ಕಿವೀಸ್‌ ತಂಡ ಕಳೆದೆರಡು ಆವೃತ್ತಿಗಳಂತೆಯೇ ಈ ಬಾರಿಯೂ ಅಭೂತಪೂರ್ವ ಪ್ರದರ್ಶನ ನೀಡುತ್ತಿದ್ದು, 2 ಪಂದ್ಯಗಳಲ್ಲಿ ಕ್ರಮವಾಗಿ 9 ವಿಕೆಟ್ ಹಾಗೂ 99 ರನ್‌ಗಳಿಂದ ಜಯಗಳಿಸಿದೆ. ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಕೇನ್‌ ವಿಲಿಯಮ್ಸನ್‌ ಕೂಡಾ ಈ ಪಂದ್ಯಕ್ಕೆ ಆಯ್ಕೆಗೆ ಲಭ್ಯರಿದ್ದು, ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿಸಿದೆ.

ಚೆನ್ನೈ(ಅ.13): ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಹಾಗೂ ಬಳಿಕ ನೆದರ್‌ಲೆಂಡ್ಸ್‌ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಏಕದಿನ ವಿಶ್ವಕಪ್‌ ಅಭಿಯಾನ ಆರಂಭಿಸಿರುವ ನ್ಯೂಜಿಲೆಂಡ್‌ ಹ್ಯಾಟ್ರಿಕ್‌ ಗೆಲುವಿನ ಕಾತರದಲ್ಲಿದ್ದು, ಶುಕ್ರವಾರ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ಚೆನ್ನೈನ ಚೆಪಾಕ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಕಿವೀಸ್‌ ತಂಡ ಕಳೆದೆರಡು ಆವೃತ್ತಿಗಳಂತೆಯೇ ಈ ಬಾರಿಯೂ ಅಭೂತಪೂರ್ವ ಪ್ರದರ್ಶನ ನೀಡುತ್ತಿದ್ದು, 2 ಪಂದ್ಯಗಳಲ್ಲಿ ಕ್ರಮವಾಗಿ 9 ವಿಕೆಟ್ ಹಾಗೂ 99 ರನ್‌ಗಳಿಂದ ಜಯಗಳಿಸಿದೆ. ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಕೇನ್‌ ವಿಲಿಯಮ್ಸನ್‌ ಕೂಡಾ ಈ ಪಂದ್ಯಕ್ಕೆ ಆಯ್ಕೆಗೆ ಲಭ್ಯರಿದ್ದು, ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿಸಿದೆ. ಕೇನ್ ಬದಲು ಮೊದಲೆರಡು ಪಂದ್ಯಗಳನ್ನಾಡಿದ್ದ ರಚಿನ್‌ ರವೀಂದ್ರ ಅತ್ಯುತ್ತಮ ಪ್ರದರ್ಶನ ನೀಡಿದ್ದು, ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ICC World Cup 2023 ಅಭ್ಯಾಸ ಆರಂಭಿಸಿದ ಶುಭ್‌ಮನ್ ಗಿಲ್‌: ಪಾಕಿಸ್ತಾನ ಪಂದ್ಯಕ್ಕೆ ಫಿಟ್‌?

ಮತ್ತೊಂದೆಡೆ ಆರಂಭಿಕ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಗೆದ್ದರೂ, ಇಂಗ್ಲೆಂಡ್‌ ವಿರುದ್ಧ ಹೀನಾಯ ಸೋಲು ಕಂಡಿರುವ ಬಾಂಗ್ಲಾ ಪುಟಿದೇಳುವ ನಿರೀಕ್ಷೆಯಲ್ಲಿದೆ. ಚೆನ್ನೈನ ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ತಂಡ ನಾಯಕ ಶಕೀಬ್‌ ಹಸನ್‌, ಮೆಹಿದಿ ಹಸನ್‌, ಹಸನ್‌ ಮೀರಾಜ್‌ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ಈ ಮೂವರು 2 ಪಂದ್ಯಗಳಲ್ಲಿ 11 ವಿಕೆಟ್‌ ಕಬಳಿಸಿದ್ದು, ತಂಡದ ಆಧಾರಸ್ತಂಭಗಳು ಎನಿಸಿಕೊಂಡಿದ್ದಾರೆ. ಹಿರಿಯ ಬ್ಯಾಟರ್‌ಗಳಾದ ಮುಷ್ಫಿಕುರ್‌, ಲಿಟನ್‌ ದಾಸ್‌, ನಜ್ಮುಲ್‌ ಹೊಸೈನ್‌ ಕೂಡಾ ಅಬ್ಬರಿಸಬೇಕಾದ ಅಗತ್ಯವಿದೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ತಂಡಗಳು ಒಟ್ಟು 41 ಬಾರಿ ಮುಖಾಮುಖಿಯಾಗಿದ್ದು, ನ್ಯೂಜಿಲೆಂಡ್ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. 41 ಪಂದ್ಯಗಳ ಪೈಕಿ ನ್ಯೂಜಿಲೆಂಡ್ ತಂಡವು 30 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದರೆ, ಬಾಂಗ್ಲಾದೇಶ ತಂಡವು 10 ಪಂದ್ಯಗಳನ್ನು ಗೆದ್ದು ಬೀಗಿದೆ. ಇನ್ನೊಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಹೊರಬಿದ್ದಿರಲಿಲ್ಲ.

ಮಗಳು ಸನಾ ಎಜುಕೇಷನ್‌ಗೆ ಸೌರವ್ ಗಂಗೂಲಿ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಸಂಭವನೀಯ ಆಟಗಾರರ ಪಟ್ಟಿ

ನ್ಯೂಜಿಲೆಂಡ್‌: ಡೆವೊನ್ ಕಾನ್‌ವೇ, ವಿಲ್ ಯಂಗ್‌, ಕೇನ್ ವಿಲಿಯಮ್ಸನ್‌(ನಾಯಕ), ರಚಿನ್‌ ರವೀಂದ್ರ, ಟಾಮ್ ಲೇಥಮ್‌, ಡ್ಯಾನಿಯಲ್ ಮಿಚೆಲ್‌, ಗ್ಲೆನ್ ಫಿಲಿಪ್ಸ್‌, ಮಿಚೆಲ್ ಸ್ಯಾಂಟ್ನರ್‌, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯೂಸನ್/ಇಶ್ ಸೋಧಿ, ಟ್ರೆಂಟ್ ಬೌಲ್ಟ್‌.

ಬಾಂಗ್ಲಾದೇಶ: ತಂಜೀದ್‌, ಲಿಟನ್‌ ದಾಸ್, ನಜ್ಮುಲ್‌ ಹೊಸೈನ್, ಶಕೀಬ್‌ ಅಲ್ ಹಸನ್(ನಾಯಕ), ತೌಹೀದ್‌, ಮುಷ್ಫಿಕುರ್‌ ರಹೀಂ, ಮೆಹಿದಿ ಹಸನ್, ಹಸನ್‌, ತಸ್ಕೀನ್‌ ಅಹಮ್ಮದ್, ಶೊರೀಫುಲ್‌ ಇಸ್ಲಾಂ, ಮುಸ್ತಾಫಿಜುರ್‌ ರೆಹಮಾನ್.

ಪಂದ್ಯ: ಮಧ್ಯಾಹ್ನ 2ಕ್ಕೆ

ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಡಿಸ್ನಿ+ಹಾಟ್‌ಸ್ಟಾರ್‌.