Asianet Suvarna News Asianet Suvarna News

ICC Women's World Cup: ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

* ದಕ್ಷಿಣ ಆಫ್ರಿಕಾ ಎದುರು ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

* ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕಿದು ಮಾಡು ಇಲ್ಲವೇ ಮಡಿ ಪಂದ್ಯ

* ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡದಲ್ಲಿ ಎರಡು ಬದಲಾವಣೆ

ICC Womens World Cup India won the to and elected to bat first against South Africa kvn
Author
Bengaluru, First Published Mar 27, 2022, 6:24 AM IST

ಕ್ರೈಸ್ಟ್‌ಚರ್ಚ್‌(ಮಾ.27): ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿಂದು (ICC Women's World Cup) ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ (Mithali Raj) ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಭಾರತದ ಪಾಲಿಗೆ ಸೆಮೀಸ್‌ಗೇರುವ ದೃಷ್ಟಿಯಿಂದ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ. ಭಾರತ ತಂಡವು ಎರಡು ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ.

ಹೌದು, ಇಲ್ಲಿನ ಹೇಗ್ಲೆ ಓವಲ್ ಮೈದಾನದಲ್ಲಿ ಆರಂಭವಾಗಿರುವ ಪಂದ್ಯದಲ್ಲಿ ಭಾರತ ತಂಡದಲ್ಲಿ ಎರಡು ಬದಲಾವಣೆಗಳಾಗಿದ್ದು, ಅನುಭವಿ ವೇಗಿ ಜೂಲನ್ ಗೋಸ್ವಾಮಿ (Jhulan Goswami) ಹಾಗೂ ಮೆಘನಾ ಸಿಂಗ್‌ಗೆ ವಿಶ್ರಾಂತಿಯನ್ನು ನೀಡಲಾಗಿದ್ದು, ದೀಪ್ತಿ ಶರ್ಮಾ (Deepti Sharma) ಹಾಗೂ ಮೆಘನಾ ಸಿಂಗ್ (Meghna Singh) ತಂಡ ಕೂಡಿಕೊಂಡಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ತಂಡದಲ್ಲಿ ಕೂಡಾ ಎರಡು ಬದಲಾವಣೆಗಳಾಗಿದ್ದು, ಲಾರಾ ಗುಡಾಲ್, ಮಸಬಟ ಕ್ಲಾಸ್‌ ತಂಡ ಕೂಡಿಕೊಂಡಿದ್ದಾರೆ.

ನಿರ್ಣಾಯಕ ಪಂದ್ಯಕ್ಕೂ ಮುನ್ನ ಜೂಲನ್ ಗೋಸ್ವಾಮಿ ಗಾಯಕ್ಕೊಳಗಾಗಿರುವುದು ಭಾರತ ತಂಡದ ಪಾಲಿಗೆ ಕೊಂಚ ಹಿನ್ನೆಡೆಯಾಗುವ ಸಾಧ್ಯತೆಯಿದೆ. ಆದರೆ ಆಲ್ರೌಂಡರ್ ದೀಪ್ತಿ ಶರ್ಮಾ ತಂಡದೊಳಗೆ ಸೇರ್ಪಡೆಯಾಗಿರುವುದು ಮಿಥಾಲಿ ಪಡೆಯ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ. ಕಳೆದ 5 ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಇದೇ ಮೊದಲ ಬಾರಿಗೆ ಜೂಲನ್ ಗೋಸ್ವಾಮಿ ಇಲ್ಲದೇ ಕಣಕ್ಕಿಳಿದಿದೆ. ಕಳೆದ 5 ಮಹಿಳಾ ವಿಶ್ವಕಪ್‌ ಟೂರ್ನಿಗಳಲ್ಲಿ ಜೂಲನ್ ಗೋಸ್ವಾಮಿ ಒಂದೇ ಒಂದು ಪಂದ್ಯವನ್ನು ಮಿಸ್‌ ಮಾಡಿಕೊಂಡಿರಲಿಲ್ಲ.

