ಎರಡೂ ತಂಡಗಳು ಸ್ಫೋಟಕ ಬ್ಯಾಟಿಂಗ್‌ ಪಡೆಗಳನ್ನು ಹೊಂದಿದ್ದು, ವಾಂಖೇಡೆ ಕ್ರೀಡಾಂಗಣದ ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ರನ್‌ ಹೊಳೆ ನಿರೀಕ್ಷಿಸಬಹುದು. ಯಾವ ತಂಡದ ಬೌಲರ್‌ಗಳು ಹೆಚ್ಚು ಯಶಸ್ಸು ಕಾಣುತ್ತಾರೆ ಎನ್ನುವುದರ ಮೇಲೆ ಈ ಪಂದ್ಯದ ಫಲಿತಾಂಶ ನಿರ್ಧಾರವಾಗುವ ಸಾಧ್ಯತೆ ಹೆಚ್ಚು.

ಮುಂಬೈ(ಅ.21): ಆಘಾತಕಾರಿ ಸೋಲುಗಳಿಂದ ಕಂಗೆಟ್ಟಿರುವ ಇಂಗ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ, ಶನಿವಾರ ಪರಸ್ಪರ ಮುಖಾಮುಖಿಯಾಗಲಿದ್ದು, ತಮ್ಮ ವಿಶ್ವಕಪ್‌ ಅಭಿಯಾನವನ್ನು ಮತ್ತೆ ಯಶಸ್ಸಿನತ್ತ ಕೊಂಡೊಯ್ಯಲು ಎದುರು ನೋಡುತ್ತಿವೆ. ಹಿಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್‌ಗೆ ಸೋಲು ಎದುರಾದರೆ, ದಕ್ಷಿಣ ಆಫ್ರಿಕಾವನ್ನು ನೆದರ್‌ಲೆಂಡ್ಸ್‌ ಮಣಿಸಿತ್ತು. ಸೆಮಿಫೈನಲ್‌ ರೇಸ್‌ನಲ್ಲಿ ಮುಂಚೂಣಿಯಲ್ಲಿ ಉಳಿಯುವ ದೃಷ್ಟಿಯಿಂದ ಎರಡೂ ತಂಡಗಳಿಗೆ ಇದು ಮಹತ್ವದ ಪಂದ್ಯವೆನಿಸಿದೆ.

ಎರಡೂ ತಂಡಗಳು ಸ್ಫೋಟಕ ಬ್ಯಾಟಿಂಗ್‌ ಪಡೆಗಳನ್ನು ಹೊಂದಿದ್ದು, ವಾಂಖೇಡೆ ಕ್ರೀಡಾಂಗಣದ ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ರನ್‌ ಹೊಳೆ ನಿರೀಕ್ಷಿಸಬಹುದು. ಯಾವ ತಂಡದ ಬೌಲರ್‌ಗಳು ಹೆಚ್ಚು ಯಶಸ್ಸು ಕಾಣುತ್ತಾರೆ ಎನ್ನುವುದರ ಮೇಲೆ ಈ ಪಂದ್ಯದ ಫಲಿತಾಂಶ ನಿರ್ಧಾರವಾಗುವ ಸಾಧ್ಯತೆ ಹೆಚ್ಚು. ದಕ್ಷಿಣ ಆಫ್ರಿಕಾದಲ್ಲಿ ಕ್ವಿಂಟನ್ ಡಿ ಕಾಕ್, ಏಯ್ಡನ್ ಮಾರ್ಕ್‌ರಮ್, ರಾಸ್ಸಿ ವ್ಯಾನ್ ಡರ್ ಡುಸ್ಸೇನ್, ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೇನ್ ಅವರಂತಹ ಬಲಾಢ್ಯ ಬ್ಯಾಟರ್‌ಗಳ ದಂಡೇ ಹರಿಗಳ ಜತೆಗಿದೆ.

World Cup 2023: ಚಿನ್ನಸ್ವಾಮಿಯಲ್ಲಿ ಆಸೀಸ್‌ ಬ್ಯಾಟಿಂಗ್‌ಗೆ ಪಾಕ್‌ ಚಿಂದಿಚಿತ್ರಾನ್ನ!

ಇನ್ನೊಂದೆಡೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದಲ್ಲಿ ಜಾನಿ ಬೇರ್‌ಸ್ಟೋವ್, ಹ್ಯಾರಿ ಬ್ರೂಕ್, ಡೇವಿಡ್ ಮಲಾನ್, ಜೋ ರೂಟ್, ನಾಯಕ ಜೋಸ್ ಬಟ್ಲರ್ ಅವರಂತಹ ಬ್ಯಾಟರ್‌ಗಳು ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಈ ಆಟಗಾರರಲ್ಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಮತ್ತೊಮ್ಮೆ ರನ್ ಮಳೆ ಹರಿಯುವ ಸಾಧ್ಯತೆಯಿದೆ.

ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ 4-3 ಗೆಲುವು-ಸೋಲಿನ ದಾಖಲೆ ಹೊಂದಿದ್ದರೂ, ಈ ಟೂರ್ನಿಯಲ್ಲಿ ದ.ಆಫ್ರಿಕಾ ಉತ್ತಮ ಲಯದಲ್ಲಿ ಇರುವಂತೆ ಕಾಣುತ್ತಿದೆ. ಎರಡು ಬಲಿಷ್ಠ ತಂಡಗಳ ನಡುವಿನ ಸೆಣಸಾಟ, ಅಭಿಮಾನಿಗಳಲ್ಲೂ ಭಾರಿ ಕುತೂಹಲ ಮೂಡಿಸಿದೆ.

ಒಟ್ಟು ಮುಖಾಮುಖಿ: 69

ಇಂಗ್ಲೆಂಡ್‌: 30

ದ.ಆಫ್ರಿಕಾ: 33

ಟೈ: 01

ಫಲಿತಾಂಶವಿಲ್ಲ: 05

ಸಂಭವನೀಯ ಆಟಗಾರರ ಪಟ್ಟಿ

ಇಂಗ್ಲೆಂಡ್‌: ಜಾನಿ ಬೇರ್‌ಸ್ಟೋವ್‌, ಡೇವಿಡ್ ಮಲಾನ್‌, ಜೋ ರೂಟ್‌, ಹ್ಯಾರಿ ಬ್ರೂಕ್‌, ಜೋಸ್ ಬಟ್ಲರ್‌(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್‌, ಸ್ಯಾಮ್ ಕರ್ರನ್‌, ಕ್ರಿಸ್ ವೋಕ್ಸ್‌, ರಶೀದ್‌ ಖಾನ್, ಮಾರ್ಕ್ ವುಡ್‌, ರೀಸ್ ಟಾಪ್ಲಿ.

ದ.ಆಫ್ರಿಕಾ: ತೆಂಬಾ ಬವುಮಾ(ನಾಯಕ), ಕ್ವಿಂಟನ್ ಡಿ ಕಾಕ್‌, ವ್ಯಾನ್ ಡರ್ ಡುಸ್ಸೆನ್‌, ಏಯ್ಡನ್ ಮಾರ್ಕ್‌ರಮ್‌, ಹೆನ್ರಿಚ್ ಕ್ಲಾಸೆನ್‌, ಡೇವಿಡ್ ಮಿಲ್ಲರ್‌, ಮಾರ್ಕೊ ಯಾನ್ಸನ್‌, ಕೋಟ್ಜೀ, ಕೇಶವ್ ಮಹಾರಾಜ್, ಕಗಿಸೋ ರಬಾಡ, ಲುಂಗಿ ಎನ್‌ಗಿಡಿ.

ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