ICC World Cup 2023 ಆಫ್ಘಾನಿಸ್ತಾನ ಮಣಿಸಲು ರೆಡಿಯಾದ ಹರಿಣಗಳ ಪಡೆ..!
ಆಫ್ಘನ್ ಸದ್ಯ 8ರಲ್ಲಿ 4 ಪಂದ್ಯ ಗೆದ್ದಿದ್ದು, -0.338 ನೆಟ್ ರನ್‌ರೇಟ್‌ನೊಂದಿಗೆ 6ನೇ ಸ್ಥಾನದಲ್ಲಿದೆ. ದ.ಆಫ್ರಿಕಾ ವಿರುದ್ಧ ತಂಡಕ್ಕೆ 438 ರನ್ ಗೆಲುವು ಅಗತ್ಯವಿದ್ದು, ಇದು ಸಾಧ್ಯವಾದರೆ ಮಾತ್ರ ನ್ಯೂಜಿಲೆಂಡನ್ನು ನೆಟ್ ರನ್‌ರೇಟ್‌ನಲ್ಲಿ ಹಿಂದಿಕ್ಕಿ ಸೆಮೀಸ್‌ಗೇರಬಹುದು.
ಅಹಮದಾಬಾದ್(ನ.10): ಈ ಬಾರಿ ವಿಶ್ವಕಪ್‌ನಲ್ಲಿ ಅಭೂತಪೂರ್ವ ಪ್ರದರ್ಶನ ತೋರುತ್ತಿದ್ದರೂ, ಅಫ್ಘಾನಿಸ್ತಾನದ ಸೆಮಿಫೈನಲ್ ಕನಸು ನನಸಾಗುವುದು ಕಾರ್ಯತಃ ಅಸಾಧ್ಯ. ತಂಡವು ರೌಂಡ್ ರಾಬಿನ್ ಹಂತದ ತನ್ನ ಕೊನೆಯ ಪಂದ್ಯವನ್ನು ಶುಕ್ರವಾರ ಇಲ್ಲಿನ ಮೋದಿ ಕ್ರೀಡಾಂಗಣದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.
ಆಫ್ಘನ್ ಸದ್ಯ 8ರಲ್ಲಿ 4 ಪಂದ್ಯ ಗೆದ್ದಿದ್ದು, -0.338 ನೆಟ್ ರನ್‌ರೇಟ್‌ನೊಂದಿಗೆ 6ನೇ ಸ್ಥಾನದಲ್ಲಿದೆ. ದ.ಆಫ್ರಿಕಾ ವಿರುದ್ಧ ತಂಡಕ್ಕೆ 438 ರನ್ ಗೆಲುವು ಅಗತ್ಯವಿದ್ದು, ಇದು ಸಾಧ್ಯವಾದರೆ ಮಾತ್ರ ನ್ಯೂಜಿಲೆಂಡನ್ನು ನೆಟ್ ರನ್‌ರೇಟ್‌ನಲ್ಲಿ ಹಿಂದಿಕ್ಕಿ ಸೆಮೀಸ್‌ಗೇರಬಹುದು.
ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಈಗಾಗಲೇ ಸೆಮೀಸ್ ಸ್ಥಾನ ಖಚಿತಪಡಿಸಿಕೊಂಡಿದ್ದು, ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ಗೂ ಮುನ್ನ ಲೀಗ್ ಹಂತವನ್ನು ಗೆಲುವಿನೊಂದಿಗೆ ಮುಕ್ತಾಯಗೊಳಿಸಲು ಎದುರು ನೋಡುತ್ತಿದೆ.
Timed Out Call ಏಂಜೆಲೋ ಮ್ಯಾಥ್ಯೂಸ್ ಕಾಲೆಳೆದ ವಿಲಿಯಮ್ಸನ್, ಬೌಲ್ಟ್..!
ಕಳೆದ ಪಂದ್ಯದಲ್ಲಿ ಬಲಾಢ್ಯ ಆಸ್ಟ್ರೇಲಿಯಾ ಎದುರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿತ್ತು. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ಬಾರಿಸಿದ ಸಿಡಿಲಬ್ಬರದ ದ್ವಿಶತಕ ಆಫ್ಘಾನ್ ಗೆಲುವಿನ ಕನಸನ್ನು ನುಚ್ಚುನೂರು ಮಾಡಿತ್ತು. ಇದರ ಹೊರತಾಗಿಯೂ ಆಫ್ಘಾನಿಸ್ತಾನ ತಂಡವು 2025ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿತ್ತು.
ವಿಶ್ವದ ಅತಿದೊಡ್ಡ ಸ್ಟೇಡಿಯಂನಲ್ಲಿ ನಡೆಯುಲಿರುವ ಲೀಗ್ ಹಂತದ ಕೊನೆಯ ಪಂದ್ಯ ಇದಾಗಿದ್ದು, ಈ ಪಂದ್ಯವನ್ನು ಈಗಾಗಲೇ ಸೆಮೀಸ್ ತಲುಪಿರುವ ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು, ಅಭ್ಯಾಸಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಹರಿಣಗಳ ಪಡೆ ಫೈನಲ್ ಪ್ರವೇಶಿಸುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದು, ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಶ್ರೀಲಂಕಾ ವಿರುದ ಗೆದ್ದ ನ್ಯೂಜಿಲೆಂಡ್, ಪಾಕಿಸ್ತಾನದ ಸೆಮೀಸ್ ದಾರಿ ಬಹುತೇಕ ಬಂದ್!
ಒಟ್ಟು ಮುಖಾಮುಖಿ: 01
ದ.ಆಫ್ರಿಕಾ: 01
ಅಫ್ಘಾನಿಸ್ತಾನ: 00
ಸಂಭವನೀಯ ಆಟಗಾರರ ಪಟ್ಟಿ
ದ.ಆಫ್ರಿಕಾ: ಕ್ವಿಂಟನ್ ಡಿ ಕಾಕ್, ತೆಂಬಾ ಬವುಮಾ(ನಾಯಕ), ವ್ಯಾನ್ ಡರ್ ಡುಸ್ಸೆನ್, ಏಯ್ಡನ್ ಮಾರ್ಕ್‌ರಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸನ್, ಕೇಶವ್ ಮಹಾರಾಜ್, ತಬ್ರೀಜ್ ಶಮ್ಸಿ, ಕಗಿಸೋ ರಬಾಡ, ಲುಂಗಿ ಎನ್‌ಗಿಡಿ.
ಅಫ್ಘಾನಿಸ್ತಾನ: ರೆಹಮನುಲ್ಲಾ ಗುರ್ಬಜ್, ಇಬ್ರಾಹಿಂ ಜದ್ರಾನ್, ರಹ್ಮತ್ ಶಾ, ಹಶ್ಮತುಲ್ಲಾ ಶಾಹಿದಿ(ನಾಯಕ), ಅಜ್ಮತುಲ್ಲಾ, ಮೊಹಮ್ಮದ್ ನಬಿ, ಇಕ್ರಂ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ಫಜಲ್ ಹಕ್ ಫಾರೂಕಿ.
ಪಂದ್ಯ: ಮಧ್ಯಾಹ್ನ 2ಕ್ಕೆ