Asianet Suvarna News Asianet Suvarna News

T20 World Cup: ಜಗತ್ತಿನಾದ್ಯಂತ ಇಂದಿನಿಂದ ಟಿ20 ಜ್ವರ..!

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಇಂದಿನಿಂದ ಆರಂಭ
16 ತಂಡಗಳು ಟೂರ್ನಿಯಲ್ಲಿ ಭಾಗಿ
8ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ಆತಿಥ್ಯ

ICC T20 World Cup 2022 begins Cricket fans needs to know kvn
Author
First Published Oct 16, 2022, 9:28 AM IST

ಗೀಲಾಂಗ್‌(ಅ.16): ಆಸ್ಪ್ರೇಲಿಯಾ ವಿಶ್ವಕಪ್‌ ಗೆದ್ದು ಇನ್ನೂ ವರ್ಷವಾಗಿಲ್ಲ, ಆಗಲೇ ಮತ್ತೊಂದು ಐಸಿಸಿ ಟಿ20 ವಿಶ್ವಕಪ್‌ಗೆ ವೇದಿಕೆ ಸಿದ್ಧವಾಗಿದೆ. 8ನೇ ಆವೃತ್ತಿಯ ವಿಶ್ವಕಪ್‌ಗೆ ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾ ಆತಿಥ್ಯ ವಹಿಸಲಿದೆ. ಟೂರ್ನಿಯು ಅ.16ರಿಂದ ನ.13ರ ವರೆಗೂ ನಡೆಯಲಿದ್ದು, ಆಸ್ಪ್ರೇಲಿಯಾದ 7 ನಗರಗಳು ಒಟ್ಟು 45 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

ಆಸ್ಪ್ರೇಲಿಯಾ 2020 ಟಿ20 ವಿಶ್ವಕಪ್‌ ಆಯೋಜಿಸಬೇಕಿತ್ತು. ಆದರೆ ಕೋವಿಡ್‌ನಿಂದ ಟೂರ್ನಿ ಮುಂದೂಡಿಕೆಯಾದ ಬಳಿಕ 2021ರ ಟೂರ್ನಿಯನ್ನು ಭಾರತದಲ್ಲಿ, 2022ರ ಟೂರ್ನಿಯನ್ನು ಆಸ್ಪ್ರೇಲಿಯಾದಲ್ಲಿ ನಡೆಸಲು ನಿರ್ಧರಿಸಲಾಯಿತು. ಕೋವಿಡ್‌ ಕಾರಣದಿಂದ ಭಾರತದಲ್ಲಿ ನಡೆಯಬೇಕಿದ್ದ 7ನೇ ಆವೃತ್ತಿ ಯುಎಇ ಹಾಗೂ ಒಮಾನ್‌ಗೆ ಸ್ಥಳಾಂತರಗೊಂಡಿತ್ತು.

ಟೂರ್ನಿಯ ಪ್ರಧಾನ ಸುತ್ತು ಅ.22ರಿಂದ ಆರಂಭಗೊಳ್ಳಲಿದ್ದು, ಭಾನುವಾರದಿಂದ ಅರ್ಹತಾ ಸುತ್ತು ನಡೆಯಲಿದೆ. ಈ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರುವ ತಂಡಗಳು ಪ್ರಧಾನ ಸುತ್ತಿಗೇರಲು ಯಶಸ್ವಿಯಾಗಲಿವೆ.

ಟೂರ್ನಿಯ ಮಾದರಿ ಹೇಗೆ?

