ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಕಾದಾಟಕ್ಕೆ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಮೈದಾನ ಆತಿಥ್ಯ ವಹಿಸಿದೆ. ಭಾರತ ತಂಡವು ಗೆಲುವಿನ ನಾಗಾಲೋಟ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ

ಪುಣೆ(ಅ.19): ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಂದು ಆತಿಥೇಯ ಭಾರತ ತಂಡವು ನೆರೆಯ ಬಾಂಗ್ಲಾದೇಶ ಎದುರು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂಟೋ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈಗಾಗಲೇ ಹ್ಯಾಟ್ರಿಕ್ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಟೀಂ ಇಂಡಿಯಾ ಮತ್ತೊಂದು ಗೆಲುವು ದಾಖಲಿಸಲು ಎದುರು ನೋಡುತ್ತಿದೆ. ಇನ್ನೊಂದೆಡೆ ಬಾಂಗ್ಲಾದೇಶ ತಂಡವು ಭಾರತಕ್ಕೆ ಶಾಕ್ ನೀಡುವ ಕನವರಿಕೆಯಲ್ಲಿದೆ.

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಕಾದಾಟಕ್ಕೆ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಮೈದಾನ ಆತಿಥ್ಯ ವಹಿಸಿದೆ. ನಿರೀಕ್ಷೆಯಂತೆಯೇ ಭಾರತ ಎದುರಿನ ಪಂದ್ಯಕ್ಕೂ ನಾಯಕ ಶಕೀಬ್ ಅಲ್ ಹಸನ್ ಅಲಭ್ಯರಾಗಿದ್ದಾರೆ. ಭಾರತ ಎದುರಿನ ಪಂದ್ಯಕ್ಕೆ ಬಾಂಗ್ಲಾದೇಶ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಶಕೀಬ್ ಬದಲಿಗೆ ನಸುಮ್ ಹಾಗೂ ಟಸ್ಕಿನ್ ಅಹಮ್ಮದ್ ಬದಲಿಗೆ ಹಸನ್ ತಂಡ ಕೂಡಿಕೊಂಡಿದ್ದಾರೆ. ಇನ್ನೊಂದೆಡೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 

ಬುಮ್ರಾಗೆ ರೆಸ್ಟ್‌ ಕೊಡಿ, ಬಾಂಗ್ಲಾ ಎದುರು ಈತನಿಗೆ ಮಣೆ ಹಾಕಿ ಎಂದ ಸುನಿಲ್ ಗವಾಸ್ಕರ್..!

ಭಾರತ ತಂಡದಲ್ಲಿ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿತ್ತು. ಆದರೆ ರೋಹಿತ್ ಶರ್ಮಾ, ತಮ್ಮ ಗೆಲುವಿನ ಕಾಂಬಿನೇಷನ್‌ನೊಂದಿಗೆ ಮುಂದುವರೆಯಲು ತೀರ್ಮಾನಿಸಿದ್ದು, ಯಾವುದೇ ಬದಲಾವಣೆ ಮಾಡಿಲ್ಲ.

ಒಟ್ಟು ಮುಖಾಮುಖಿ: 40

ಭಾರತ: 31

ಬಾಂಗ್ಲಾದೇಶ: 08

ಫಲಿತಾಂಶವಿಲ್ಲ: 01

ಉಭಯ ತಂಡಗಳ ಆಟಗಾರರ ಪಟ್ಟಿ ಹೀಗಿದೆ ನೋಡಿ:

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌. ರಾಹುಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್‌ ಯಾದವ್, ಮೊಹಮ್ಮದ್ ಸಿರಾಜ್‌.

ಬಾಂಗ್ಲಾ: ತನ್ಜಿದ್‌, ಲಿಟನ್‌ ದಾಸ್, ನಜ್ಮುಲ್‌ ಹೊಸೈನ್ ಶಾಂಟೋ(ನಾಯಕ), ಮೆಹದಿ ಹಸನ್, ತೌಹಿದ್‌, ಮುಷ್ಫಿಕುರ್‌ ರಹೀಂ, ಮಹ್ಮುದುಲ್ಲಾ, ಹಸನ್ ಮೆಹಮೂದ್, ನಸುಮ್ ಅಹಮ್ಮದ್, ಶೋರಿಫುಲ್‌ ಇಸ್ಲಾಂ, ಮುಸ್ತಾಫಿಜುರ್‌ ರೆಹಮಾನ್.

ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