ಇಂಟ್ರೆಸ್ಟಿಂಗ್ ಸಂಗತಿಯೆಂದರೆ, ಕಳೆದ 4 ಏಕದಿನ ವಿಶ್ವಕಪ್‌ನಲ್ಲಿ ಲಂಕಾ ಎದುರು ಗೆಲುವು ಸಾಧಿಸಲು ಇಂಗ್ಲೆಂಡ್‌ಗೆ ಸಾಧ್ಯವಾಗಿಲ್ಲ. ಹೀಗಾಗಿ ಇಂದು ಲಂಕಾ ಕೈ ಮೇಲಾಗಲಿದೆಯೇ ಅಥವಾ ಇಂಗ್ಲೆಂಡ್ ಗೆದ್ದು ಬೀಗಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಬೆಂಗಳೂರು(ಅ.26): ತಲಾ 3 ಪಂದ್ಯಗಳನ್ನು ಸೋತು ಕಂಗೆಟ್ಟಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ಶ್ರೀಲಂಕಾ, ಸೆಮಿಫೈನಲ್ ರೇಸ್‌ನಲ್ಲಿ ಉಳಿಯಬೇಕಿದ್ದರೆ ಬಹುತೇಕ ಬಾಕಿ ಇರುವ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು. ಉಭಯ ತಂಡಗಳು ಗುರುವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪರಸ್ಪರ ಎದುರಾಗಲಿದ್ದು, ಸೆಮೀಸ್‌ನತ್ತ ಒಂದು ತಂಡದ ಓಟ ಬಹುತೇಕ ಕೊನೆಗೊಳ್ಳಲಿದೆ. 

ಈ ಬಾರಿಯೂ ಪ್ರಶಸ್ತಿ ಫೇವರಿಟ್ ಎನಿಸಿಕೊಂಡಿದ್ದ ಇಂಗ್ಲೆಂಡ್ ಪಾಲಿಗೆ ಈ ವಿಶ್ವಕಪ್ ಕರಾಳ ಆರಂಭ ಒದಗಿಸಿದೆ. ಅಫ್ಘಾನಿಸ್ತಾನ ವಿರುದ್ಧದ ಸೋಲು ತಂಡವನ್ನು ಮತ್ತಷ್ಟು ಕುಗ್ಗಿಸಿದ್ದು ಸುಳ್ಳಲ್ಲ. ತಂಡದಲ್ಲಿ ಬಟ್ಲರ್, ಬ್ರೂಕ್, ಕರ್ರನ್, ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಲಿವಿಂಗ್‌ಸ್ಟೋನ್‌ರಂತಹ ದೊಡ್ಡ ದೊಡ್ಡ ಹೆಸರುಗಳಿದ್ದರೂ ಯಾರಿಂದಲೂ ತಂಡಕ್ಕೆ ಉಪಯುಕ್ತ ಕೊಡುಗೆ ಲಭಿಸುತ್ತಿಲ್ಲ. ತಂಡದ ಪರ ಗರಿಷ್ಠ ವಿಕೆಟ್ ಸರದಾರ ರೀಸ್ ಟಾಪ್ಲಿ ಹೊರಬಿದ್ದಿದ್ದು ತಂಡಕ್ಕೆ ಮತ್ತೊಂದು ಆಘಾತ. ಹೀಗಾಗಿ ಆಲ್ರೌಂಡ್ ಪ್ರದರ್ಶನದ ಹೊರತು ತಂಡದ ಗೆಲುವಿಗೆ ಬೇರೆ ದಾರಿಯಿಲ್ಲ.

ಭಾರತ ಮಹಿಳಾ ಕ್ರಿಕೆಟ್‌ ಟೀಂಗೆ ಅಮೋಲ್‌ ಮಜುಂದಾರ್‌ ಕೋಚ್‌

ಮತ್ತೊಂದೆಡೆ ಲಂಕಾ ಪರಿಸ್ಥಿತಿ ಕೂಡಾ ಶೋಚನೀಯವಾಗಿದೆ. ಗಾಯಾಳುಗಳ ಸಮಸ್ಯೆಯಿಂದ ಬಳಲುತ್ತಿರುವ ತಂಡ ಯಾವ ವಿಭಾಗದಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಬೌಲರ್‌ಗಳು ದುಬಾರಿಯಾಗುತ್ತಿದ್ದು ತಂಡದ ತಲೆನೋವು ಹೆಚ್ಚಿಸಿದೆ. ಆದರೆ ಇಂಗ್ಲೆಂಡ್ ವಿರುದ್ಧದ ಕಳೆದ 4 ವಿಶ್ವಕಪ್ ಪಂದ್ಯದಲ್ಲಿ ಲಂಕಾ ಜಯಗಳಿಸಿದ್ದು, ಗೆಲುವಿನ ಓಟ ಮುಂದುವರಿಸಲು ಕಾಯುತ್ತಿದೆ.