ಟಿ20 ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಸೆಣಸಲಿವೆ. 2021ರ ಆವೃತ್ತಿಯಲ್ಲಿ ತೋರಿದ ಪ್ರದರ್ಶನ, 2021ರ ನವೆಂಬರ್‌ 15ರ ವೇಳೆಗೆ ಐಸಿಸಿ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಅಗ್ರ 8 ಸ್ಥಾನದಲ್ಲಿದ್ದ ತಂಡಗಳು ನೇರವಾಗಿ ಸೂಪರ್‌-12 ಹಂತ ಪ್ರವೇಶಿಸಿದವು. ಕಳೆದ ಆವೃತ್ತಿಯಲ್ಲಿ ಸೂಪರ್‌-12ನಲ್ಲಿ ಆಡಿದ್ದ ಶ್ರೀಲಂಕಾ, ವೆಸ್ಟ್‌ಇಂಡೀಸ್‌, ಐರ್ಲೆಂಡ್‌ ಹಾಗೂ ಸ್ಕಾಟ್ಲೆಂಡ್‌ ಅರ್ಹತಾ ಸುತ್ತಿಗೆ ನೇರ ಪ್ರವೇಶ ಪಡೆದರೆ, ಜಾಗತಿಕ ಮಟ್ಟದ ಅರ್ಹತಾ ಟೂರ್ನಿಗಳಲ್ಲಿ ಆಡಿ ಗೆದ್ದ ನಮೀಬಿಯಾ, ನೆದರ್‌ಲೆಂಡ್ಸ್‌, ಯುಎಇ ಹಾಗೂ ಜಿಂಬಾಬ್ವೆ ವಿಶ್ವಕಪ್‌ನ ಮೊದಲ ಸುತ್ತಿಗೇರಿದವು.

ಎಲ್ಲಾ 16 ಆಟಗಾರರು ಒಂದೇ ಪ್ರೇಮ್‌ನಲ್ಲಿ..! T20 World Cup ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು

ಮೊದಲ ಸುತ್ತು ಎಂದರೆ ಅರ್ಹತಾ ಸುತ್ತಿನಲ್ಲಿ ಇರುವ 8 ತಂಡಗಳನ್ನು ತಲಾ 4 ತಂಡಗಳಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಎರಡೂ ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಸೂಪರ್‌-12ಗೆ ಪ್ರವೇಶಿಸಲಿವೆ. ಸೂಪರ್‌-12 ಹಂತದಲ್ಲಿ ಈಗಾಗಲೇ 8 ತಂಡಗಳಿದ್ದು, ಇವುಗಳ ಜೊತೆಗೆ ಅರ್ಹತಾ ಸುತ್ತಿನಿಂದ ಬಡ್ತಿ ಪಡೆಯುವ 4 ತಂಡಗಳು ಸೇರ್ಪಡೆಗೊಳ್ಳಲಿವೆ. ಸೂಪರ್‌-12ನಲ್ಲಿ ತಲಾ 6 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಎರಡೂ ಗುಂಪುಗಳಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ನ.9, ನ.10ರಂದು ಸೆಮಿಫೈನಲ್‌ ಪಂದ್ಯಗಳು ನಡೆಯಲಿದ್ದು, ನ.13ಕ್ಕೆ ಫೈನಲ್‌ ನಿಗದಿಯಾಗಿದೆ.

ಅರ್ಹತಾ ಸುತ್ತು

ನಮೀಬಿಯಾ, ಐರ್ಲೆಂಡ್‌, ನೆದರ್‌ಲೆಂಡ್ಸ್‌, ಸ್ಕಾಟ್ಲೆಂಡ್‌, ಶ್ರೀಲಂಕಾ, ವೆಸ್ಟ್‌ಇಂಡೀಸ್‌, ಯುಎಇ, ಜಿಂಬಾಬ್ವೆ.

ಸೂಪರ್‌-12 ಸುತ್ತು

ಗುಂಪು ‘1’ 

ಆಫ್ಘಾನಿಸ್ತಾನ 
ಆಸ್ಪ್ರೇಲಿಯಾ
ಇಂಗ್ಲೆಂಡ್‌ 
ನ್ಯೂಜಿಲೆಂಡ್‌ 
‘ಎ’ 1 
‘ಬಿ’ 2 

ಗುಂಪು ‘2’

ಬಾಂಗ್ಲಾದೇಶ
ಭಾರತ
ಪಾಕಿಸ್ತಾನ
ದ.ಆಫ್ರಿಕಾ
ಬಿ1
ಎ2

ಟೂರ್ನಿ ಅಂಕಿ-ಅಂಶ:

16 ತಂಡಗಳು: ಟಿ20 ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ.

