ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಮುಖಭಂಗ, ಆಫ್ಘಾನಿಸ್ತಾನ ವಿರುದ್ಧ ಹೀನಾಯ ಸೋಲು!
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಮತ್ತೆ ಮುಖಭಂಗ ಅನುಭವಿಸಿದೆ. 2011ರ ವಿಶ್ವಕಪ್ ಟೂರ್ನಿ ಬಳಿಕ ಇದೀಗ 2023ರಲ್ಲಿ ಇಂಗ್ಲೆಡ್ ಹಿನ್ನಡೆ ಅನುಭವಿಸಿದೆ. ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಸೋಲಿಗೆ ಶರಣವಾಗಿದೆ. ಆಫ್ಘಾನಿಸ್ತಾನ ಅದ್ಭುತ ಪ್ರದರ್ಶನಕ್ಕೆ ಹಾಲಿ ಚಾಂಪಿಯನ್ ಬಳಿ ಉತ್ತರವೇ ಇರಲಿಲ್ಲ.
ದೆಹಲಿ(ಅ.15) ಕಳೆದ ವಿಶ್ವಕಪ್ ಟೂರ್ನಿಯಲ್ಲಿ ಎಲ್ಲಾ ಘಟಾನುಘಟಿ ತಂಡಗಳನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಇದೀಗ ಆಫ್ಘಾನಿಸ್ತಾನ ವಿರುದ್ಧ ಮುಗ್ಗರಿಸಿದೆ. ಆಫ್ಘಾನಿಸ್ತಾನ ಅದ್ಭುತ ಪ್ರದರ್ಶನದ ಮಂದೆ ಇಂಗ್ಲೆಂಡ್ ಆಟ ನಡೆಯಲಿಲ್ಲ. ಮೊದಲು ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಆಫ್ಘಾನಿಸ್ತಾನ 284 ರನ್ ಸಿಡಿಸಿತ್ತು. ಆದರೆ ಈ ಗುರಿ ಚೇಸ್ ಮಾಡಲು ಪರದಾಡಿದ ಇಂಗ್ಲೆಂಡ್ 215 ರನ್‌ಗೆ ಆಲೌಟ್ ಆಗಿದೆ. ಆಫ್ಘಾನಿಸ್ತಾನ 69 ರನ್ ಭರ್ಜರಿ ಗೆಲುವು ದಾಖಲಿಸಿದೆ. ಆರಂಭಿಕ 2 ಪಂದ್ಯದಲ್ಲಿ ಮುಗ್ಗರಿಸಿದ್ದ ಆಫ್ಘಾನಿಸ್ತಾನ ಇದೀಗ ಭರ್ಜರಿಯಾಗಿ ಗೆಲುವಿನ ಆರಂಭ ಪಡೆದಿದೆ.
285 ರನ್ ಟಾರ್ಗೆಟ್ ಪಡೆದ ಇಂಗ್ಲೆಂಡ್ ಚೇಸಿಂಗ್ ಮಾಡುವ ಆತ್ಮವಿಶ್ವಾಸದಲ್ಲಿತ್ತು. ಆದರೆ ನಿಗದಿತ ಓವರ್‌ನಲ್ಲಿ ಬಲಿಷ್ಠ ತಂಡವಾಗಿ ರೂಪುಗೊಂಡಿರುವ ಆಫ್ಘಾನಿಸ್ತಾನ ಬೌಲರ್ಸ್ ಇಂಗ್ಲೆಂಡ್ ಲೆಕ್ಕಾಚಾರ ಉಲ್ಟಾ ಮಾಡಿದರು. ಆರಂಭದಿಂದಲೇ ಆಫ್ಘಾನಿಸ್ತಾನ ಮೇಲುಗೈ ಸಾಧಿಸಿತು. ಜಾನಿ ಬೈರ್‌ಸ್ಟೋ ಕೇವಲ 2 ರನ್ ಸಿಡಿಸಿ ಔಟಾದರು. ಜೂ ರೂಟ್ 11 ರನ್ ಸಿಡಿಸಿ ಔಟಾದರು. ಹೋರಾಟ ನೀಡಿದ ಡೇವಿಡ್ ಮಲನ್ 32 ರನ್ ಸಿಡಿಸಿ ನಿರ್ಗಮಿಸಿದರು.
