Asianet Suvarna News Asianet Suvarna News

ICC U-19 World Cup: ಭಾರತಕ್ಕಿಂದು ಐರ್ಲೆಂಡ್ ಸವಾಲು, ಕ್ವಾರ್ಟರ್ ಫೈನಲ್‌ ಮೇಲೆ ಕಣ್ಣಿಟ್ಟ ಯಂಗಿಸ್ತಾನ್‌

*ಐಸಿಸಿ ಅಂಡರ್‌-19 ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕಿಂದು ಐರ್ಲೆಂಡ್ ತಂಡ ಸವಾಲು

* ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಉಭಯ ತಂಡಗಳು

* ಐರ್ಲೆಂಡ್ ಮಣಿಸಿ ಕ್ವಾರ್ಟರ್‌ ಫೈನಲ್‌ಗೇರುವ ಕನಸು ಕಾಣುತ್ತಿರುವ ಯಶ್ ಧುಳ್ ಪಡೆ

ICC U 19 World Cup Yesh Dhull led Indian Cricket Team take on Ireland Challenge in Trinidad kvn
Author
Bengaluru, First Published Jan 19, 2022, 10:08 AM IST

ಟ್ರಿನಿಡಾಡ್‌(ಜ.19): 14ನೇ ಆವೃತ್ತಿಯ ಐಸಿಸಿ ಅಂಡರ್‌-19 ಏಕದಿನ ವಿಶ್ವಕಪ್‌ನಲ್ಲಿ (ICC U-19 World Cup) ಗೆಲುವಿನ ಆರಂಭ ಪಡೆದಿರುವ 4 ಬಾರಿಯ ಚಾಂಪಿಯನ್‌ ಭಾರತ, ಬುಧವಾರ ಐರ್ಲೆಂಡ್‌ (Ireland) ವಿರುದ್ಧ ಸೆಣಸಾಡಲಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದಿರುವ ದೆಹಲಿಯ ಯಶ್‌ ಧುಳ್‌ (Yash Dhull) ನಾಯಕತ್ವದ ತಂಡ, ಈ ಪಂದ್ಯದಲ್ಲೂ ಗೆಲ್ಲುವ ನಿರೀಕ್ಷೆಯಲ್ಲಿದೆ. ಭಾರತ ಸದ್ಯ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದು, ಈ ಪಂದ್ಯದಲ್ಲೂ ಗೆದ್ದರೆ ಕ್ವಾರ್ಟರ್‌ ಫೈನಲ್‌ ಅವಕಾಶ ಬಹುತೇಕ ಖಚಿತಪಡಿಸಿಕೊಳ್ಳಲಿದೆ. 

ಇನ್ನು, ಉಗಾಂಡ (Uganda) ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದಿರುವ ಐರ್ಲೆಂಡ್‌ ಕೂಡಾ ಮತ್ತೊಂದು ಗೆಲುವಿಗೆ ಎದುರು ನೋಡುತ್ತಿದ್ದು, ಹಾಲಿ ರನ್ನರ್‌-ಅಪ್‌ ತಂಡಕ್ಕೆ ಆಘಾತ ನೀಡುವ ತವಕದಲ್ಲಿದೆ. ಭಾರತಕ್ಕೆ ಕೊನೆಯ ಪಂದ್ಯದಲ್ಲಿ ಉಗಾಂಡ ಎದುರಾಗಲಿದ್ದು, ಐರ್ಲೆಂಡ್‌ ತಂಡ ದಕ್ಷಿಣ ಆಫ್ರಿಕಾ ಸವಾಲನ್ನು ಎದುರಿಸಬೇಕಿದೆ.

ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎಂದೇ ಟೂರ್ನಿಗೆ ಕಾಲಿಟ್ಟಿರುವ ಭಾರತ ಬಲಿಷ್ಠ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಪಡೆಯನ್ನು ಹೊಂದಿದೆ. ನಾಯಕ ಯಶ್ ಧುಳ್‌, ಹರ್ನೂರ್‌ ಸಿಂಗ್‌, ಶೇಖ್‌ ರಶೀದ್‌ ಬ್ಯಾಟಿಂಗ್‌ ಆಧಾರಸ್ತಂಭಗಳಾದರೆ, ಆರಂಭಿಕ ಪಂದ್ಯದಲ್ಲಿ 5 ಗೊಂಚಲು ಪಡೆದಿರುವ ವಿಕ್ಕಿ ಓಸ್ತ್ಬಾಲ್‌, ರಾಜ್‌ ಭವಾ, ರಾಜ್‌ವರ್ಧನ್‌ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಐರ್ಲೆಂಡ್‌ ವಿರುದ್ಧ ಆಲ್ರೌಂಡ್‌ ಪ್ರದರ್ಶನ ನೀಡಿದರೆ ಮಾತ್ರ ಭಾರತಕ್ಕೆ ಜಯ ದಕ್ಕಲಿದೆ.

