Asianet Suvarna News Asianet Suvarna News

ICC T20 World Cup ಫೈನಲ್‌ಗೆ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ?

* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಯುಎಇನಲ್ಲಿ ಜರುಗಲಿದೆ

* ಟಿ20 ವಿಶ್ವಕಪ್‌ ಫೈನಲ್‌ಗೆ 100% ಪ್ರೇಕ್ಷಕರು ಮೈದಾನ ಪ್ರವೇಶಿಸಲು ಅವಕಾಶ

* ಯುಎಇ ಸರ್ಕಾರದ ತೀರ್ಮಾನ ಎದುರು ನೋಡುತ್ತಿರುವ ಬಿಸಿಸಿಐ

ICC T20 World Cup BCCI and ECB seek permission from UAE Govt to have Full capacity crowd for final kvn
Author
Dubai - United Arab Emirates, First Published Sep 28, 2021, 2:42 PM IST

ದುಬೈ(ಸೆ.28): ಐಸಿಸಿ ಟಿ20 ವಿಶ್ವಕಪ್‌(ICC T20 World Cup)ನ ಫೈನಲ್‌ ಪಂದ್ಯಕ್ಕೆ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಉತ್ಸುಕವಾಗಿದೆ. ಈ ಸಂಬಂಧ ಯುಎಇ ಅಧಿಕಾರಿಗಳ ಬಳಿ ಎಮಿರೇಟ್ಸ್‌ ಕ್ರಿಕೆಟ್‌ ಮಂಡಳಿ(ಇಸಿಬಿ) ಹಾಗೂ ಬಿಸಿಸಿಐ ಅನುಮತಿ ಕೋರಿವೆ.

25,000 ಪ್ರೇಕ್ಷಕರಿಗೆ ಫೈನಲ್‌ ಪಂದ್ಯಕ್ಕೆ ಅವಕಾಶ ನೀಡಲು ಬಿಸಿಸಿಐ ಹಾಗೂ ಇಸಿಬಿ(ECB) ಮನವಿ ಮಾಡಿವೆ. ಆದರೆ ಯುಎಒ ಆಡಳಿತ ಈ ಬಗ್ಗೆ ಇನ್ನಷ್ಟೇ ತೀರ್ಮಾನ ಕೈಗೊಳ್ಳಬೇಕಿದೆ. ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯ ನವೆಂಬರ್‌ 14ರಂದು ದುಬೈ ಕ್ರೀಡಾಂಗಣದಲ್ಲಿ ನಡೆಯಲಿದೆ. ಸದ್ಯ 14ನೇ ಆವೃತ್ತಿಯ ಐಪಿಎಲ್‌ ಪಂದ್ಯಗಳು ಯುಎಇಯ ಅಬುಧಾಬಿ, ದುಬೈ ಹಾಗೂ ಶಾರ್ಜಾ ಕ್ರೀಡಾಂಗಣದಲ್ಲಿ ನಡೆಯುತ್ತಿವೆ. ಶೇ.25ರಷ್ಟು ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತಿದೆ.

IPL 2021: ಟಿ20 ವಿಶ್ವಕಪ್‌ ಟೂರ್ನಿಗೆ ಶ್ರೇಯಸ್ ಅಯ್ಯರ್‌ಗೆ ಜಾಕ್‌ಪಾಟ್‌..?

ಭಾರತದಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಸದ್ಯ ಯುಎಇಗೆ ಸ್ಥಳಾಂತರಗೊಂಡಿದೆ. ಓಮನ್‌ ಹಾಗೂ ಯುಎಇನಲ್ಲಿ ಟಿ20 ವಿಶ್ವಕಪ್ ಟೂರ್ನಿಯು ಜರುಗಲಿದೆ. ಪಂದ್ಯಗಳು ಯುಎಇನಲ್ಲಿ ನಡೆದರೂ ಟೂರ್ನಿಯ ಆತಿಥ್ಯದ ಹಕ್ಕನ್ನು ಬಿಸಿಸಿಐ ಉಳಿಸಿಕೊಂಡಿದೆ. ಮೊದಲಿಗೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು, ಅಕ್ಟೋಬರ್ 17ರಿಂದ ಅರ್ಹತಾ ಸುತ್ತಿನ ಟಿ20 ವಿಶ್ವಕಪ್‌ ಪಂದ್ಯಗಳು ಆರಂಭವಾಗಲಿದೆ. ಅರ್ಹತಾ ಸುತ್ತಿನ ಪೈಪೋಟಿಯನ್ನು ಎರಡು ಗುಂಪುಗಳಾಗಿ ವಿಭಾಗಿಸಿದ್ದು, ಪ್ರತಿ ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೂಪರ್ 12 ಹಂತಕ್ಕೆ ಲಗ್ಗೆಯಿಡಲಿವೆ. ಸೂಪರ್ 12 ಹಂತದ ಪಂದ್ಯಗಳು ಅಕ್ಟೋಬರ್ 23ರಿಂದ ಆರಂಭವಾಗಲಿದೆ. ಇನ್ನು ಆತಿಥೇಯ ಭಾರತ ತಂಡವು ಅಕ್ಟೋಬರ್ 24ರಂದು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ

ಐಪಿಎಲ್‌ನಿಂದ ಕುಲ್ದೀಪ್‌ ಔಟ್‌: ಭಾರತಕ್ಕೆ ವಾಪಸ್‌

ನವದೆಹಲಿ: ಮೊಣಕಾಲು ಗಾಯದಿಂದ ಬಳಲುತ್ತಿರುವ ಕೋಲ್ಕತಾ ನೈಟ್‌ ರೈಡರ್ಸ್‌(KKR) ತಂಡದ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ (Kuldeep Yadav) 14ನೇ ಆವೃತ್ತಿಯ ಐಪಿಎಲ್‌ನಿಂದ (IPL 2021) ಹೊರಬಿದ್ದಿದ್ದಾರೆ. ಈಗಾಗಲೇ ಅವರು ಯುಎಇಯಿಂದ ಭಾರತಕ್ಕೆ ವಾಪಸಾಗಿದ್ದು, ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದಾರೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಟೀಂ ಇಂಡಿಯಾದಲ್ಲಿ (Team India) ಸ್ಥಾನ ಪಡೆಯಲು ಕುಲ್ದೀಪ್ ವಿಫಲರಾಗಿದ್ದರು.

ಅವರು ಸಂಪೂರ್ಣವಾಗಿ ಚೇತರಿಸಿಕೊಂಡು ಕ್ರಿಕೆಟ್‌ಗೆ ಮರಳಲು 4ರಿಂದ 6 ತಿಂಗಳುಗಳ ಕಾಲ ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಅವರು ಮುಂಬರುವ ಮುಷ್ತಾಕ್‌ ಅಲಿ ಟಿ20, ವಿಜಯ್‌ ಹಜಾರೆ ಏಕದಿನ ಹಾಗೂ ರಣಜಿ ಟ್ರೋಫಿಗೂ ಅಲಭ್ಯರಾಗುವ ಸಾಧ್ಯತೆ ಇದೆ. ಕುಲದೀಪ್‌ ಕಳೆದ 2 ಐಪಿಎಲ್‌ ಆವೃತ್ತಿಗಳಲ್ಲಿ ಕೆಕೆಆರ್‌ ತಂಡದಲ್ಲಿ ನಿಯಮಿತವಾಗಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಗಮನಾರ್ಹ ಪ್ರದರ್ಶನ ನೀಡಲು ವಿಫಲವಾಗಿರುವ ಅವರು ಟಿ20 ವಿಶ್ವಕಪ್‌ಗೂ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ.

Follow Us:
Download App:
  • android
  • ios