45 ಪಂದ್ಯಗಳು: ಅರ್ಹತಾ ಸುತ್ತು, ಸೂಪರ್‌-12 ಸೇರಿ ಟೂರ್ನಿಯಲ್ಲಿ ಒಟ್ಟು 45 ಪಂದ್ಯಗಳು ನಡೆಯಲಿವೆ.

28 ದಿನ: ಟೂರ್ನಿಯು ಒಟ್ಟು 28 ದಿನಗಳ ಕಾಲ ನಡೆಯಲಿದೆ. ಅಕ್ಟೋಬರ್ 16ರಿಂದ ನವೆಂಬರ್ 13ರ ವರೆಗೂ ನಿಗದಿಯಾಗಿದೆ.

13 ಕೋಟಿ ರುಪಾಯಿ: ವಿಶ್ವಕಪ್‌ ಗೆಲ್ಲುವ ತಂಡಕ್ಕೆ 13.18 ಕೋಟಿ ರು. ಬಹುಮಾನ ಮೊತ್ತ ಸಿಗಲಿದೆ. ರನ್ನರ್‌-ಅಪ್‌ಗೆ 6.59 ಲಕ್ಷ ರು. ಸಿಗಲಿದೆ.

1016 ರನ್‌: ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್‌ ಕಲೆಹಾಕಿದ ಆಟಗಾರ ಲಂಕಾದ ಮಹೇಲಾ ಜಯವರ್ಧನೆ. 31 ಪಂದ್ಯಗಳಲ್ಲಿ 1016 ರನ್‌ ಗಳಿಸಿದ್ದಾರೆ.

41 ವಿಕೆಟ್‌: ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್‌ ಬಾಂಗ್ಲಾದೇಶದ ಶಕೀಬ್‌ ಅಲ್‌-ಹಸನ್‌. 31 ಪಂದ್ಯಗಳಲ್ಲಿ 41 ವಿಕೆಟ್‌ ಕಬಳಿಸಿದ್ದಾರೆ.

ಸ್ಟೀಫನ್‌ ಅತಿಹಿರಿಯ, ಅಫ್ಜಲ್‌ ಅತಿಕಿರಿಯ!

ನೆದರ್‌ಲೆಂಡ್‌್ಸನ ಹಿರಿಯ ಬ್ಯಾಟರ್‌ ಸ್ಟೀಫನ್‌ ಮೈಬರ್ಗ್‌ ಈ ವರ್ಷ ಟಿ20 ವಿಶ್ವಕಪ್‌ನಲ್ಲಿ ಆಡಲಿರುವ ಅತಿಹಿರಿಯ ಆಟಗಾರ. ಅವರಿಗೀಗ 38 ವರ್ಷ ವಯಸ್ಸು. ಇನ್ನು ಯುಎಇಯ ಆಲ್ರೌಂಡರ್‌ ಅಯಾನ್‌ ಅಫ್ಜಲ್‌ ಖಾನ್‌ ಟೂರ್ನಿಯಲ್ಲಿ ಆಡಲಿರುವ ಅತಿಕಿರಿಯ. ಅವರಿಗೀಗ ಕೇವಲ 16 ವರ್ಷ ವಯಸ್ಸು.

ಟಿ20 ಚಾಂಪಿಯನ್ನರು

ವರ್ಷ ಚಾಂಪಿಯನ್‌

2007 ಭಾರತ

2009 ಪಾಕಿಸ್ತಾನ

2010 ಇಂಗ್ಲೆಂಡ್‌

2012 ವೆಸ್ಟ್‌ಇಂಡೀಸ್‌

2014 ಶ್ರೀಲಂಕಾ

2016 ವೆಸ್ಟ್‌ಇಂಡೀಸ್‌

2021 ಆಸ್ಪ್ರೇಲಿಯಾ

Follow Us:
Download App:
  • android
  • ios