Asianet Suvarna News Asianet Suvarna News

ICC U-19 World Cup : ರಾಜ್ ಬಾವಾಗೆ ಐದು ವಿಕೆಟ್, ಭಾರತದ ಗೆಲುವಿಗೆ 190 ರನ್ ಗುರಿ ನೀಡಿದ ಇಂಗ್ಲೆಂಡ್!

ರಾಜ್ ಬಾವಾ ಐದು ವಿಕೆಟ್ ಸಾಧನೆ
ಹೋರಾಟದ ಆಟವಾಡಿದ ಜೇಮ್ಸ್ ರೀವ್
ಐದನೇ ಬಾರಿಗೆ ವಿಶ್ವಕಪ್ ಗೆಲ್ಲಲು ಭಾರತಕ್ಕೆ 190 ರನ್ ಗುರಿ
 

ICC U 19 World Cup Final Match Raj Bawa Takes Fifer India Need 190 Runs To Win san
Author
Bengaluru, First Published Feb 5, 2022, 10:36 PM IST

ಆಂಟಿಗಾ (ಫೆ.5): ರಾಜ್ ಬಾವಾ (Raj Bawa) ಹಾಗೂ ರವಿಕುಮಾರ್ (Ravi Kumar)ತಮ್ಮ ನಡುವೆ 9 ವಿಕೆಟ್ ಗಳನ್ನು ಹಂಚಿಕೊಂಡ ಸಾಹಸದಿಂದ ಭಾರತ (India) ತಂಡ ಐಸಿಸಿ ಅಂಡರ್ 19 ವಿಶ್ವಕಪ್ ಫೈನಲ್ ( ICC Under 19 World Cup 2022 )ಪಂದ್ಯದಲ್ಲಿ ಗೆಲುವಿಗೆ 190 ರನ್ ಗಳ ಸವಾಲು ಪಡೆದಿದೆ. 91 ರನ್ ಗೆ 7 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತದ ಭೀತಿಯಲ್ಲಿದ್ದ ಇಂಗ್ಲೆಂಡ್ (England) ತಂಡ 8ನೇ ವಿಕೆಟ್ ಗೆ ಆಕರ್ಷಕ 93 ರನ್ ಜೊತೆಯಾಟವಾಡಿದ್ದರಿಂದ ಸವಾಲಿನ ಮೊತ್ತ ಕಲೆಹಾಕಲು ಯಶಸ್ವಿಯಾಯಿತು.

ಸರ್ ವಿವಿ ರಿಚರ್ಡ್ಸನ್ ಕ್ರೀಡಾಂಗಣದಲ್ಲಿ (Sir Vivian Richards Stadium) ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಜೇಮ್ಸ್ ರೀವ್ (James Rew) ಆಕರ್ಷಕ 95 ರನ್ ಸಿಡಿಸಿದರೂ 44.5 ಓವರ್ ಗಳಲ್ಲಿ 189 ರನ್ ಗೆ ಆಲೌಟ್ ಆಯಿತು. ಭಾರತದ ಪರವಾಗಿ ರವಿಕುಮಾರ್ 34 ರನ್ ಗೆ 4 ವಿಕೆಟ್ ಉರುಳಿಸಿದರೆ, ರಾಜ್ ಬಾವಾ 31 ರನ್ ಗೆ 5 ವಿಕೆಟ್ ಉರುಳಿಸಿ ಮಿಂಚಿದರು.

ರಾಜ್ ಬಾವಾ ಅವರ ನಿರ್ವಹಣೆ ಅಂಡರ್ 19 ವಿಶ್ವಕಪ್ ನಲ್ಲಿಯೇ ಈವರೆಗಿನ ಶ್ರೇಷ್ಠ ನಿರ್ವಹಣೆ ಎನಿಸಿದೆ. ಇದಕ್ಕೂ ಮುನ್ನ 2006ರಲ್ಲಿ ಪಾಕಿಸ್ತಾನದ ಅನ್ವರ್ ಅಲಿ ಭಾರತದ ವಿರುದ್ಧ 9 ಓವರ್ ಗಳ ದಾಳಿ ನಡೆಸಿ 35 ರನ್ ಗೆ 5 ವಿಕೆಟ್ ಉರುಳಿಸಿದ್ದು ಸಾಧನೆಯಾಗಿತ್ತು.
 