ICC Women's World Cup: ದಕ್ಷಿಣ ಆಫ್ರಿಕಾ ಎದುರು ಗೆದ್ದರಷ್ಟೇ ಭಾರತಕ್ಕೆ ಸೆಮೀಸ್ ಅವಕಾಶ

ಆಡಿರುವ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿರುವ ಮಿಥಾಲಿ ರಾಜ್‌ ನೇತೃತ್ವದ ಭಾರತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು, ಗೆದ್ದರೆ ಮಾತ್ರ ಸೆಮೀಸ್‌ಗೆ ಲಗ್ಗೆ ಇಡಲಿದೆ. ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಈಗಾಗಲೇ ಆಸ್ಪ್ರೇಲಿಯಾ ಮತ್ತು ದ.ಆಫ್ರಿಕಾ ಸೆಮೀಸ್‌ ಪ್ರವೇಶಿಸಿದ್ದು, ಉಳಿದ 2 ಸ್ಥಾನಗಳಿಗಾಗಿ ಭಾರತ, ಇಂಗ್ಲೆಂಡ್‌ ಮತ್ತು ವಿಂಡೀಸ್‌ ನಡುವೆ ಪೈಪೋಟಿ ಏರ್ಪಟ್ಟಿದೆ. ರೌಂಡ್‌ ರಾಬಿನ್‌ ಹಂತದ ಪಂದ್ಯಗಳನ್ನು ಪೂರ್ಣಗೊಳಿಸಿರುವ ವಿಂಡೀಸ್‌ 7 ಅಂಕ ಸಂಪಾದಿಸಿದ್ದು, ಇಂಗ್ಲೆಂಡ್‌ ಬಳಿ 6 ಅಂಕ ಇದೆ. ಶನಿವಾರ ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್‌ ಸೆಣಸಲಿದ್ದು, ಗೆದ್ದರೆ 3ನೇ ತಂಡವಾಗಿ ಸೆಮೀಸ್‌ ಪ್ರವೇಶಿಸಲಿದೆ. ಆಗ ನಾಲ್ಕನೇ ಸ್ಥಾನಕ್ಕಾಗಿ ಭಾರತ ಹಾಗೂ ವಿಂಡೀಸ್‌ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ. ಒಂದು ವೇಳೆ ಭಾರತ-ದ.ಆಫ್ರಿಕಾ ಪಂದ್ಯ ಮಳೆಯಿಂದ ರದ್ದಾದರೆ ಭಾರತಕ್ಕೆ ಲಾಭವಾಗಲಿದೆ. ನೆಟ್‌ ರನ್‌ರೇಟ್‌ ಆಧಾರದಲ್ಲಿ ವಿಂಡೀಸನ್ನು ಹಿಂದಿಕ್ಕಿ ಮಿಥಾಲಿ ಪಡೆ ನಾಕೌಟ್‌ಗೆ ಲಗ್ಗೆ ಇಡಲಿದೆ.

ಒಂದು ವೇಳೆ ಬಾಂಗ್ಲಾ ವಿರುದ್ಧ ಇಂಗ್ಲೆಂಡ್‌, ದ.ಆಫ್ರಿಕಾ ವಿರುದ್ಧ ಭಾರತ ಸೋತರೆ ವಿಂಡೀಸ್‌ ನೇರವಾಗಿ ಸೆಮೀಸ್‌ ತಲುಪಲಿದೆ. ನೆಟ್‌ ರನ್‌ರೇಟ್‌ ಅಧಾರದಲ್ಲಿ ಇಂಗ್ಲೆಂಡ್‌ ಅಥವಾ ಭಾರತ ಅಂತಿಮ 4ರ ಘಟ್ಟಕ್ಕೆ ಅರ್ಹತೆ ಪಡೆಯಲಿದೆ.

ಉಭಯ ತಂಡಗಳು ಹೀಗಿವೆ ನೋಡಿ

ಭಾರತ ಮಹಿಳಾ ಕ್ರಿಕೆಟ್ ತಂಡ
ಸ್ಮೃತಿ ಮಂಧನಾ, ಶಫಾಲಿ ವರ್ಮಾ, ಯಾಶ್ತಿಕಾ ಭಾಟಿಯಾ, ಮಿಥಾಲಿ ರಾಜ್(ನಾಯಕಿ), ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್(ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಸ್ನೆಹ್ ರಾಣಾ, ದೀಪ್ತಿ ಶರ್ಮಾ, ಮೆಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್.

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ
ಲಿಜ್ಜೆಲೆ ಲೀ, ಲೌರಾ ವೋಲ್ವರ್ಡ್‌, ಲಾರಾ ಗುಡಾಲ್, ಸುನೆ ಲೌಸ್(ನಾಯಕಿ), ಮಿಗ್ನಾನ್‌ ಡು ಪ್ರೀಜ್, ಮರಿಜಾನೆ ಕ್ಯಾಪ್, ಚೋಲೆ ಟ್ರಯನ್, ತ್ರಿಶಾ ಚೆಟ್ಟಿ(ವಿಕೆಟ್ ಕೀಪರ್), ಶಬ್ನಿಮ್‌ ಇಸ್ಮಾಯಿಲ್, ಮಸಬೆಟ ಕ್ಲಾಸ್, ಅಯಾಬೊಂಗ ಕಾಕ

Follow Us:
Download App:
  • android
  • ios