T20 World Cup ಸೂಪರ್-12 ರೇಸಲ್ಲಿ ಉಳಿದ ಬಾಂಗ್ಲಾದೇಶ
* ಆತಿಥೇಯ ಓಮಾನ್ ವಿರುದ್ದ ಗೆದ್ದ ಬಾಂಗ್ಲಾದೇಶ
* ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾಗೆ 26 ರನ್‌ಗಳ ಜಯ
* ಸೂಪರ್ 12 ಪ್ರವೇಶದ ಕನಸು ಜೀವಂತವಾಗಿರಿಸಿಕೊಂಡ ಬಾಂಗ್ಲಾ
ಅಲ್ ಅಮೆರತ್(ಅ.20): ಐಸಿಸಿ ಟಿ20 ವಿಶ್ವಕಪ್‌ನ (ICC T20 World Cup) ಸೂಪರ್-12 ಹಂತಕ್ಕೇರುವ ಆಸೆಯನ್ನು ಬಾಂಗ್ಲಾದೇಶ ಜೀವಂತವಾಗಿರಿಸಿಕೊಂಡಿದೆ. ಬುಧವಾರ ನಡೆದ ಅರ್ಹತಾ ಸುತ್ತಿನ 2ನೇ ಪಂದ್ಯದಲ್ಲಿ ಒಮಾನ್ ಕ್ರಿಕೆಟ್ ತಂಡದ (Oman Cricket Team) ವಿರುದ್ಧ 26 ರನ್‌ಗಳ ಗೆಲುವು ಸಾಧಿಸಿತು.
ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸೋತಿದ್ದ ಬಾಂಗ್ಲಾದೇಶ ಕ್ರಿಕೆಟ್ (Bangladesh Cricket Team) ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವೆನಿಸಿತ್ತು. ಒಂದು ಗೆಲುವು, ಒಂದು ಸೋಲಿನೊಂದಿಗೆ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಅಂತಿಮ ಪಂದ್ಯದಲ್ಲಿ ಪಪುವಾ ನ್ಯೂಗಿನಿ ವಿರುದ್ಧ ಬಾಂಗ್ಲಾ ದೊಡ್ಡ ಅಂತರದಲ್ಲಿ ಗೆದ್ದು ನೆಟ್ ರನ್‌ರೇಟ್ ಉತ್ತಮಗೊಳಿಸಿಕೊಂಡರೆ ಸೂಪರ್-12 ಹಂತಕ್ಕೆ ಪ್ರವೇಶ ಸಿಗಲಿದೆ. ಸದ್ಯ ಸ್ಕಾಟ್ಲೆಂಡ್ ಹಾಗೂ ಓಮಾನ್ ತಂಡಗಳು
T20 World Cup: ಬಾಂಗ್ಲಾಗೆ ಮಾಡು ಇಲ್ಲವೇ ಮಡಿ ಪಂದ್ಯ
ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ 20 ಓವರಲ್ಲಿ 153 ರನ್‌ಗೆ ಆಲೌಟ್ ಆಯಿತು. ಮೊಹಮದ್ ನಯೀಮ್ 64 ರನ್ ಗಳಿಸಿದರು. ಆರಂಭಿಕ ಜತೀಂದರ್(40) ಹೋರಾಟದ ಹೊರತಾಗಿಯೂ ಒಮಾನ್ 9 ವಿಕೆಟ್‌ಗೆ 127 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಗೆದ್ದರೆ ಒಮಾನ್‌ಗೂ ಸೂಪರ್-12 ಪ್ರವೇಶಿಸುವ ಅವಕಾಶವಿರಲಿದೆ.