IND vs PAK ಭಾರತ ಗೆಲುವಿಗೆ ಕಾಶ್ಮೀರದಲ್ಲಿ ಸಂಭ್ರಮಾಚರಣೆ, ಮೋದಿ ಸೇರಿ ಗಣ್ಯರ ಅಭಿನಂದನೆ!
ನಾಯಕ ಜೋಸ್ ಬಟ್ಲರ್ ಕೇವಲ 9 ರನ್ ಸಿಡಿಸಿ ಔಟಾದರು. ಹ್ಯಾರಿ ಬ್ರೂಕ್ ದಿಟ್ಟ ಹೋರಾಟ ನೀಡಿದರು. ಆದರೆ ಇತರ ಬ್ಯಾಟ್ಸ್‌ಮನ್ ಆಫ್ಘಾನಿಸ್ತಾನ ಬೌಲರ್ ದಾಳಿ ಎದುರಿಸಲು ಸಾಧ್ಯವಾಗಲೇ ಇಲ್ಲ. ಮಜೀಬ್ ಯುಆರ್ ರಹಮಾನ್, ಮೊಹಮ್ಮದ್ ನಬಿ, ನವೀನ್ ಉಲ್ ಹಕ್ ಸೇರಿದಂತೆ ಆಫ್ಘಾನಿಸ್ತಾನ ಬೌಲರ್ ವಿಕೆಟ್ ಕಬಳಿಸಿ ಮಿಂಚಿದರು.
ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕುರನ್ ಅಬ್ಬರಿಸಲಿಲ್ಲ. ಕ್ರಿಸ್ ವೋಕ್ಸ್ 9 ರನ್‌ಗೆ ಸುಸ್ತಾದರು. ಇತ್ತ ಹಾಫ್ ಸೆಂಚುರಿ ಸಿಡಿಸಿ ಇಂಗ್ಲೆಂಡ್‌ಗೆ ಆಸರೆಯಾಗಿದ್ದ ಹ್ಯಾರಿ ಬ್ರೂಕ್ 66 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ಆದಿಲ್ ರಶೀದ್ ಹಾಗೂ ಮಾರ್ಕ್ ವುಡ್ ಜೊತೆಯಾಟ ಆಫ್ಘಾನಿಸ್ತಾನದ ಗೆಲವಿನ ಅಂತರ ತಗ್ಗಿಸಿತು.ಆದಿಲ್ ರಶೀದ್ 20 ರನ್ ಸಿಡಿಸಿ ಔಟಾದರು. 18 ರನ್ ಸಿಡಿಸಿದ ಮಾರ್ಕ್ ವುಡ್ ವಿಕೆಟ್ ಪತನದೊಂದಿಗೆ ಇಂಗ್ಲೆಂಡ್ ಆಲೌಟ್ ಆಯಿತು. 40.3 ಓವರ್‌ಗಳಲ್ಲಿ 215 ರನ್‌ಗೆ ಆಲೌಟ್ ಆಯಿತು. ಆಫ್ಘಾನಿಸ್ತಾನ 69 ರನ್ ಗೆಲುವು ದಾಖಲಿಸಿತು.
ದೇವ್ರನ್ನ ಬೇಡಿಕೊಂಡು ಬಾಲ್ ಎಸೆದ ಹಾರ್ದಿಕ್, ಬಿತ್ತು ಇಮಾಮ್ ವಿಕೆಟ್! ವಿಡಿಯೋ ವೈರಲ್
2011ರ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡ ಐರ್ಲೆಂಡ್ ವಿರುದ್ಧ ಮುಗ್ಗರಿಸಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ 327 ರನ್ ಸಿಡಿಸಿತ್ತು. ಆದರೆ ಈ ಬೃಹತ್ ಟಾರ್ಗೆಟನ್ನು ಇಂಗ್ಲೆಂಡ್ 49.1 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು. ಇದೀಗ 2023ರ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಹಾಲಿ ಚಾಂಪಿಯನ್ ತಂಡವಾಗಿ ಟೂರ್ನಿಗೆ ಎಂಟ್ರಿಕೊಟ್ಟರೂ ಆಫ್ಘಾನಿಸ್ತಾನ ವಿರುದ್ದ ಮುಗ್ಗರಿಸಿದೆ.