ICC U-19 World Cup: ಗೆಲುವಿನೊಂದಿಗೆ ಶುಭಾರಂಭ ಮಾಡಿದ ಭಾರತ

ಪಂದ್ಯ ಆರಂಭ: ಸಂಜೆ 6.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಕಿರಿಯರ ವಿಶ್ವಕಪ್‌: ಲಂಕಾ, ವಿಂಡೀಸ್‌, ಪಾಕ್‌ಗೆ ಜಯ

ಬಾಸ್ಸೆಟೆರ್‌: ಐಸಿಸಿ ಕಿರಿಯರ ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ, ಪಾಕಿಸ್ತಾನ ಹಾಗೂ ಆತಿಥೇಯ ವೆಸ್ಟ್‌ ಇಂಡೀಸ್‌ ತಂಡಗಳು ಜಯ ಸಾಧಿಸಿವೆ. ಸೋಮವಾರ ನಡೆದ ಪಂದ್ಯದಲ್ಲಿ ಲಂಕಾ ತಂಡ ಆಸ್ಪ್ರೇಲಿಯಾ ವಿರುದ್ಧ 4 ವಿಕೆಟ್‌ ಗೆಲುವು ಸಾಧಿಸಿದರೆ, ಸ್ಕಾಟ್ಲೆಂಡ್‌ ತಂಡವನ್ನು ವಿಂಡೀಸ್‌ 7 ವಿಕೆಟ್‌ಗಳಿಂದ ಮಣಿಸಿತು. ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ 115 ರನ್‌ ಜಯಭೇರಿ ಬಾರಿಸಿತು.

IPL 2022: ಅಹಮದಾಬಾದ್‌ಗೆ ಪಾಂಡ್ಯ, ರಶೀದ್‌, ಗಿಲ್‌ ಸೇರ್ಪಡೆ ?

ನವದೆಹಲಿ: ಭಾರತದ ತಾರಾ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ(Hardik Pandya), ಸ್ಪಿನ್ನರ್‌ ರಶೀದ್‌ ಖಾನ್‌ (Rashid Khan) ಹಾಗೂ ಬ್ಯಾಟರ್‌ ಶುಭ್‌ಮನ್‌ ಗಿಲ್‌ (Shubman Gill) ಐಪಿಎಲ್‌ನ ಹೊಸ ತಂಡ ಅಹಮದಾಬಾದ್‌ಗೆ ಸೇರ್ಪಡೆಗೊಳ್ಳುವುದು ಬಹುತೇಕ ಖಚಿತವಾಗಿದ್ದು, ಶೀಘ್ರದಲ್ಲೇ ಫ್ರಾಂಚೈಸಿಯು ಅಧಿಕೃತ ಘೋಷಣೆ ಮಾಡಲಿದೆ ಎಂದು ವರದಿಯಾಗಿದೆ. ಹಾರ್ದಿಕ್‌ ಹಾಗೂ ರಶೀದ್‌ ಅವರನ್ನು ತಲಾ 15 ಕೋಟಿ, ಗಿಲ್‌ಗೆ 7 ಕೋಟಿ ರು. ನೀಡಿ ಖರೀದಿಸಲಿದ್ದು, ಹಾರ್ದಿಕ್‌ ತಂಡದ ನಾಯಕತ್ವ ವಹಿಸಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಐಪಿಎಲ್‌ನಲ್ಲಿ ಇದುವರೆಗೂ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ಪ್ರತಿನಿಧಿಸಿದ್ದರು. ಆದರೆ 2022ರ ಮೆಗಾ ಹರಾಜಿಗೂ (IPL Mega Auction) ಮುನ್ನ ಮುಂಬೈ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯ ಅವರನ್ನು ತಂಡದಿಂದ ಕೈಬಿಟ್ಟಿತ್ತು. ಇನ್ನೊಂದೆಡೆ ರಶೀದ್ ಖಾನ್‌ ಸನ್‌ರೈಸರ್ಸ್‌ ಹೈದರಾಬಾದ್ ತಂಡದಿಂದ ಹೊರ ನಡೆದಿದ್ದರು. ಟಿ20 ಕ್ರಿಕೆಟ್‌ನ ಸ್ಪೆಷಲಿಸ್ಟ್ ಲೆಗ್‌ಸ್ಪಿನ್ನರ್ ಆಗಿ ಗುರುತಿಸಿಕೊಂಡಿರುವ ರಶೀದ್ ಖಾನ್‌ಗೆ ಅಹಮದಾಬಾದ್ ಫ್ರಾಂಚೈಸಿ ಗಾಳ ಹಾಕಿದೆ. ಇನ್ನೊಂದೆಡೆ ಕೆಕೆಆರ್ ತಂಡದ ಪ್ರತಿಭಾನ್ವಿತ ಬ್ಯಾಟರ್‌ ಶುಭ್‌ಮನ್ ಗಿಲ್ ಈ ಬಾರಿ ಅಹಮದಾಬಾದ್ ತಂಡದ ಪರ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಮೆಗಾ ಹರಾಜಿಗೂ ಮುನ್ನ ಹೊಸ ಫ್ರಾಂಚೈಸಿಗಳಾದ ಅಹಮದಾಬಾದ್ ಹಾಗೂ ಲಖನೌ ತಂಡಗಳಿಗೆ ಗರಿಷ್ಠ ಮೂರು ಆಟಗಾರರನ್ನು ಆಯ್ದುಕೊಳ್ಳಲು ಬಿಸಿಸಿಐ ಅವಕಾಶ ನೀಡಿದೆ.

Follow Us:
Download App:
  • android
  • ios