ಲಂಡನ್(ಏ.03)‌: ಈ ಋುತುವಿನಲ್ಲಿ ಆದಷ್ಟು ಬೇಗ ಕ್ರಿಕೆಟ್‌ ಆರಂಭಗೊಳ್ಳದಿದ್ದರೆ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ) 300 ಮಿಲಿಯನ್‌ ಪೌಂಡ್‌ (ಅಂದಾಜು 2,800 ಕೋಟಿ ರುಪಾಯಿ) ನಷ್ಟ ಎದುರಿಸಲಿದೆ ಎಂದು ಪ್ರಧಾನ ಕಾರ್ಯನಿವಾರ್ಹಕ ಟಾಮ್‌ ಹ್ಯಾರಿಸ್ಸನ್‌ ಹೇಳಿದ್ದಾರೆ. 

ಇದೇ ವೇಳೆ ಇಸಿಬಿ ಪ್ರಸ್ತಾಪಿಸಿದ್ದ ಶೇ.20ರಷ್ಟು ವೇತನ ಕಡಿತಕ್ಕೆ ಕೇಂದ್ರ ಗುತ್ತಿಗೆ ಹೊಂದಿರುವ ಆಟಗಾರರು ನಿರಾಕರಿಸಿದ್ದಾರೆ ಎಂದು ಪ್ರತಿಷ್ಠಿತ ಮಾಧ್ಯಮವೊಂದು ವರದಿ ಮಾಡಿದೆ.ಇನ್ನು ಭಾರತದಲ್ಲೂ ಕೇಂದ್ರ ಗುತ್ತಿಗೆ ಹೊಂದಿದ ಆಟಗಾರರ ಆದಾಯವನ್ನು ಕಡಿತಗೊಳಿಸಲಾಗುವುದು ಎನ್ನಲಾಗುತ್ತಿದೆ.

ಕ್ರಿಕೆಟ್‌ನ ಜನಪ್ರಿಯ ಡಕ್ವರ್ತ್ ಲೂಯಿಸ್ ನಿಯಮದ ಜನಕ ಟೋನಿ ಲೂಯಿಸ್ ನಿಧನ!

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಈಗಾಗಲೇ ಕೊರೋನಾ ವೈರಸ್ ವಿರುದ್ಧ ಸೆಣಸಲು 61 ಮಿಲಿಯನ್ ಪೌಂಡ್ ಹಣವನ್ನು ಸರ್ಕಾರಕ್ಕೆ ದೇಣಿಗೆಯಾಗಿ ನೀಡಿದೆ. ಕೊರೋನಾ ವೈರಸ್ ಎನ್ನುವ ಪಿಡುಗು ಆಧುನಿಕ ಕ್ರೀಡಾಜಗತ್ತಿನಲ್ಲಿ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಕ್ಕೆ ಕ್ರಿಕೆಟ್‌ಗೆ ಕೂಡಾ ಹೊರತಾಗಿಲ್ಲ. ಹೀಗಾಗಿ ಕ್ರಿಕೆಟ್ ಟೂರ್ನಿಗಳ ಮೇಲೂ ಅತಿದೊಡ್ಡ ಪರಿಣಾಮವನ್ನು ಬೀರಿದೆ. ನಮ್ಮ ಮೊದಲ ಆದ್ಯತೆ ಜನತೆಯ ಸುರಕ್ಷತೆಯಾಗಿದೆ. ಎಂದು ಕಾರ್ಯನಿವಾರ್ಹಕ ಟಾಮ್‌ ಹ್ಯಾರಿಸ್ಸನ್‌ ಹೇಳಿದ್ದಾರೆ.

ಕೊರೋನಾ ವೈರಸ್‌ನಿಂದ ಈ ವರ್ಷ ಯಾವುದೇ ಟೂರ್ನಿ ನಡೆಯಲ್ವಾ..?

ಕೋವಿಡ್ 19 ವೈರಸ್ ಇಂಗ್ಲೆಂಡ್ ಜನರನ್ನು ಕನಸಿನಲ್ಲೂ ಬೆಚ್ಚಿ ಬೀಳುವಂತೆ ಮಾಡಿದ್ದು, ದೇಶದ್ಲಲೇ 30 ಸಾವಿರಕ್ಕೂ ಅಧಿಕ ಮಂದಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ. ಇನ್ನು ಕೊರೋನಾದಿಂದ ಇಂಗ್ಲೆಂಡ್‌ನಲ್ಲಿ ಕೊರೋನಾದಿಂದಾಗಿ ಮೃತಪಟ್ಟವರ ಸಂಖ್ಯೆ 2300ಕ್ಕೂ ಅಧಿಕ.