಮಾಡಿದೆ. ವಿಶೇಷವಾಗಿ ವಿರಾಟ್ ಕೊಹ್ಲಿ ಡಕೌಟ್‌ನ್ನು ಟ್ರೋಲ್ ಮಾಡಿದೆ. ಕೊಹ್ಲಿ ಫೋಟೋವನ್ನು ಬಾತುಕೋಳಿಯ ತಲೆಗೆ ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಈಮೂಲಕ ಕೊಹ್ಲಿ ಡಕೌಟ್‌ನ್ನು ಡಕ್‌ಗೆ ಹೋಲಿಕೆ ಟ್ರೋಲ್ ಮಾಡಲಾಗಿದೆ.

ಇಂಗ್ಲೆಂಡ್ ವಿರುದ್ಧ ವಿರಾಟ್ ಕೊಹ್ಲಿ 9 ಎಸೆತ ಎದುರಿಸಿ ರನ್ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಡೇವಿಡ್ ವಿಲೆ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಕೊಹ್ಲಿ ಶೂನ್ಯಕ್ಕೆ ಪೆವಿಲಿಯನ್ ಸೇರಿದರು. ವಿರಾಟ್ ಕೊಹ್ಲಿ ವಿಕೆಟ್ ಪತವನ್ನು ಇಂಗ್ಲೆಂಡ್ ತಂಡ ಅತೀಯಾಗಿ ಸಂಭ್ರಮಿಸಿದೆ. ಇತ್ತ ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳ ಗುಂಪು ಭಾರ್ಮಿ ಆರ್ಮಿ ಟ್ರೋಲ್ ಮಾಡುವ ಮೂಲಕ ಸಂಭ್ರಮ ಆಚರಿಸಿದೆ.

ಭಾರತಕ್ಕೆ ಆರಂಭಿಕ ಆಘಾತ; ಪೆವಿಲಿಯನ್ ಪರೇಡ್ ನಡೆಸಿದ ಗಿಲ್-ಕೊಹ್ಲಿ-ಅಯ್ಯರ್

ವಿಕೆಟ್ ಪತನದ ಬೆನ್ನಲ್ಲೇ ಭಾರ್ಮಿ ಆರ್ಮಿ ಬಾತುಕೋಳಿಗೆ ಹೋಲಿಕೆ ಮಾಡಿದ ಪೋಸ್ಟರ್ ಹಾಕಿದೆ. ನೀರಿನಲ್ಲಿರುವ ಎರಡು ಬಾತುಕೋಳಿಗ ಫೋಟೋ ಇದಾಗಿದೆ. ಒಂದು ಬಾತುಕೋಳಿ ತಲೆಗೆ ವಿರಾಟ್ ಕೊಹ್ಲಿ ಮುಖ ಎಡಿಟ್ ಮಾಡಿ ಪೋಸ್ಟ್ ಮಾಡಲಾಗಿದೆ. ಈ ಮೂಲಕ ಕೊಹ್ಲಿ ಶೂನ್ಯವನ್ನು ಇಂಗ್ಲೆಂಡ್ ಅಭಿಮಾನಿಗಳು ಟ್ರೋಲ್ ಮೂಲಕ ಸಂಭ್ರಮಿಸಿದ್ದಾರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇಂಗ್ಲೆಂಡ್ ಅಂಕಪಟ್ಟಿಯಲ್ಲಿನ ಸ್ಥಾನವನ್ನು ತೋರಿಸಿ ನೀವು ಎಲ್ಲಿದ್ದೀರಿ ಅನ್ನೋದು ಗಮನದಲ್ಲಿರಲಿ ಎಂದು ತಿರುಗೇಟು ನೀಡಿದ್ದಾರೆ.

 

 

ಇದಕ್ಕೂ ಮೊದಲು ಭಾರ್ಮಿ ಆರ್ಮಿ ಕೊಹ್ಲಿ ಗಾನ್, ಕೊಹ್ಲಿ ಔಟ್ ಫಾರ್ ಡಕ್ ಎಂದು ಪೋಸ್ಟರ್ ಹಾಕಿತ್ತು. ಈ ವೇಳೆ 2021ರ ಟೆಸ್ಟ್ ಪಂದ್ಯದ ಫೋಟೋವನ್ನು ಹಂಚಿಕೊಂಡು ಹಳೇ ಸೇಡನ್ನು ಈ ರೀತಿ ತೀರಿಸಿಕೊಂಡಿತ್ತು. 2021ರ ಟೆಸ್ಟ್ ಸರಣಿ ವೇಳೆ ವಿರಾಟ್ ಕೊಹ್ಲಿ ಆಕ್ರಮಣಕಾರಿ ನಡೆ ಭಾರ್ಮಿ ಆರ್ಮಿ ಅಭಿಮಾನಿಗಳ ಗುಂಪನ್ನು ಕೆರಳಿಸಿತ್ತು.

ICC World Cup 2023: ಟೀಂ ಇಂಡಿಯಾ ಎದುರು ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ

ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿದೆ. ಶುಭಮನ್ ಗಿಲ್ ಕೇವಲ  9 ರನ್ ಸಿಡಿಸಿ ಔಟಾದರೆ, ಕೊಹ್ಲಿ ಶೂನ್ಯ ಸುತ್ತಿದರು. ಇತ್ತ ಶ್ರೇಯಸ್ ಅಯ್ಯರ್ 4 ರನ್ ಸಿಡಿಸಿ ನಿರ್ಗಮಿಸಿದರು. ಭಾರತ 40 ರನ್‌ಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಆರಂಭಿಕ 12 ಓವರ್‌ಗಳಲ್ಲೇ ಭಾರತ ಬ್ಯಾಟಿಂಗ್ ಕುಸಿತ ಕಂಡಿದೆ.

Follow Us:
Download App:
  • android
  • ios