Asianet Suvarna News Asianet Suvarna News

ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದ​ಲ ಬಾರಿಗೆ 3ನೇ ಅಂಪೈ​ರಿಂದ ನೋಬಾಲ್‌ ಘೋಷಣೆ

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಬೌಲರ್‌ಗಳು ಕ್ರೀಸ್‌ನಿಂದ ಹೊರಗೆ ಕಾಲಿಟ್ಟಾಗ ನೋಬಾಲ್‌ ಘೋಷಣೆಯನ್ನು ಮೈದಾ​ನ​ದ​ಲ್ಲಿ​ರುವ ಅಂಪೈರ್‌ ಬದ​ಲಿಗೆ, 3ನೇ ಅಂಪೈರ್‌ ಘೋಷಿ​ಸ​ಲಿ​ದ್ದಾರೆ. ಪಾಕಿಸ್ತಾನ-ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದಲೇ ಇದು ಜಾರಿಗೆ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ICC Announces Third umpire to call front foot no balls in England vs Pakistan Test series
Author
Dubai - United Arab Emirates, First Published Aug 6, 2020, 9:06 AM IST

ದುಬೈ(ಜು.06): ಇಂಗ್ಲೆಂಡ್‌ ಹಾಗೂ ಪಾಕಿ​ಸ್ತಾನ ನಡುವಿನ ಟೆಸ್ಟ್‌ ಸರ​ಣಿ​ಯಲ್ಲಿ ಬೌಲರ್‌ಗಳು ಕ್ರೀಸ್‌ನಿಂದ ಹೊರಗೆ ಕಾಲಿಟ್ಟಾಗ ನೋಬಾಲ್‌ ಘೋಷಣೆಯನ್ನು ಮೈದಾ​ನ​ದ​ಲ್ಲಿ​ರುವ ಅಂಪೈರ್‌ ಬದ​ಲಿಗೆ, 3ನೇ ಅಂಪೈರ್‌ ಘೋಷಿ​ಸ​ಲಿ​ದ್ದಾರೆ ಎಂದು ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ (ಐ​ಸಿಸಿ) ತಿಳಿ​ಸಿದೆ. 

ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿ​ಗೆ ಈ ಪ್ರಯೋಗ ನಡೆ​ಸ​ಲಾ​ಗುತ್ತಿದೆ. ‘ಈ ಸರ​ಣಿ​ಯಲ್ಲಿ ತಂತ್ರ​ಜ್ಞಾ​ನದ ಬಳಕೆ ಎಷ್ಟು ಪರಿ​ಣಾ​ಮ​ಕಾ​ರಿ​ಯಾ​ಗ​ಲಿದೆ ಎನ್ನುವುದನ್ನು ಗಮ​ನಿಸಿ, ಭವಿ​ಷ್ಯದಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಈ ನಿಯ​ಮ​ವನ್ನು ಅಳ​ವ​ಡಿ​ಸುವ ಬಗ್ಗೆ ನಿರ್ಧ​ರಿ​ಸ​ಲಾ​ಗು​ತ್ತದೆ’ ಎಂದು ಐಸಿಸಿ ತಿಳಿ​ಸಿದೆ. 

ಕಳೆದ ವರ್ಷ ಭಾರತ-ವೆಸ್ಟ್ ಇಂಡೀಸ್ ನಡುವಿನ ಸೀಮಿತ ಓವರ್‌ಗಳ ಸರಣಿಯಲ್ಲಿ ಈ ನಿಯಮವನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗಿತ್ತು. ಇನ್ನು ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಕೂಡಾ ಮೂರನೇ ಅಂಪೈರ್‌ನಿಂದ ನೋಬಾಲ್ ತೀರ್ಮಾನ ನೀಡಲಾಗುತಿತ್ತು. ಇನ್ನು ಐಸಿಸಿ ವಿಶ್ವಲಕಪ್ ಸೂಪರ್‌ ಲೀಗ್ ಭಾಗವಾಗಿ ಇತ್ತೀಚೆಗಷ್ಟೇ ಮುಕ್ತಾಯವಾದ ಇಂಗ್ಲೆಂಡ್-ಐರ್ಲೆಂಡ್ ನಡುವಿನ ಏಕದಿನ ಸರಣಿಯಲ್ಲಿ ನೋ ಬಾಲ್ ಬಗ್ಗೆ ಎಚ್ಚರಿಕೆಯ ನಿರ್ಧಾರಕ್ಕೆ ಬರಲಾಗಿತ್ತು.

ಮೊದಲ ಟೆಸ್ಟ್‌: ಇಂಗ್ಲೆಂಡ್‌ ವಿರುದ್ಧ ಪಾಕ್‌ಗೆ ಉತ್ತಮ ಆರಂಭ

ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯವು ಆಗಸ್ಟ್ 05ರಿಂದ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಿದೆ. ಉಳಿದೆರಡು ಟೆಸ್ಟ್ ಪಂದ್ಯಗಳು ಕ್ರಮವಾಗಿ ಆಗಸ್ಟ್ 13 ಹಾಗೂ 21ರಿಂದ ಸೌಥಾಂಪ್ಟನ್‌ನ ರೋಸ್ ಬೌಲ್ ಮೈದಾನದಲ್ಲಿ ನಡೆಯಲಿದೆ.
 

Follow Us:
Download App:
  • android
  • ios