ಸದ್ಯ ಆಸೀಸ್‌ ಪಡೆ ಶ್ರೀಲಂಕಾ ಹಾಗೂ ಪಾಕಿಸ್ತಾನ ವಿರುದ್ಧ ಪ್ರದರ್ಶನದಿಂದಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಮಿಚೆಲ್ ಮಾರ್ಷ್‌ ಹಾಗೂ ಡೇವಿಡ್ ವಾರ್ನರ್‌ ಪಾಕ್‌ ವಿರುದ್ಧ ಅಬ್ಬರದ ಶತಕ ಸಿಡಿಸಿದ್ದು, ಮತ್ತೊಮ್ಮೆ ತಂಡಕ್ಕೆ ಆಸರೆಯಾಗುವ ನಿರೀಕ್ಷೆಯಲ್ಲಿದ್ದಾರೆ.

ನವದೆಹಲಿ(ಅ.25): ಮೊದಲೆರಡು ಪಂದ್ಯಗಳ ಸೋಲುಗಳ ಬಳಿಕ ಸತತ 2 ಗೆಲುವಿನೊಂದಿಗೆ ಮೈಕೊಡವಿ ಎದ್ದು ನಿಂತಿರುವ ಆಸ್ಟ್ರೇಲಿಯಾ ಈ ಬಾರಿ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ಜಯದ ಕನಸು ಕಾಣುತ್ತಿದ್ದು, ಬುಧವಾರ ನೆದರ್‌ಲೆಂಡ್ಸ್‌ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ನವದೆಹಲಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಸದ್ಯ ಆಸೀಸ್‌ ಪಡೆ ಶ್ರೀಲಂಕಾ ಹಾಗೂ ಪಾಕಿಸ್ತಾನ ವಿರುದ್ಧ ಪ್ರದರ್ಶನದಿಂದಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಮಿಚೆಲ್ ಮಾರ್ಷ್‌ ಹಾಗೂ ಡೇವಿಡ್ ವಾರ್ನರ್‌ ಪಾಕ್‌ ವಿರುದ್ಧ ಅಬ್ಬರದ ಶತಕ ಸಿಡಿಸಿದ್ದು, ಮತ್ತೊಮ್ಮೆ ತಂಡಕ್ಕೆ ಆಸರೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಕಳೆದ 4 ಇನ್ನಿಂಗ್ಸ್‌ಗಳಲ್ಲಿ ಒಮ್ಮೆ ಮಾತ್ರ 30+ ರನ್‌ ಗಳಿಸಿರುವ ಸ್ಟೀವ್ ಸ್ಮಿತ್‌, ಟೂರ್ನಿಯಲ್ಲಿ ಒಮ್ಮೆಯೂ ಅರ್ಧಶತಕ ಬಾರಿಸದ ಮಾರ್ನಸ್ ಲಬುಶೇನ್‌ ಮೇಲೆ ಈ ಬಾರಿ ಮಿಂಚಲೇಬೇಕಾದ ಒತ್ತಡವಿದೆ. ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯ್ನಿಸ್‌ ಬ್ಯಾಟ್‌ನಿಂದಲೂ ರನ್‌ ಹರಿಯಬೇಕಿದೆ.

ICC World Cup 2023: ಹರಿಣ ಆರ್ಭಟಕ್ಕೆ ಬಾಂಗ್ಲಾ ತತ್ತರ!

ಮತ್ತೊಂದೆಡೆ ಏಕದಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲ್ಲದ ಡಚ್‌ ಪಡೆ ಮೊದಲ ಬಾರಿ ದೈತ್ಯ ಸಂಹಾರಕ್ಕೆ ಕಾಯುತ್ತಿದೆ. ತಂಡ ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧ ಅಚ್ಚರಿಯ ಫಲಿತಾಂಶ ನೀಡಿದ್ದು, ಯಾವುದೇ ತಂಡವನ್ನು ಸೋಲಿಸಬಲ್ಲ ಸಾಮರ್ಥ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಎಲ್ಲಾ ವಿಭಾಗದಲ್ಲೂ ಸುಧಾರಿತ ಪ್ರದರ್ಶನ ತೋರಿದರಷ್ಟೇ ತಂಡಕ್ಕೆ ಟೂರ್ನಿಯಲ್ಲಿ 2ನೇ ಗಲುವು ದಕ್ಕಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್‌, ಮಿಚೆಲ್ ಮಾರ್ಷ್‌, ಸ್ಟೀವ್ ಸ್ಮಿತ್‌, ಮಾರ್ನಸ್ ಲಬುಶೇನ್‌, ಜೋಶ್ ಇಂಗ್ಲಿಸ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಮಾರ್ಕಸ್ ಸ್ಟೋಯ್ನಿಸ್‌, ಪ್ಯಾಟ್ ಕಮಿನ್ಸ್‌(ನಾಯಕ), ಮಿಚೆಲ್ ಸ್ಟಾರ್ಕ್‌, ಜೋಶ್ ಹೇಜಲ್‌ವುಡ್‌, ಆಡಂ ಜಂಪಾ.

ನೆದರ್‌ಲೆಂಡ್ಸ್‌: ವಿಕ್ರಂಜಿತ್‌, ಮ್ಯಾಕ್ಸ್‌ ಒಡೌಡ್‌, ಆ್ಯಕರ್‌ಮನ್‌, ಲೀಡೆ, ಸೈಬ್ರಂಡ್‌, ತೇಜ, ಎಡ್ವರ್ಡ್ಸ್‌(ನಾಯಕ), ಬೀಕ್‌, ಮೆರ್ವೆ, ಆರ್ಯನ್‌, ಮೀಕೆರನ್‌.

ಒಟ್ಟು ಮುಖಾಮುಖಿ: 02

ಆಸ್ಟ್ರೇಲಿಯಾ: 02

ನೆದರ್‌ಲೆಂಡ್ಸ್‌: 00

ಪಂದ್ಯ: ಮಧ್ಯಾಹ್ನ 2ಕ್ಕೆ