45 ರನ್‌ಗಳವರೆಗೆ ಯಾವುದೇ ವಿಕೆಟ್ ಕಳೆದುಕೊಳ್ಳದೇ ಮುನ್ನುಗ್ಗುತ್ತಿದ್ದ ಇಂಗ್ಲೆಂಡ್ ತಂಡವು, ಮಲಾನ್ ವಿಕೆಟ್ ಪತನದ ಬಳಿಕ ನಾಟಕೀಯ ಕುಸಿತ ಕಂಡಿತು. ಇದಾದ ಬಳಿಕ ಇಂಗ್ಲೆಂಡ್ ತನ್ನ ಖಾತೆಗೆ 40 ರನ್ ಸೇರಿಸಿವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಳ್ಳುವ ಮೂಲಕ ನಾಟಕೀಯ ಕುಸಿತ ಕಂಡಿತು.

ಬೆಂಗಳೂರು(ಅ.26): 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಮತ್ತೊಮ್ಮೆ ಕೆಟ್ಟ ಆರಂಭವನ್ನು ಪಡೆದಿದೆ. ಶ್ರೀಲಂಕಾ ಎದುರು ಮೊದಲ 85 ರನ್ ಗಳಿಸುವಷ್ಟರಲ್ಲಿ ಇಂಗ್ಲೆಂಡ್‌ನ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದು, ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದೆ. ಇದೀಗ ಎಲ್ಲರ ಚಿತ್ತ 2019ರ ವಿಶ್ವಕಪ್ ಹೀರೋ ಬೆನ್ ಸ್ಟೋಕ್ಸ್‌ ಅವರತ್ತ ನೆಟ್ಟಿದೆ.

ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲ ವಿಕೆಟ್‌ಗೆ ಜಾನಿ ಬೇರ್‌ಸ್ಟೋವ್ ಹಾಗೂ ಡೇವಿಡ್ ಮಲಾನ್ 6.3 ಓವರ್‌ಗಳಲ್ಲಿ 45 ರನ್‌ಗಳ ಜತೆಯಾಟ ನಿಭಾಯಿಸಿದರು. ಉತ್ತಮ ಆರಂಭ ನೀಡುವ ಭರವಸೆ ಮೂಡಿಸಿದ್ದ ಡೇವಿಡ್ ಮಲಾನ್ ಅವರನ್ನು ಏಂಜಲೋ ಮ್ಯಾಥ್ಯೂಸ್‌ ಪೆವಿಲಿಯನ್‌ಗಟ್ಟುವಲ್ಲಿ ಯಶಸ್ವಿಯಾದರು. ಏಕದಿನ ಕ್ರಿಕೆಟ್‌ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಂದೇ ಒಂದು ಓವರ್ ಬೌಲಿಂಗ್ ಮಾಡದ ಮ್ಯಾಥ್ಯೂಸ್‌ ತಾವೆಸೆದ ಮೊದಲ ಓವರ್‌ನ ಮೂರನೇ ಎಸೆತದಲ್ಲೇ ಲಂಕಾಗೆ ಮೊದಲ ಯಶಸ್ಸು ದಕ್ಕಿಸಿಕೊಡುವಲ್ಲಿ ಯಶಸ್ವಿಯಾದರು.

ಏಕದಿನ ವಿಶ್ವಕಪ್‌ನಲ್ಲಿ ದಾಖಲಾದ ಟಾಪ್ 5 ಅತಿವೇಗದ ಶತಕ ಸಾಧಕರಿವರು..!

Scroll to load tweet…

ದಿಢೀರ್ ಕುಸಿದ ಇಂಗ್ಲೆಂಡ್: 45 ರನ್‌ಗಳವರೆಗೆ ಯಾವುದೇ ವಿಕೆಟ್ ಕಳೆದುಕೊಳ್ಳದೇ ಮುನ್ನುಗ್ಗುತ್ತಿದ್ದ ಇಂಗ್ಲೆಂಡ್ ತಂಡವು, ಮಲಾನ್ ವಿಕೆಟ್ ಪತನದ ಬಳಿಕ ನಾಟಕೀಯ ಕುಸಿತ ಕಂಡಿತು. ಇದಾದ ಬಳಿಕ ಇಂಗ್ಲೆಂಡ್ ತನ್ನ ಖಾತೆಗೆ 40 ರನ್ ಸೇರಿಸಿವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಳ್ಳುವ ಮೂಲಕ ನಾಟಕೀಯ ಕುಸಿತ ಕಂಡಿತು. ಜೋ ರೂಟ್ 3 ರನ್‌ ಬಾರಿಸಿ ರನೌಟ್ ಆದರೆ, ಜಾನಿ ಬೇರ್‌ಸ್ಟೋವ್ ಬ್ಯಾಟಿಂಗ್ 30 ರನ್‌ಗಳಿಗೆ ಸೀಮಿತವಾಯಿತು. ಇನ್ನು ನಾಯಕ ಜೋಸ್ ಬಟ್ಲರ್ 8 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಲಿಯಮ್ ಲಿವಿಂಗ್‌ಸ್ಟೋನ್ ಕೇವಲ ಒಂದು ರನ್ ಗಳಿಸಿ ಲಹಿರು ಕುಮಾರಗೆ ಎರಡನೇ ಬಲಿಯಾದರು.

ಇಂಗ್ಲೆಂಡ್‌ ಎದುರಿನ ಹೈವೋಲ್ಟೇಜ್‌ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಆಡ್ತಾರಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಕಳೆದ 4 ವಿಶ್ವಕಪ್‌ನಲ್ಲಿ ಲಂಕಾ ಎದುರು ಗೆದ್ದಿಲ್ಲ ಇಂಗ್ಲೆಂಡ್: ಇಂಗ್ಲೆಂಡ್ ತಂಡವು 2007ರಿಂದೀಚೆಗೆ ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ಎದುರು ಗೆಲ್ಲಲು ಸಾಧ್ಯವಾಗಿಲ್ಲ. 2007, 2011, 2015 ಹಾಗೂ 2019ರಲ್ಲಿ ಲಂಕಾ ಎದುರು ಇಂಗ್ಲೆಂಡ್ ತಂಡವು ಸೋಲು ಅನುಭವಿಸಿದೆ. ಹೀಗಾಗಿ ಇಂದು ಯಾವ ತಂಡ ಗೆಲುವು ಸಾಧಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.