ICC World Cup 2023: ಕುಗ್ಗಿರುವ ಇಂಗ್ಲೆಂಡ್‌ಗೆ ಆಸೀಸ್ ಸವಾಲು..!
ಆಸೀಸ್ ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದು, ಇತರ ತಂಡಗಳಿಗೆ ಹೋಲಿಸಿದರೆ ಸೆಮೀಸ್‌ಗೇರಲು ತಂಡಕ್ಕೆ ದೊಡ್ಡ ಅಡ್ಡಿ ಆತಂಕವೇನಿಲ್ಲ. ಇಂಗ್ಲೆಂಡ್ ಬಳಿಕ ಅಫ್ಘಾನಿಸ್ತಾನ, ಬಾಂಗ್ಲಾದೇಶ ಸವಾಲು ಎದುರಾಗಲಿದ್ದು, ಆಘಾತಕಾರಿ ಸೋಲು ಎದುರಾಗದ ಹೊರತು ಆಸೀಸ್ ಸೆಮೀಸ್‌ಗೇರುವ ಸಾಧ್ಯತೆ ಹೆಚ್ಚು.
ಅಹಮದಾಬಾದ್(ನ.04): ಸತತ 2 ಸೋಲುಗಳ ಬಳಿಕ ಫೀನಿಕ್ಸ್‌ನಂತೆ ಮೇಲೆದ್ದು ಈ ಬಾರಿ ವಿಶ್ವಕಪ್‌ನ ಸೆಮಿಫೈನಲ್ ರೇಸ್‌ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಆಸ್ಟ್ರೇಲಿಯಾ, ಶುಕ್ರವಾರ ನಿರ್ಣಾಯಕ ಪಂದ್ಯದಲ್ಲಿ ಬದ್ಧವೈರಿ ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದೆ. ಈ ಪಂದ್ಯ ಬೇರೆ ಬೇರೆ ಕಾರಣಗಳಿಂದಾಗಿ ಉಭಯ ತಂಡಗಳಿಗೂ ಮಹತ್ವದ್ದೆನಿಸಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ.
ಆಸೀಸ್ ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದು, ಇತರ ತಂಡಗಳಿಗೆ ಹೋಲಿಸಿದರೆ ಸೆಮೀಸ್‌ಗೇರಲು ತಂಡಕ್ಕೆ ದೊಡ್ಡ ಅಡ್ಡಿ ಆತಂಕವೇನಿಲ್ಲ. ಇಂಗ್ಲೆಂಡ್ ಬಳಿಕ ಅಫ್ಘಾನಿಸ್ತಾನ, ಬಾಂಗ್ಲಾದೇಶ ಸವಾಲು ಎದುರಾಗಲಿದ್ದು, ಆಘಾತಕಾರಿ ಸೋಲು ಎದುರಾಗದ ಹೊರತು ಆಸೀಸ್ ಸೆಮೀಸ್‌ಗೇರುವ ಸಾಧ್ಯತೆ ಹೆಚ್ಚು. ತಂಡ ಕಳೆದ 4 ಪಂದ್ಯಗಳಲ್ಲಿ ತೋರಿದ ಅಭೂತಪೂರ್ವ ಪ್ರದರ್ಶನ ಮುಂದುವರಿಸಿದರೆ ಇಂಗ್ಲೆಂಡ್‌ಗೆ ಮತ್ತೊಂದು ಸೋಲು ಕಟ್ಟಿಟ್ಟ ಬುತ್ತಿ.
Breaking: ಟೀಂ ಇಂಡಿಯಾಗೆ ಅತಿದೊಡ್ಡ ಶಾಕ್: ಸ್ಟಾರ್ ಕ್ರಿಕೆಟಿಗ ವಿಶ್ವಕಪ್‌ನಿಂದಲೇ ಔಟ್..!