ಕಳೆದ ನಾಲ್ಕು ಪಂದ್ಯಗಳಲ್ಲಿ ಈ ಮೈದಾನದಲ್ಲಿ ಆಡಿದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ಸಾಧಿಸಿದ ದಾಖಲೆ ಇದ್ದ ಕಾರಣ ಇಂಗ್ಲೆಂಡ್ ತಂಡದ ನಾಯಕ ಟಾಮ್ ಪ್ರೆಸ್ಟ್ ಟಾಸ್ ಗೆದ್ದ ಬೆನ್ನಲ್ಲಿಯೇ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಅವರ ನಿರೀಕ್ಷೆಗೆ ವಿರುದ್ಧವಾಗಿ ತಂಡದ ಬ್ಯಾಟ್ಸ್ ಮನ್ ಗಳು ಆಟವಾಡಿದರು. 2ನೇ ಓವರ್ ನಲ್ಲಿಯೇ ಜೇಕಬ್ ಬೇಥಲ್ ವಿಕೆಟ್ ಅನ್ನು ರವಿ ಕುಮಾರ್ ಉರುಳಿಸಿದ ಬಳಿಕ ಇಂಗ್ಲೆಂಡ್ ತಂಡದ ವಿಕೆಟ್ ಗಳು ಉರುಳಲು ಆರಂಭಿಸಿದವು. ಜೇಮ್ಸ್ ರೀವ್ ಹಾಗೂ ಜೇಮ್ಸ್ ಸೇಲ್ಸ್ (34ರನ್, 65 ಎಸೆತ, 2 ಬೌಂಡರಿ) ನಡುವೆ 8ನೇ ವಿಕೆಟ್ ಗೆ 93 ರನ್ ಜೊತೆಯಾಟ ನಡೆಯುವವರೆಗೂ ಇಂಗ್ಲೆಂಡ್ ತಂಡ 120 ರನ್ ಪೇರಿಸಲು ಕಷ್ಟಪಡುತ್ತಿತ್ತು.

ಕಪಿಲ್ ದಾಖಲೆ ಸರಿಗಟ್ಟಿದ ರಾಜ್ ಬಾವಾ: ಐದು ವಿಕೆಟ್ ಸಾಧನೆ ಮಾಡುವ ಮೂಲಕ ಆಲ್ರೌಂಡರ್ ರಾಜಾ ಬಾವಾ  ಅಪರೂಪದ ದಾಖಲೆಯನ್ನ ಮಾಡಿದರು. ಐಸಿಸಿ ಟೂರ್ನಿಯ ಫೈನಲ್ ಪಂದ್ಯವೊಂದರಲ್ಲಿ ಐದು ವಿಕೆಟ್ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಪೀಯುಷ್ ಚಾವ್ಲಾ (Piyush Chawla), ರವಿ ಬಿಷ್ಣೋಯಿ (Ravi Bishnoi) ಹಾಗೂ ಸಂದೀಪ್ ಶರ್ಮಾವರ (Sandeep Sharma) ದಾಖಲೆಯನ್ನು ರಾಜ್ ಬಾವಾ ಮುರಿದರು. ಈ ಬೌಲರ್ ಗಳು ಐಸಿಸಿ ವಿಶ್ವಕಪ್‌ ಫೈನಲ್ ನಲ್ಲಿ 4 ವಿಕೆಟ್ ಸಾಧನೆ ಮಾಡಿದ ಭಾರತ ಬೌಲರ್ ಗಳೆನಿಸಿದ್ದಾರೆ. ಇದೇ ಪಂದ್ಯದಲ್ಲಿ 4 ವಿಕೆಟ್ ಸಾಧನೆ ಮಾಡಿದ ರವಿಕುಮಾರ್ ಈ ಪ್ಲೇಯರ್ ಗಳ ಪಟ್ಟಿಗೆ ಸೇರಿದ್ದಾರೆ. ಅಂಡರ್ 19 ವಿಶ್ವಕಪ್ ಫೈನಲ್ ನಲ್ಲಿ 5 ವಿಕೆಟ್ ಉರುಳಿಸಿದ ವಿಶ್ವದ 2ನೇ ಬೌಲರ್ ರಾಜ್ ಬಾವಾ ಎನಿಸಿದ್ದಾರೆ. ಇದಕ್ಕೂ ಮುನ್ನ ಪಾಕಿಸ್ತಾನದ ಅನ್ವರ್ ಅಲಿ 2006ರ ಟೂರ್ನಿಯಲ್ಲಿ ಭಾರತ ವಿರುದ್ಧ ಈ ಸಾಧನೆ ಮಾಡಿದ್ದರು.

