ICC World Cup 2023 ಮೋದಿ ಸ್ಟೇಡಿಯಂನಲ್ಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್‌ಗೆ ಕಿವೀಸ್ ಚಾಲೆಂಜ್
2019ರ ಫೈನಲ್‌ನಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಿವೀಸ್ ಕಾಯುತ್ತಿದ್ದು, ಇಂಗ್ಲೆಂಡ್‌ಗೆ ಆರಂಭಿಕ ಶಾಕ್ ನೀಡಲು ಎದುರು ನೋಡುತ್ತಿದೆ. ಹಾಲಿ ವಿಶ್ವ ಟಿ20 ಚಾಂಪಿಯನ್ ಸಹ ಆಗಿರುವ ಇಂಗ್ಲೆಂಡ್ ತಂಡದ ತುಂಬಾ ಆಲ್ರೌಂಡರ್‌ಗಳೇ ತುಂಬಿಕೊಂಡಿದ್ದು, ಹಲವು ಆಟಗಾರರು ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಸಾರ್ಮಥ್ಯ ಹೊಂದಿದ್ದಾರೆ.
ಅಹಮದಾಬಾದ್(ಅ.05): ಆಕ್ರಮಣಕಾರಿ ಆಟದ ಮೂಲಕ ಏಕದಿನ ಕ್ರಿಕೆಟ್‌ಗೆ ಹೊಸ ಭಾಷ್ಯ ಬರೆದಿರುವ ಇಂಗ್ಲೆಂಡ್, ಗುರುವಾರ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ, ವಿಶ್ವಕಪ್ ಟ್ರೋಫಿ ತನ್ನಲ್ಲೇ ಉಳಿಸಿಕೊಳ್ಳಲು ಅಭಿಯಾನ ಆರಂಭಿಸಲಿದೆ.
2019ರ ಫೈನಲ್‌ನಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಿವೀಸ್ ಕಾಯುತ್ತಿದ್ದು, ಇಂಗ್ಲೆಂಡ್‌ಗೆ ಆರಂಭಿಕ ಶಾಕ್ ನೀಡಲು ಎದುರು ನೋಡುತ್ತಿದೆ. ಹಾಲಿ ವಿಶ್ವ ಟಿ20 ಚಾಂಪಿಯನ್ ಸಹ ಆಗಿರುವ ಇಂಗ್ಲೆಂಡ್ ತಂಡದ ತುಂಬಾ ಆಲ್ರೌಂಡರ್‌ಗಳೇ ತುಂಬಿಕೊಂಡಿದ್ದು, ಹಲವು ಆಟಗಾರರು ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಸಾರ್ಮಥ್ಯ ಹೊಂದಿದ್ದಾರೆ.
ICC World Cup 2023: ಕ್ರಿಕೆಟ್ ವಿಶ್ವ ಸಮರಕ್ಕೆ ಇಂದು ಅಧಿಕೃತ ಚಾಲನೆ..!
ಸ್ಟೋಕ್ಸ್ ಆಡಲ್ಲ?: ಸಣ್ಣ ಪ್ರಮಾಣದ ಗಾಯದ ಸಮಸ್ಯೆ ಎದುರಿಸುತ್ತಿರುವ ತಾರಾ ಆಲ್ರೌಂಡರ್ ಬೆನ್ ಸ್ಟೋಕ್ಸ್ ಈ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಸ್ಟೋಕ್ಸ್ ಆಡದಿದ್ದರೆ ಬ್ರೂಕ್‌ಗೆ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗಬಹುದು. ಇನ್ನು ವಿಶ್ವಕಪ್‌ಗೂ ಮುನ್ನ ಈ ಎರಡು ತಂಡಗಳು ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಿದ್ದವು. ಕಿವೀಸ್ ವಿರುದ್ಧ ಇಂಗ್ಲೆಂಡ್ ಮೇಲುಗೈ ಸಾಧಿಸಿತ್ತು.
