ಕಾಬೂಲ್(ಜು.12): ಆಫ್ಘಾನಿಸ್ತಾನದ 21 ವರ್ಷದ ಕ್ರಿಕೆಟಿಗ ರಶೀದ್ ಖಾನ್ ಇದೀಗ ಮದುವೆ ಮಾತನಾಡಿದ್ದಾರೆ. ಕ್ರಿಕೆಟ್‌ ಕರಿಯರ್ ಕುರಿತು ಹೆಚ್ಚು ಗಮನ ಕೇಂದ್ರೀಕರಿಸಿರುವ ರಶೀದ್ ಖಾನ್ ಮದುವೆ ಕುರಿತು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಮದುವೆ ಕುರಿತು ಹಲವು ಪಶ್ನೆಗಳನ್ನು ಎದುರಿಸಿರುವ ರಶೀದ್ ಖಾನ್ ಇದೀಗ ತಾವು ಮದುವೆಯಾಗಲು ಒಂದು ಕಂಡೀಷನ್ ಹಾಕಿ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.

ರಶೀದ್ ಖಾನ್ ದಾಳಿಗೆ ಐರ್ಲೆಂಡ್ ಧೂಳಿಪಟ: ಟಿ20 ಸರಣಿ ಕ್ಲೀನ್’ಸ್ವೀಪ್...

ಆಫ್ಘಾನಿಸ್ತಾನ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲಬೇಕು ಬಳಿಕ ಮದುವೆಯಾಗುತ್ತೇನೆ ಎಂದು ರಶೀದ್ ಖಾನ್ ಅಜಾದಿ ರೇಡಿಯೋಗಿ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

ಅಫ್ಘಾನಿಸ್ತಾನ ಇದುವರೆಗೆ 2 ಏಕದಿನ ವಿಶ್ವಕಪ್ ಹಾಗೂ 4 ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆಡಿದೆ. ಆದರೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ನಿಗದಿತ ಓವರ್ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ಬಲಿಷ್ಠ ತಂಡವಾಗಿ ಮಾರ್ಪಡುತ್ತಿದೆ. ಹೀಗಾಗಿ ಆಫ್ಘಾನಿಸ್ತಾನ ತಂಡ ವಿಶ್ವಕಪ್ ಗೆಲುವಿನ ಮೇಲೆ ಕಣ್ಣಿಟ್ಟಿದೆ. 

ರಶೀದ್ ಖಾನ್ ಜಗತ್ತಿನ ಶ್ರೇಷ್ಠ ಬೌಲರ್ ಎಂದ ಆಸೀಸ್ ಆಲ್ರೌಂಡರ್.

21 ವರ್ಷದಲ್ಲೇ ರಶೀದ್ ಖಾನ್ ಅಫ್ಘಾನಿಸ್ತಾನ ಸೇರಿದಂತೆ ಇತರ ದೇಶದಲ್ಲಿ ಸ್ಟಾರ್ ಪ್ಲೇಯರ್ ಆಗಿ ಮಿಂಚಿದ್ದಾರೆ. ಐಪಿಎಲ್ ಟೂರ್ನಿ, ಬಿಗ್‍ಬ್ಯಾಶ್ ಟೂರ್ನಿ ಸೇರಿದಂತೆ ಲೀಗ್ ಟೂರ್ನಿಗಳಲ್ಲಿ ರಶೀದ್ ಮಿಂಚಿನ ಪ್ರದರ್ಶನ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನೆ ಮಾತಾಗಿದ್ದಾರೆ.