IPL 2022: ಈ ಮೂರು ಕಾರಣಕ್ಕಾಗಿಯಾದರೂ ಆರ್‌ಸಿಬಿ ಹರಾಜಿನಲ್ಲಿ ಸ್ಟೀವ್ ಸ್ಮಿತ್‌ರನ್ನು ಖರೀದಿಸಬೇಕು..!
ಅದಲ್ಲದೆ, ಐಸಿಸಿ ಟೂರ್ನಿಯಲ್ಲಿ 150ಕ್ಕೂ ಅಧಿಕ ರನ್ ಹಾಗೂ ಐದು ವಿಕೆಟ್ ಸಾಧನೆ ಮಾಡಿದ ಭಾರತದ 2ನೇ ಆಟಗಾರ ಎನಿಸಿದ್ದಾರೆ. ಇದಕ್ಕೂ ಮುನ್ನ ಕಪಿಲ್ ದೇವ್ (Kapil Dev ) ಈ ಸಾಧನೆ ಮಾಡಿದ್ದರು. 1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಪಿಲ್ ದೇವ್ ಈ ಅಪರೂಪದ ಸಾಧನೆಯನ್ನು ಒಲಿಸಿಕೊಂಡಿದ್ದರು.

Aus vs Pak: 24 ವರ್ಷಗಳ ಬಳಿಕ ಪಾಕ್ ಪ್ರವಾಸಕ್ಕೆ ಆಸ್ಟ್ರೇಲಿಯಾ ಒಪ್ಪಿಗೆ..!
ರಾಜ್ ಬಾವಾ ಪಾಲಿಗೆ ಈ ಟೂರ್ನಿ ಬಹಳ ವಿಶೇಷವಾಗಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಗಮನಸೆಳೆದಿದ್ದಾರೆ. ಉಗಾಂಡ ವಿರುದ್ಧ ಗುಂಪು ಹಂತದ ಪಂದ್ಯದಲ್ಲ108 ಎಸೆತಗಳಲ್ಲಿ14 ಬೌಂಡರಿ ಹಾಗೂ 8 ಸಿಕ್ಸರ್ ನೊಂದಿಗೆ 162 ರನ್ ಸಿಡಿಸುವ ಮೂಲಕ, ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಆಟಗಾರ ವೈಯಕ್ತಿಕ ಗರಿಷ್ಠ ಸ್ಕೋರ್ ದಾಖಲೆಯ ಪಟ್ಟಿಯಲ್ಲಿ ಶಿಖರ್ ಧವನ್ (Shikhar Dhawan) ಅವರ ದಾಖಲೆಯನ್ನು ಮುರಿದಿದ್ದರು.

Follow Us:
Download App:
  • android
  • ios