ಕೇನ್, ಸೌಥಿ ಅಲಭ್ಯ: ನ್ಯೂಜಿಲೆಂಡ್‌ಗೆ ಈ ಪಂದ್ಯದಲ್ಲಿ ನಾಯಕ ಕೇನ್ ವಿಲಿಯಮ್ಸನ್ ಹಾಗೂ ವೇಗಿ ಟಿಮ್ ಸೌಥಿ ಇಬ್ಬರ ಸೇವೆಯೂ ಲಭ್ಯವಾಗುವುದಿಲ್ಲ. ವಿಲಿಯಮ್ಸನ್ ಅಭ್ಯಾಸ ಪಂದ್ಯಗಳಲ್ಲಿ ಆಡಿದರೂ, ಗಾಯದ ಪ್ರಮಾಣ ಉಲ್ಬಣಿಸದೆ ಇರಲಿದೆ ಎನ್ನುವ ಕಾರಣಕ್ಕೆ ಈ ಪಂದ್ಯಕ್ಕೆ ಗೈರಾಗಲು ನಿರ್ಧರಿಸಿದ್ದಾರೆ. ಡ್ಯಾರೆಲ್ ಮಿಚೆಲ್, ಡೆವೊನ್ ಕಾನ್‌ವೇ, ಟಾಮ್ ಲೇಥಮ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್‌ರಂತಹ ಬಲಿಷ್ಠ ಬ್ಯಾಟರ್‌ಗಳ ಬಲ ಕಿವೀಸ್‌ಗಿದ್ದು, ವೇಗಿಗಳಾದ ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯೂಸನ್ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ.
ಐಸಿಸಿ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ; ಇಲ್ಲಿದೆ ನೋಡಿ ಟೂರ್ನಿಯ ಕಂಪ್ಲೀಟ್ ಡೀಟೈಲ್ಸ್
ಸಂಭವನೀಯ ಆಟಗಾರರ ಪಟ್ಟಿ:
ಇಂಗ್ಲೆಂಡ್: ಜಾನಿ ಬೇರ್‌ಸ್ಟೋವ್, ಡೇವಿಡ್ ಮಲಾನ್, ಜೋ ರೂಟ್, ಬೆನ್ ಸ್ಟೋಕ್ಸ್/ಹ್ಯಾರಿ ಬ್ರೂಕ್, ಜೋಸ್ ಬಟ್ಲರ್(ನಾಯಕ&ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ರಶೀದ್ ಖಾನ್, ರೀಸ್ ಟಾಪ್ಲೆ.
ನ್ಯೂಜಿಲೆಂಡ್: ವಿಲ್ ಯಂಗ್, ಡೆವೊನ್ ಕಾನ್‌ವೇ, ಡ್ಯಾರೆಲ್ ಮಿಚೆಲ್, ಗ್ಲೆನ್ ಫಿಲಿಫ್ಸ್, ಟಾಮ್ ಲೇಥಮ್(ನಾಯಕ), ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯೂಸನ್, ಟ್ರೆಂಟ್ ಬೌಲ್ಟ್.
ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್
ಉದ್ಘಾಟನಾ ಪಂದ್ಯಕ್ಕೆ 3500 ಪೊಲೀಸರ ಕಣ್ಗಾವಲು!
ಅಹಮದಾಬಾದ್: ಖಲಿಸ್ತಾನಿ ಉಗ್ರರ ಭೀತಿ ಇರುವ ಹಿನ್ನೆಲೆಯಲ್ಲಿ ಗುರುವಾರದ ಉದ್ಘಾಟನಾ ಪಂದ್ಯವು 3500 ಪೊಲೀಸರ ಕಣ್ಗಾವಲಿನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಹಾಗೂ ಗುಜರಾತ್ ಕ್ರಿಕೆಟ್ ಸಂಸ್ಥೆ(ಜಿಸಿಎ) ಮಾಹಿತಿ ನೀಡಿದೆ. ಕ್ರೀಡಾಂಗಣದ ಒಳಗೆ, ಹೊರಗೆ, ಕ್ರೀಡಾಂಗಣದ ಸುತ್ತ ಮುತ್ತಲಿನ ರಸ್ತೆಗಳಲ್ಲಿ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲಿದ್ದೇವೆ ಎಂದು ಜಿಸಿಎ ಭರವಸೆ ವ್ಯಕ್ತಪಡಿಸಿದೆ.
ನ.14ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯಕ್ಕೆ ಅಂದಾಜು 5000ರಿಂದ 6000 ಪೊಲೀಸರನ್ನು ನಿಯೋಜಿಸುವುದಾಗಿ ಗುಜರಾತ್ ಗೃಹ ಇಲಾಖೆ ಮಾಹಿತಿ ನೀಡಿದಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಹೆಚ್ಚಿನ ಭದ್ರತೆಗಾಗಿ ಮಿಲಿಟರಿ ಪಡೆಗಳನ್ನೂ ಕರೆಸಿಕೊಳ್ಳಬಹುದು ಎಂದು ಸ್ಥಳೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.