ಇನ್ನೊಂದೆಡೆ ಆಡಿರುವ 6 ಪಂದ್ಯಗಳಲ್ಲಿ 5 ಸೋಲಿನೊಂದಿಗೆ ಇಂಗ್ಲೆಂಡ್ ಸೆಮಿಫೈನಲ್ ರೇಸ್ ನಿಂದ ಬಹುತೇಕ ಹೊರಬಿದ್ದಿದ್ದರೂ 2025ರ ಚಾಂಪಿಯನ್ಸ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ವಿಶ್ವಕಪ್‌ನಲ್ಲಿ ಗುಂಪು ಹಂತದಲ್ಲಿ ಅಗ್ರ-8ರಲ್ಲಿ ಸ್ಥಾನ ಪಡೆದರಷ್ಟೇ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಸಿಗಲಿದ್ದು, ಹೀಗಾಗಿ ಸುಧಾರಿತ ಪ್ರದರ್ಶನ ತೋರಿ ಬದ್ದವೈರಿಗೆ ಸೋಲುಣಿಸುವ ಮೂಲಕ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಿಂದ ಮೇಲೇರಲು ಕಾಯುತ್ತಿದೆ.
ಆಸ್ಟ್ರೇಲಿಯಾ ತಂಡದ ಪರ ಇಂಗ್ಲೆಂಡ್ ಎದುರಿನ ಪಂದ್ಯಕ್ಕೆ ಆಲ್ರೌಂಡರ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಕ್ಯಾಮರೋನ್ ಗ್ರೀನ್ ಅಲಭ್ಯರಾಗಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಮಾರ್ಕಸ್ ಸ್ಟೋನಿಸ್ ಹಾಗೂ ಕ್ಯಾಮರೋನ್ ಗ್ರೀನ್ ಇಬ್ಬರು ಕಣಕ್ಕಿಳಿಯುವುದು ಬಹುತೇಕ ಖಚಿತ ಎನಿಸಿದೆ. ಕಾಂಗರೂ ಪಡೆಯ ಪರ ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್ ಉತ್ತಮ ಲಯದಲ್ಲಿರುವುದು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.
48 ವರ್ಷಗಳ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತ ಪರ ಅಪರೂಪದ ದಾಖಲೆ ಬರೆದ ಬುಮ್ರಾ..!
ಇನ್ನು ಸತತ ಸೋಲುಗಳಿಂದ ಕಂಗೆಟ್ಟಿರುವ ಇಂಗ್ಲೆಂಡ್‌ಗೆ ಯಾವ ಪ್ಲಾನ್‌ಗಳು ವರ್ಕೌಟ್ ಆಗುತ್ತಿಲ್ಲ. ತಾವು ಚಾಂಪಿಯನ್ ತಂಡ ಎನ್ನುವುದನ್ನು ಮರೆತಂತೆ ಆಡುತ್ತಿದ್ದಾರೆ. ಜಾನಿ ಬೇರ್‌ಸ್ಟೋವ್, ಜೋಸ್ ಬಟ್ಲರ್, ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಜವಾಬ್ದಾರಿಯುತವಾಗಿ ಆಡಿದರಷ್ಟೇ ಬಲಾಢ್ಯ ಆಸ್ಟ್ರೇಲಿಯಾ ತಂಡಕ್ಕೆ ಸೋಲುಣಿಸಲು ಸಾಧ್ಯವಾಗಬಹುದು.
ಸಂಭವನೀಯ ಆಟಗಾರರ ಪಟ್ಟಿ:
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಕ್ಯಾಮರೋನ್ ಗ್ರೀನ್, ಜೋಶ್ ಇಂಗ್ಲಿಸ್, ಪ್ಯಾಟ್ ಕಮಿನ್ಸ್(ನಾಯಕ), ಮಿಚೆಲ್ ಸ್ಟಾರ್ಕ್, ಆಡಂ ಜಂಪಾ, ಜೋಶ್ ಹೇಜಲ್‌ವುಡ್.
ಇಂಗ್ಲೆಂಡ್: ಜಾನಿ ಬೇರ್‌ಸ್ಟೋವ್, ಡೇವಿಡ್ ಮಲಾನ್, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಮೋಯಿನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ರಶೀದ್ ಖಾನ್, ಮಾರ್ಕ್ ವುಡ್.
ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್