ಆಲ್ರೌಂಡ್ ಆಟ ಪ್ರದರ್ಶಿಸಿದ ಶಕೀಬ್ ಅಲ್ ಹಸನ್: ಮೊದಲ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿದ್ದ ಬಾಂಗ್ಲಾದೇಶ ಎರಡನೇ ಪಂದ್ಯದಲ್ಲೂ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ತಂಡ 21 ರನ್‌ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಸಿಲುಕಿತು. ಈ ವೇಳೆ ಮೂರನೇ ವಿಕೆಟ್‌ಗೆ ಶಕೀಬ್ ಅಲ್ ಹಸನ್ ಹಾಗೂ ನಯೀಮ್ ಜೋಡಿ 80 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡಕ್ಕೆ ಆಸರೆಯಾಯಿತು. ಅದರಲ್ಲೂ ಶಕೀಬ್ ಬ್ಯಾಟಿಂಗ್‌ನಲ್ಲಿ 29 ಎಸೆತಗಳಲ್ಲಿ 6 ಬೌಂಡರಿ ಸಹಿತ 42 ರನ್ ಬಾರಿಸಿದರೆ, ಬೌಲಿಂಗ್‌ನಲ್ಲಿ 28 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸ್ಕೋರ್:
ಬಾಂಗ್ಲಾ 153/10(ನಯೀಮ್ 64, ಬಿಲಾಲ್ 3-18)
ಒಮಾನ್ 127/9(ಜತೀಂದರ್ 40, ಮುಸ್ತಾಫಿಜುರ್ 4-36)
ಸೂಪರ್-12 ಹೊಸ್ತಿಲು ತಲುಪಿದ ಸ್ಕಾಟ್ಲೆಂಡ್
ಅಲ್ ಅಮೆರತ್(ಒಮಾನ್): ರಿಚಿ ಬೆರಿಂಗ್ಟನ್(70)ರ ಅರ್ಧಶತಕ, ಜೋಶ್ ಡೇವಿ(4/18)ರ ಅತ್ಯುತ್ತಮ ಸ್ಪೆಲ್ ನೆರವಿನಿಂದ ಐಸಿಸಿ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ‘ಬಿ’ ಗುಂಪಿನ ಪಂದ್ಯದಲ್ಲಿ ಪಪುವಾ ನ್ಯೂಗಿನಿ ವಿರುದ್ಧ 17 ರನ್ ಗೆಲುವು ಸಾಧಿಸಿದ ಸ್ಕಾಟ್ಲೆಂಡ್ ಸೂಪರ್-12 ಹಂತಕ್ಕೆ ಪ್ರವೇಶಿಸುವ ಹೊಸ್ತಿಲು ತಲುಪಿದೆ.
ಕ್ಯಾಪ್ಟನ್ ಕೂಲ್‌ಗೂ ಬಂದಿತ್ತು ಸಿಟ್ಟು: ಭಾರತ-ಪಾಕಿಸ್ತಾನ ನಡುವಿನ ಈ ಫೈಟ್‌ಗಳು ನಿಮಗೆ ನೆನಪಿವೆಯಾ..?
ಸ್ಕಾಟ್ಲೆಂಡ್ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದು, ಪ್ರಧಾನ ಸುತ್ತಿಗೇರುವುದು ಬಹುತೇಕ ಖಚಿತವೆನಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ 9 ವಿಕೆಟ್‌ಗೆ 165 ರನ್ ಕಲೆಹಾಕಿತು. ಪಪುವಾ ನ್ಯೂಗಿನಿ 6 ಓವರಲ್ಲಿ 5 ವಿಕೆಟ್‌ಗೆ 35 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಆದರೆ ನೊರ್ಮನ್ ವನುವಾ(47) ಹಾಗೂ ಕಿಪ್ಲಿನ್ ದೊರಿಗಾ(18) ಹೋರಾಟ ನಡೆಸಿದರು. ನ್ಯೂಗಿಸಿ 19.3 ಓವರಲ್ಲಿ 148 ರನ್‌ಗೆ ಆಲೌಟ್ ಆಯಿತು. ಸತತ 2 ಸೋಲು ಅನುಭವಿಸಿದ ನ್ಯೂಗಿನಿ ಪ್ರಧಾನ ಸುತ್ತಿಗೇರುವುದು ಬಹುತೇಕ ಅನುಮಾನ.
ಸ್ಕೋರ್:
ಸ್ಕಾಟ್ಲೆಂಡ್ 20 ಓವರಲ್ಲಿ 165/9(ಬೆರಿಂಗ್ಟನ್ 70, ಕ್ರಾಸ್ 40, ಮೊರೆಯ 4-31)
ನ್ಯೂಗಿನಿ 19.3 ಓವರಲ್ಲಿ 148/10(ವನುವಾ 48, ಡೇವಿ 4-18)