ಕಳೆದ ನಾಲ್ಕು ಏಕದಿನ ವಿಶ್ವಕಪ್‌ನಲ್ಲಿ ಲಂಕಾ ಎದುರು ಗೆದ್ದಿಲ್ಲ ಇಂಗ್ಲೆಂಡ್: 2023ರ ಏಕದಿನ ವಿಶ್ವಕಪ್‌ನಲ್ಲಿ ಲಂಕಾ ಹಾಗೂ ಇಂಗ್ಲೆಂಡ್ ತಂಡದ ಪರಿಸ್ಥಿತಿ ಆರಕ್ಕೆ ಏಳಲಿಲ್ಲ ಮೂರಕ್ಕೆ ಇಳಿಯಲಿಲ್ಲ ಎನ್ನುವಂತಾಗಿದೆ. ಸದ್ಯ ಲಂಕಾ ಒಂದು ಗೆಲುವು ಮೂರು ಸೋಲು ಸಹಿತ ಎರಡು ಅಂಕಗಳ ಸಹಿತ 7ನೇ ಸ್ಥಾನದಲ್ಲಿದ್ದರೆ, ಹಾಲಿ ಚಾಂಪಿಯನ್ ಎಂಟನೇ ಸ್ಥಾನದಲ್ಲಿದೆ.

World Cup 2023: ಆಸೀಸ್‌ ಪ್ರಹಾರಕ್ಕೆ ಬೆಚ್ಚಿದ ನೆದರ್ಲೆಂಡ್‌, ವಿಶ್ವಕಪ್‌ ಇತಿಹಾಸದಲ್ಲೇ ದೊಡ್ಡ ಗೆಲುವು!

ಇನ್ನು ಇಂಟ್ರೆಸ್ಟಿಂಗ್ ಸಂಗತಿಯೆಂದರೆ, ಕಳೆದ 4 ಏಕದಿನ ವಿಶ್ವಕಪ್‌ನಲ್ಲಿ ಲಂಕಾ ಎದುರು ಗೆಲುವು ಸಾಧಿಸಲು ಇಂಗ್ಲೆಂಡ್‌ಗೆ ಸಾಧ್ಯವಾಗಿಲ್ಲ. ಹೀಗಾಗಿ ಇಂದು ಲಂಕಾ ಕೈ ಮೇಲಾಗಲಿದೆಯೇ ಅಥವಾ ಇಂಗ್ಲೆಂಡ್ ಗೆದ್ದು ಬೀಗಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಪಿಚ್ ರಿಪೋರ್ಟ್

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳ ಪಾಲಿನ ಸ್ವರ್ಗ. ಕಳೆದ ವಾರ ಪಾಕಿಸ್ತಾನ- ಆಸ್ಟ್ರೇಲಿಯಾ ಪಂದ್ಯದಲ್ಲಿ 672 ರನ್ ಹರಿದು ಬಂದಿತ್ತು. ಹೀಗಾಗಿ ಮತ್ತೊಮ್ಮೆ ಬೃಹತ್ ಮೊತ್ತ ನಿರೀಕ್ಷಿಸಲಾಗಿದೆ.

ಸಂಭವನೀಯ ಆಟಗಾರರ ಪಟ್ಟಿ

ಇಂಗ್ಲೆಂಡ್: ಜಾನಿ ಬೇರ್‌ಸ್ಟೋವ್, ಡೇವಿಡ್ ಮಲಾನ್, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್(ನಾಯಕ), ಹ್ಯಾರಿ ಬ್ರೂಕ್, ಮೋಯಿನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಮಾರ್ಕ್‌ ವುಡ್‌/ಅಟ್ಕಿನ್‌ಸನ್.

ಶ್ರೀಲಂಕಾ:
ಪಥುಮ್ ನಿಸ್ಸಾಂಕ, ಕುಸಾಲ್ ಪೆರೆರಾ, ಕುಸಾಲ್ ಮೆಂಡಿಸ್(ನಾಯಕ), ಸಮರವಿಕ್ರಮ, ಅಸಲಂಕ, ಧನಂಜಯ ಡಿ ಸಿಲ್ವಾ, ಹೇಮಂತ್/ದುನಿತ್, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ.

ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್