Asianet Suvarna News Asianet Suvarna News

ನಾಡಿದ್ದು ಐಸಿಸಿ ಸಭೆ: ಟಿ20 ವಿಶ್ವಕಪ್‌ ಬಗ್ಗೆ ಅಂತಿಮ ನಿರ್ಧಾರ?

ಮುಂಬರುವ ಟಿ20 ವಿಶ್ವಕಪ್ ಹಾಗೂ ಟೆಸ್ಟ್ ಚಾಂಪಿಯನ್‌ಶಿಪ್ ಭವಿಷ್ಯದ ಬಗ್ಗೆ ಐಸಿಸಿ ತನ್ನೆಲ್ಲ ಸದಸ್ಯ ರಾಷ್ಟ್ರಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ICC Member Nations To Discuss Fate of upcoming ICC T20 World Cup in Australia
Author
New Delhi, First Published Apr 21, 2020, 10:29 AM IST

ನವದೆಹಲಿ(ಏ.21): ಏ.23ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಮುಖ್ಯ ಕಾರ್ಯನಿರ್ವಾಹಕ ಸಮಿತಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಲಿದ್ದು, ಅಕ್ಟೋಬರ್‌-ನವೆಂಬರ್‌ನಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಭಾರತವನ್ನು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಪ್ರತಿನಿಧಿಸಲಿದ್ದಾರೆ.

ಐಸಿಸಿ ಸಮಿತಿ, ವಿಶ್ವಕಪ್‌ ಅಯೋಜನೆಗೆ ಸಂಬಂಧಿಸಿದಂತೆ ಆಸ್ಪ್ರೇಲಿಯಾ ಸರ್ಕಾರದ ಜತೆ ಚರ್ಚಿಸಲಿದೆ ಎನ್ನಲಾಗಿದೆ. ಇದೇ ವೇಳೆ ವಿಶ್ವ ಟೆಸ್ಟ್‌ ಹಾಗೂ ಏಕದಿನ ಚಾಂಪಿಯನ್‌ಶಿಪ್‌ನ ಭವಿಷ್ಯ, ಆರ್ಥಿಕ ಸಮಸ್ಯೆ ಕುರಿತು ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ. ಇನ್ನು 2021ರಲ್ಲಿ ಲಾರ್ಡ್ಸ್‌ನಲ್ಲಿ ನಡೆಯಬೇಕಿರುವ ಐಸಿಸಿ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕುರಿತಾಗಿಯೂ ಚರ್ಚೆ ನಡೆಯುವ ಸಾಧ್ಯತೆಯಿದೆ. ಈಗಾಗಲೇ ಇಸಿಬಿ, ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹಾಗೂ ಬಿಸಿಸಿಐ ಟೆಸ್ಟ್ ಚಾಂಪಿಯನ್‌ಶಿಪ್ ರದ್ದುಗೊಳಿಸಲು ಐಸಿಸಿ ಮೇಲೆ ಒತ್ತಡ ಹೇರುತ್ತಿವೆ ಎಂದು ವರದಿಯಾಗಿತ್ತು.

ಕೊರೋನಾ ವೈರಸ್ ಎಫೆಕ್ಟ್: ಇಂಗ್ಲೆಂಡ್‌ ಕ್ರಿಕೆಟ್‌ಗೆ 2800 ಕೋಟಿ ರುಪಾಯಿ ನಷ್ಟ ನಷ್ಟ?

ಬಹುನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 18ರಿಂದ ಆರಂಭವಾಗಬೇಕಿದೆ. ಆದರೆ ಈ ಚುಟುಕು ಕ್ರಿಕೆಟ್ ಸಂಗ್ರಾಮದ ಮೇಲೂ ಕೊರೋನಾ ತನ್ನ ವಕ್ರದೃಷ್ಟಿ ಬೀರುವ ಸಾಧ್ಯತೆಯಿದೆ. ಕೋವಿಡ್ 19 ಸೋಂಕಿನಿಂದಾಗಿ ಬಹುತೇಕ ಕ್ರೀಡಾ ಚಟುವಟಿಕೆಗಳು ರದ್ದಾಗಿವೆ. 

ಈಗಾಗಲೇ ಇಂಗ್ಲೀಷ್ ಕ್ರಿಕೆಟ್ ಸೀಸನ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಕೊರೋನಾ ವೈರಸ್‌ನಿಂದಾಗಿ ಮುಂದೂಡಲ್ಪಟ್ಟಿವೆ. ನಿಗದಿತ ಸಮಯದಲ್ಲಿ ಇಂಗ್ಲೆಂಡ್ ಕ್ರಿಕೆಟ್ ಟೂರ್ನಿ ಆರಂಭವಾಗದಿದ್ದರೆ ಇಂಗ್ಲೆಂಡ್‌ ಕ್ರಿಕೆಟ್ ಬೋರ್ಡ್‌ಗೆ ಸುಮಾರು 2,800 ಕೋಟಿ ರುಪಾಯಿ ನಷ್ಟವಾಗಬಹುದೆಂದು ಇಸಿಬಿ ಕಾರ್ಯನಿರ್ವಾಹಕ ಟಾಮ್ ಹ್ಯಾರಿಸ್ಸನ್ಸ್ ಹೇಳಿದ್ದರು.  

"

Follow Us:
Download App:
  • android
  • ios