ಅಹಮ್ಮದಾಬಾದ್(ಮಾ.06): ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯ ಗೆದ್ದು 3-1 ಅಂತದಲ್ಲಿ ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ ಇದೀಗ ರ‍್ಯಾಂಕಿಂಗ್‌ನಲ್ಲೂ ಅಗ್ರಸ್ಥಾನಕ್ಕೇರಿದೆ. ಇಂಗ್ಲೆಂಡ್ ವಿರುದ್ಧ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟಗೊಂಡಿದೆ. ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿದ ಭಾರತ, ಮೊದಲ ಸ್ಥಾನಕ್ಕೆ ಮರಳಿದೆ.

ಸ್ಟೀವ್ಹಾ ಹಿಂದಿಕ್ಕಿ, ಪಾಂಟಿಂಗ್, ಲಾಯ್ಡ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!

ಇಂಗ್ಲೆಂಡ್ ವಿರುದ್ಧ 3-1 ಅಂತರದ ಗೆಲುವಿನ ಮೂಲಕ ಟೀಂ ಇಂಡಿಯಾ 122 ರೇಟಿಂಗ್ ಪಾಯಿಂಟ್ಸ್ ಪಡೆದುಕೊಂಡಿದೆ. ಈ ಮೂಲಕ 118 ರೇಟಿಂಗ್ ಪಡೆದಿದ್ದ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿದೆ.  ಇನ್ನು 112 ರೇಟಿಂಗ್ ಅಂಕ ಪಡೆದಿರುವ ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿದೆ.

 

ಭಾರತದ ವಿರುದ್ಧ ಸರಣಿ ಸೋತ ಇಂಗ್ಲೆಂಡ್ 4ನೇ ಸ್ಥಾನದಲ್ಲಿದ್ದರೆ, 5ನೇ ಸ್ಥಾನದಲ್ಲಿ ಪಾಕಿಸ್ತಾನ ತಂಡವಿದೆ. ಇನ್ನು ಸೌತ್ ಆಫ್ರಿಕಾ 6, ಶ್ರೀಲಾಂಕ 7, ವೆಸ್ಟ್ ಇಂಡೀಸ್ 8, ಅಫ್ಗಾನಿಸ್ತಾನ 9 ಹಾಗೂ ಬಾಂಗ್ಲಾದೇಶ 10ನೇ ಸ್ಥಾನದಲ್ಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದಿರುವ ಟೀಂ ಇಂಡಿಯಾ ಜೂನ್ 18 ರಂದು ಲಾರ್ಡ್ಸ್ ಮೈದಾನದಲ್ಲಿ ನ್ಯೂಜಿಲೆಂಂಡ್ ತಂಡವನ್ನು ಎದುರಿಸಲಿದೆ.