ಲಂಡನ್‌[ಡಿ.05]: ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ, ಪ್ರಚಂಡ ವೇಗದ ಬೌಲರ್‌ ಬಾಬ್‌ ವಿಲ್ಲಿಸ್‌ ಬುಧ​ವಾರ ನಿಧ​ನ​ರಾ​ದರು ಎಂದು ಅವರ ಕುಟುಂಬ ಸದ​ಸ್ಯರು ಖಚಿ​ತ​ಪ​ಡಿ​ಸಿ​ದ್ದಾರೆ. ಅವರು ಥೈರಾಯ್ಡ್‌ ಕ್ಯಾನ್ಸರ್‌ನಿಂದ ಬಳ​ಲು​ತ್ತಿ​ದ್ದರು. ವಿಲ್ಲಿಸ್‌ಗೆ 70 ವರ್ಷ ವಯ​ಸ್ಸಾ​ಗಿತ್ತು. 

ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಸ್ಮಿತ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕೊಹ್ಲಿ

1982ರಿಂದ 1984ರ ವರೆಗೂ ಇಂಗ್ಲೆಂಡ್‌ ತಂಡದ ನಾಯ​ಕ​ರಾ​ಗಿದ್ದ ವಿಲ್ಲಿಸ್‌, 90 ಟೆಸ್ಟ್‌ ಪಂದ್ಯ​ಗ​ಳನ್ನು ಆಡಿ​ 325 ವಿಕೆಟ್‌ಗಳನ್ನು ಕಬ​ಳಿ​ಸಿ​ದ್ದರು. ಇಂಗ್ಲೆಂಡ್‌ ಪರ ಟೆಸ್ಟ್‌ನಲ್ಲಿ ಅತಿ​ಹೆಚ್ಚು ವಿಕೆಟ್‌ ಪಡೆದ ಬೌಲ​ರ್‌ಗಳ ಪಟ್ಟಿ​ಯಲ್ಲಿ ವಿಲ್ಲಿಸ್‌ 4ನೇ ಸ್ಥಾನ​ದ​ಲ್ಲಿ​ದ್ದಾರೆ. ಆಸ್ಪ್ರೇ​ಲಿಯಾ ವಿರುದ್ಧ ಆ್ಯಷಸ್‌ ಪಂದ್ಯವೊಂದ​ರಲ್ಲಿ 43 ರನ್‌ಗೆ 8 ವಿಕೆಟ್‌ ಕಬ​ಳಿ​ಸಿದ್ದು ಅವರ ಶ್ರೇಷ್ಠ ಪ್ರದ​ರ್ಶ​ನ​ವೆ​ನಿ​ಸಿತ್ತು. ಇಂಗ್ಲೆಂಡ್‌ ಪರ 64 ಏಕ​ದಿನ ಪಂದ್ಯ​ಗ​ಳನ್ನೂ ಆಡಿದ್ದ ಅವರು, 80 ವಿಕೆಟ್‌ ಪಡೆ​ದಿ​ದ್ದರು.

ವಾಹನ ಚಾಲ​ಕನ ಮಗ ಈಗ ಅಂಡರ್-19 ವಿಶ್ವ​ಕಪ್‌ ತಂಡದ ನಾಯ​ಕ!

ದೇಶಿ ಟೂರ್ನಿಯಲ್ಲಿ 308 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದ ಬಾಬ್‌ ವಿಲ್ಲಿಸ್‌ ಬರೋಬ್ಬರಿ 899 ವಿಕೆಟ್ ಪಡೆದಿದ್ದರು. ಇನ್ನು ಬಾಬ್ ನಿಧನಕ್ಕೆ ಐಸಿಸಿ, ಬ್ರಿಯನ್ ಲಾರಾ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.