ಮ್ಯಾಂಚೆ​ಸ್ಟರ್(ಆ.06)‌: ಬಾಬರ್‌ ಆಜಂ ಹಾಗೂ ಶಾನ್‌ ಮಸೂದ್‌ರ ಜವಾ​ಬ್ದಾ​ರಿ​ಯುತ ಬ್ಯಾಟಿಂಗ್‌ ನೆರ​ವಿ​ನಿಂದ, ಬುಧ​ವಾರ ಇಲ್ಲಿ ಆರಂಭ​ಗೊಂಡ ಇಂಗ್ಲೆಂಡ್‌ ವಿರು​ದ್ಧದ ಮೊದಲ ಟೆಸ್ಟ್‌ನಲ್ಲಿ ಪಾಕಿ​ಸ್ತಾನ ಉತ್ತಮ ಆರಂಭ ಪಡೆ​ದು​ಕೊಂಡಿದ್ದು, ಮೊದಲ ದಿನಾಟದಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 139 ರನ್ ಗಳಿಸಿದೆ. 

ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲ ದಿನದ ಚಹಾ ವಿರಾ​ಮಕ್ಕೆ 2 ವಿಕೆಟ್‌ ನಷ್ಟಕ್ಕೆ 121 ರನ್‌ ಗಳಿ​ಸಿತ್ತು. ಬಾಬರ್‌ ಅರ್ಧ​ಶ​ತಕ ಗಳಿಸಿ ಬ್ಯಾಟಿಂಗ್‌ ಕಾಯ್ದು​ಕೊಂಡಿ​ದ್ದರು. ಬಳಿಕ ಕೆಲಕಾಲ ವರುಣ ಪಂದ್ಯಕ್ಕೆ ಅಡ್ಡಿಪಡಿಸಿತು. ಅಂತಿಮವಾಗಿ 49 ಓವರ್‌ಗಳಷ್ಟೇ ಪಂದ್ಯ ನಡೆಯಲು ಸಾಧ್ಯವಾಯಿತು. ಮೊದಲ ದಿನದಾಟದಂತ್ಯದ ವೇಳೆಗೆ ಪಾಕಿಸ್ತಾನ 2 ವಿಕೆಟ್ ಕಳೆದುಕೊಂಡು 139 ರನ್ ಬಾರಿಸಿದೆ. 

ಧೋನಿ ಹೆಸರಿನಲ್ಲಿದ್ದ ಅಪರೂಪದ ವಿಶ್ವದಾಖಲೆ ಅಳಿಸಿ ಹಾಕಿದ ಇಂಗ್ಲೆಂಡ್ ನಾಯಕ ಮಾರ್ಗನ್..!

ಪಾಕಿಸ್ತಾನ ಪರ ಬಾಬರ್ ಅಜಂ 100 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ ಅಜೇಯ 69 ರನ್‌ ಗಳಿಸಿದರೆ, ಶಾನ್ ಮಸೂದ್ 152 ಎಸೆತಗಳನ್ನು ಎದುರಿಸಿ 7 ಬೌಂಡರಿಗಳ ನೆರವಿನೊಂದಿಗೆ 46 ರನ್‌ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ ಹಾಗೂ ಕ್ರಿಸ್ ವೋಕ್ಸ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.


ಸ್ಕೋರ್‌: ಪಾಕಿ​ಸ್ತಾನ 139/2 (ಮೊ​ದಲ ದಿನದಾಟ ಮುಕ್ತಾಯಕ್ಕೆ​)